ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, March 12, 2018

CRIME INCIDENTS 12-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:12-03-2018 ರಂದು ವರದಿಯಾದ ಪ್ರಕರಣಗಳು

1.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರದ ಮಾನಕಾಪೂರದ ಡೌಗಿ ನಾಲಾ ಹತ್ತಿರ ಸಾರ್ವಜನಿಕ ರಸ್ತೆಯ ಬದಿಯಲ್ಲಿ 1]  ಅಲ್ಲಾಭಕ್ಷ ತಂದೆ ರಫೀಕ ಶೇಖ, ವಯಾ 28 ಜಾತಿ ಮುಸ್ಲಿಂ ಉದ್ಯೋಗ ಸ್ಟೇಷನರಿ ವ್ಯಾಪಾರ ಸಾ ಃ ಅಳ್ನಾವರ ತಿಲಕ ನಗರ 2] ಬಸಯ್ಯ ತಂದೆ ದುಂಡಯ್ಯ ಮರಗಯ್ಯನವರಮಠ, ವಯಾ 42 ಜಾತಿ ಹಿಂದೂ ಲಿಂಗಾಯತ ಉದ್ಯೋಗ ಇಲೆಕ್ಟ್ರಿಷಿಯನ್ ಸಾ ಃ ಅಳ್ನಾವರ ವಿದ್ಯಾನಗರ 3] ಈರಣ್ಣಾ ತಂದೆ ಶಿವರಾಯ ಅವರೊಳ್ಳಿ, ವಯಾ 37 ಜಾತಿ ಹಿಂದೂ ಲಿಂಗಾಯತ ಉದ್ಯೋಗ ಪೆಂಟಿಂಗ್ ಕೆಲಸ ಸಾ ಃ ಹಳಿಯಾಳ ಅಂಬೇಡ್ಕರ 4] ನಾಷೀರ ತಂದೆ ಲಾಲಾಸಬ ದುರ್ಗದ, ವಯಾ 35 ಜಾತಿ ಮುಸ್ಲಿಂ ಉದ್ಯೋಗ ಮಾವಿನ ಹಣ್ಣಿನ ವ್ಯಾಪಾರ ಸಾ ಃ ತೇರಗಾಂವ ತಾ ಃ ಹಳಿಯಾಳ 5] ರುದ್ರಪ್ಪಾ ತಂದೆ ಗದಿಗೆಪ್ಪಾ ಮಾಸ್ತಮರಡಿ, ವಯಾ 35 ಜಾತಿ ಹಿಂದೂ ವಾಲ್ಮೀಕಿ ಉದ್ಯೋಗ ಮಾವಿನಕಾಯಿ ವ್ಯಾಪಾರ ಸಾ ಃ ಮದ್ನಳ್ಳಿ ತಾ ಃ ಹಳಿಯಾಳ 6] ಮಹ್ಮದಹುಸೇನ ತಂದೆ ಮಹ್ಮದಅಲಿ ದುಗರ್ಾಡಿ, ವಯಾ 35 ಜಾತಿ ಮುಸ್ಲಿಂ ಉದ್ಯೋಗ ಕೂಲಿ ಕೆಲಸ ಸಾ ಃ ಹಳಿಯಾಳ ಕೆ.ಇ.ಬಿ. ಕಚೇರಿ ಹತ್ತಿರ ಇವರುಗಳು ತಮ್ಮ ತಮ್ಮ ಫಾಯದೇಗೋಸ್ಕರ 52 ಇಸ್ಪೇಟ್ ಎಲೆಗಳ ಸಹಾಯದಿಂದ  ಅಂದರ್-ಬಾಹರ್ '' ಎಂಬ ಜೂಜಾಟ ಆಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಸದರಿ ಆಪಾದಿತರಿಂದ ರೋಖ ರಕಂ 10,655/- ರೂ. ಗಳು ಹಾಗೂ 52 ಇಸ್ಪೇಟ್ ಎಲೆಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಅಳ್ನಾವರ ಪೊಲೀಸ ಠಾಣೆಯಲ್ಲಿ ಗುನ್ನಾನಂ 19/2018 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಬಸಾಪುರ  ಗ್ರಾಮದ ನಾಗಪ್ಪಾ ತಳವಾರ ಇತನು ಆರೋಪಿತನ ಮನೆಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ತನ್ನ ಬಳಿಗೆ ಯಾವುದೇ ಪಾಸ್ ಹಾಗು ಪರ್ಮಿಟ್ ಇಲ್ಲದೇ ಅಕ್ರಮವಾಗಿ ತನ್ನ ಫಾಯದೇಗೋಸ್ಕರ 180 ಎಮ್.ಎಲ್ ಅಳತೆಯ ಒಟ್ಟು 30 ಓಲ್ಟ ಟಾವರ್ನ ಕಂಪನಿಯ ವಿಸ್ಕಿ ತುಂಬಿದ ಟೆಟ್ರಾ ಪಾಕೀಟುಗಳು. ಒಟ್ಟು ಅಕಿ 2070/-ರೂ ನೇದ್ದವುಗಳನ್ನು ಒಂದು ಚೀಲದಲ್ಲಿ ಇಟ್ಟುಕೊಂಡು  ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 28/2018 ಅಬಕಾರಿ ಕಾಯ್ದೆ 32.34 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ ತನ್ನ ಲಾರಿ ನಂ.ಕೆಎ-25-ಬಿ-6448 ಅ.ಕಿ. 8,00,000=00 ನೇದ್ದನ್ನು ಶಿರಸಂಗಿಯಿಂದ ಶಿರೂರ ಇನಾಮಹೊಂಗಲ ರಸ್ತೆ ಮಾರ್ಗವಾಗಿ ನಡೆಯಿಸಿಕೊಂಡು ಹೊರಟಾಗ ಹಳ್ಳದ ಬ್ರಿಡ್ಜ ಮೇಲೆ ಲಾರಿ ಬಂದ್ ಬಿದ್ದಾಗ ಅದನ್ನು ಅಲ್ಲೆ ಬಿಟ್ಟು ಫಿರ್ಯಾದಿಯು ಇನಾಮಹೊಂಗಲಕ್ಕೆ ಬಂದು ಮೇಸ್ತ್ರಿಗೆ ಹುಡುಕಾಡಿ ವಾಪಸ್ಸು ಲಾರಿ ಹತ್ತಿರ ರಾತ್ರಿ 12-30 ಗಂಟೆಗೆ ಹೋದಾಗ ಸದರ ಲಾರಿ ಕಳುವಾಗಿದ್ದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 26/2018 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಗುನ್ನಾನಂ 88/2018.89/2018 ಮುಂಜಾಗೃತ ಕ್ರಮವಾಗಿ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ ಮೃತ ದುರಗಪ್ಪ ತಂದೆ ಹನಮಂತ ಮಾದರ ವಯಾ 26 ವರ್ಷ ಸಾ!! ಗುಡಿಸಾಗರ ಇತನಿಗೆ 1 ವರ್ಷದಿಂದ  ಹೊಟ್ಟೆ ನೋವಿನ ಬೆನ್ನೆ ಇದ್ದು ಗಾಂವಟಿ ಉಪಚಾರ ಮಾಡಿಸಿದರು ಅರಾಮ ಆಗಿರಲ್ಲಿಲ್ಲಾ ಸದರಿಯವನು ತನ್ನಿಗಿದ್ದ ಹೊಟ್ಟೆ ನೋವಿನ ಬೆನೆ ತಾಳಲಾರದೆ ದಿನಾಂಕ:11-03-2018 ರ ರಾತ್ರಿ 11.30 ಗಂಟೆಯಿಂದ ಈ ದಿವಸ ದಿನಾಂಕ:12-03-2018 ರ ಬೆಳಗಿನ 6.30 ಗಂಟೆ ನಡುವಿನ ಅವಧಿಯಲ್ಲಿ ತನ್ನಷ್ಟಕ್ಕೆ ತಾನೇ ತಿಪ್ಪವ್ವ ಉಳ್ಳಾಗಡ್ಡಿ ಇವರ ಹೊಲದಲ್ಲಿಯ ಬನ್ನಿ ಗಿಡಕ್ಕೆ ವಾಯರ ಹಗ್ಗದಿಂದ ಉರುಲು ಹಾಕಿಕೊಂಡು ಮರಣ ಹೊಂದಿರುತ್ತಾನೆ ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವದಿಲ್ಲಾ ಫಿಯಾಱಧಿ ನೀಡಿದ್ದು ಇರುತ್ತದೆ  ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 08/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಾರಿಹಾಳ ಗ್ರಾಮದ, ಪಾಲಿಟೆಕ್ನಿಕ್ ಬಿಲ್ಡಿಂಗ್ ಮೇಲೆ, ಮೃತ ಚೇತನ ಕುಮಾರ ತಂದೆ ಪ್ರಭು ಗೊಟಗೋಡಿ ವಯಾ. 24 ವರ್ಷ ಸಾ. ತಾರಿಹಾಳ, ವಾಜಪೇಯ ನಗರ, ಇವನು ತನ್ನಷ್ಟಕ್ಕೆ ತಾನೇ ಯಾವುದೋ ವಿಷ ಸೇವನೆ ಮಾಡಿದ್ದು, ಸದರಿಯವನಿಗೆ ಉಪಚಾರ ಕುರಿತು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಉಪಚಾರಕ್ಕೆ ಅಂತ ಎಸ್.ಡಿ.ಎಂ. ಆಸ್ಪತ್ರೆಗೆ ದಾಖಲಿಸಿದ್ದು, ಉಪಚಾರ ಫಲಿಸದೇ ಈ ದಿವಸ ದಿನಾಂಕ: 12-03-2018 ರಂದು ಬೆಳಗಿನ ಜಾವ 2-53 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇರುತ್ತದೆ. ಸದರಿಯವನು ತನ್ನಷ್ಟಕ್ಕೆ ತಾನೇ ಯಾವುದೋ ವಿಷ ಸೇವನೆ ಮಾಡಿ ಮೃತಪಟ್ಟಿದ್ದು ವಿನಃ ಸದರಿಯವನ ಮರಣದಲ್ಲಿ ತನ್ನದಾಗಲಿ ತನ್ನ ಮನೆಯವರದಾಗಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಮೃತನ ಸಹೋದರನು ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ17/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.