ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, March 10, 2018

CRIME INCIDENTS 10-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:10-03-2018 ರಂದು ವರದಿಯಾದ ಪ್ರಕರಣಗಳು

1 ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ದೇವನೂರ ಗ್ರಾಮದ ಬಸ್ ಸ್ಟಾಪ್ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಆರೋಪಿತನಾದ ವೆಂಕಪ್ಪಾ ಮಾಯಗಿರಿ ಇನತು ಅವಾಚ್ಯ ಶಬ್ದಗಳಿಂದ ಬೈದಾಡಿ ಬರ್ರಿ ನೋಡೊಕೊತೇನಿ ಅಂತಾ ಹೋಗಿ ಬರುವ ಜನರಿಗೆ ಒದರಾಡುವುದು, ಚೀರಾಡುವುದು ಮಾಡುತ್ತಾ ಹೊಡೆಯುತ್ತೇನೆ, ಬಡೆಯುತ್ತೇನೆ ಅಂತಾ ಅವರ ಮೈಮೇಲೆ ಏರಿ ಹೋಗುವುದು ಮಾಡುತ್ತಿದ್ದು ಸದರಿಯವನಿಗೆ ಹಿಗೇಯೇ ಬಿಟ್ಟಲ್ಲಿ ಯಾರದಾದರೂ ಮೇಲೆ ಎರಗಿ ಹೋಡೆ ಬಡೆ ಮಾಡಿ ರಕ್ತ ಪಾತ ಮಾಡಿ ಸಾರ್ವಜನಿಕ ಶಾಂತತ ಭಂಗವನ್ನುಂಟು ಮಾಡುವುದಲ್ಲದೇ ಯಾವುದಾದರೂ ಸಂಜ್ಞೆಯ ಅಪರಾಧವೆಸಗಿ ಘೋರ ಸ್ವರೂಪದ ಗುನ್ನೆ ಮಾಡುವ ಸಾಧ್ಯತೆಗಳು ಇದ್ದುದ್ದರಿಂದ ಸದರಿಯವನ ಮೇಲೆ ಗುನ್ನಾಣಂ 65/2018 ಕಲಂ 110 (ಈ)(ಜಿ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಅಮ್ಮಿನಭಾವಿ ಗ್ರಾಮದ ಪಂಪಹೌಸ  ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಇವರು ತಮ್ಮ ಸ್ವಂತ ಪಾಯ್ದೆಗೋಸ್ಕರ ಯಾವುದೇ ಪಾಸು ವ ಪರ್ಮಿಟ ಇಲ್ಲದೇ ಸರಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಉದ್ದೇಶದಿಂದ  ತನ್ನ  ತಾಬಾದಲ್ಲಿ ಅಕ್ರಮವಾಗಿ ಒಂದು ಗುಟಕಾ ಕೈ ಚೀಲದಲ್ಲಿ 01) ಒಟ್ಟು 96 ಹೈವರ್ಡ್ಸ ಚಿಯರ್ಸ್ ವಿಸ್ಕಿ ತುಂಬಿದ 90 ಎಂ.ಎಲ್  ಅಳತೆಯ ಮದ್ಯದ ಟೆಟ್ರಾ ಪಾಕೀಟಗಳು ಅ:ಕಿ: 2784/- ನೇದವುಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವಾಗ ಆರೋಪಿ ನಂ 1 ನೇದವನಾದ ಸತೀಶ ತಂದೆ ಲಕ್ಷ್ಮಣ ಮಲ್ಲೂರ   ವಯಾ-32 ವರ್ಷ, ಜಾತಿ-ಹಿಂದು ಭಜಂತ್ರಿ ಉದ್ಯೋಗ-ಕೂಲಿ ಸಾ:ಶೆಟ್ಲಮೆಂಟ 2 ನೇ ಕ್ರಾಸ್ ಹನಮಂತ ದೇವರ ಗುಡಿ ಹತ್ತಿರ ಹುಬ್ಬಳ್ಳಿ ಹಾಲಿ ಅಮ್ಮಿನಭಾವಿ ಗ್ರಾಮದ ಸರಕಾರಿ ಶಾಲೆ ಹತ್ತಿರ ಸಿಕ್ಕುಇದ್ದು 2. ಪರಸರಾಮ ತಂದೆ ಹನಮಂತಪ್ಪ ಬಜಂತ್ರಿ ವಯಾ-52 ವರ್ಷ, ಜಾತಿ-ಹಿಂದು ಭಜಂತ್ರಿ ಉದ್ಯೋಗ-ಕೂಲಿ  ಸಾ: ಅಮ್ಮಿನಭಾವಿ ಗ್ರಾಮದ ಸರಕಾರಿ ಶಾಲೆ ಹತ್ತಿರ  ಇವನು ಓಡಿ ಹೋಗಿದ್ದು ಇರುತ್ತದೆ.ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 86/2018 ಕಲಂ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:, ಕುಸುಗಲ್ ಗ್ರಾಮದ ಬಸಪ್ಪ ಚನ್ನಬಸಪ್ಪ ಬೆಳಗಲಿ ಇವರ ಹೊಲದಲ್ಲಿ ಮೃತ ಲಕ್ಷ್ಮಣ ಶಿವಪ್ಪ ಪೂಜಾರ ಸಾ. ಭದ್ರಾಪೂರ ಪೊ. ಪಾಳಾ ತಾ. ಮುಂಡಗೋಡ ಇವರು ಯಾವುದೋ ರೋಗದಿಂದ ಬಳಲಿ ಮೃತಪಟ್ಟಿದ್ದು ವಿನಃ ಸದರಿಯವರ ಮರಣದಲ್ಲಿ ತನ್ನದಾಗಲಿ, ತನ್ನ ಮನೆಯವರದಾಗಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಮೃತನ ಹೆಂಡತಿ ಫಿಯಾಱದಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 15/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಶೇರೆವಾಡ ಗ್ರಾಮದ ಗಾಂದಿ ಪ್ಲಾಟ್ ನ ನರಸಪ್ಪನವರ ಮನೆಯ ಮುಂದೆ ರಸ್ತೆ ಗದಿಗೇಪ್ಪ ಬಸವಣ್ಣೆಪ್ಪ ಶಿರಗುಪ್ಪಿ ಸಾಃ ಯಲಿವಾಳ ಇತನು ಅಶೋಕ ಲೈಲ್ಯಾಂಡ್ ದೋಸ್ತ ಗೊಡ್ಸ ವಾಹನ ನಂಬರ ಕೆ.ಎ-25/ಡಿ-6588 ನೇದ್ದರಲ್ಲಿಯ ಹುಲ್ಲನ್ನು ಇಳಿಸುತ್ತಿರುವಾಗ  ಸದರ ವಾಹನದ ಚಾಲಕ ಮಂಜುನಾಥ ನಿಂಗಪ್ಪ ನವಲಗುಂದ ಸಾಃ ಯಲಿವಾಳ ಇತನು ಹುಲ್ಲನ್ನು ಕೆಳಗೆ ಇಳಿಸುತ್ತಿರುವ ಗದಿಗೇಪ್ಪನನ್ನು ಗಮನಿಸದೆ ಒಮ್ಮಿಂದಒಮ್ಮಲೇ ಜೋರಿನಿಂದ ರಿವರ್ಸ ತಗೆದುಕೊಂಡು ಪಿರ್ಯಾದಿ ಗದಿಗೇಪ್ಪನಿಗೆ ಢಿಕ್ಕಿ ಮಾಡಿ ಅಪಘಾತಪಡಿಸಿ ಯಡಗಾಲ ಮೊಣಕಾಲಿನ ಕೆಳಗೆ ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 84/2018 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹಳ್ಯಾಳ ತಂದೆ ಶಿವಪುತ್ತರಪ್ಪ ಕಲ್ಲಪ್ಪ ಹೂಗಾರ ವಯಾಃ 64 ವರ್ಷ ಸಾಃ ಹಳ್ಯಾಳ ಇವರು ಸರಾಯಿ ಕುಡಿಯುವ ಚಟದವರಿದ್ದು,ಆಗಾಗ ಮನೆ ಬಿಟ್ಟು ಹೋಗುವುದು, ಎರಡು ಮೂರು ತಿಂಗಳ ನಂತರ ಮತ್ತೆ ಮನೆಗೆ  ಬರುತ್ತಿದ್ದರು. ದಿನಾಂಕಃ 15/10/2017 ರಂದು ಮುಂಜಾನೆ 09-00 ಗಂಟೆಗೆ ಪಿರ್ಯಾದಿಯ ತಂದೆ ಶಿವಪುತ್ತರಪ್ಪ ಕಲ್ಲಪ್ಪ ಹೂಗಾರ ಇವರು ಮನೆಯಲ್ಲಿ ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವರು ರಾತ್ರಿಯಾದರೂ ಮನೆಗೆ ಬಾರದೆ ಇದ್ದ ಕಾರಣ ಮತ್ತು ಮನೆಯ ಜನರು ಇಲ್ಲಿಯ ವರೆಗೆ ಎಲ್ಲ ಕಡೆಗೆ ಹುಡುಕಾಡಿದರೂ ಸಿಕ್ಕಿರುವದಿಲ್ಲಾ , ಆದ ಕಾರಣ ಸದರಿ ಕಾಣೆಯಾದವನ ಮಗ ಈರಪ್ಪ ಶಿವಪುತ್ತರಪ್ಪ  ಹೂಗಾರ ಇವರು ನಮ್ಮ ಕಾಣೆಯಾದ ನಮ್ಮ ತಂದೆ ಶಿವಪುತ್ತರಪ್ಪ ಕಲ್ಲಪ್ಪ ಹೂಗಾರ ವಯಾಃ 64 ವರ್ಷ ಸಾಃ ಹಳ್ಯಾಳ ಇವರನ್ನು ಹುಡುಕಿಕೊಡಬೇಕೆಂದು ಪಿರ್ಯಾದಿ ನೀಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 85/2018 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ