ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, March 13, 2018

CRIME INCIDENTS 13-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:13-03-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಹಾಳಕುಸಗಲ್ಲ ಗ್ರಾಮದ ಎಲ್.ಪಿ.ಟಿ ನಂ 08/2018 ನೇದ್ದರ ಅರ್ಜಿದಾರ ಮುತ್ತಪ್ಪ ದೊಡ್ಡಲಿಂಗಪ್ಪ ನಿಡುವಣಿ ಸಾ!! ಹಾಳಕುಸಗಲ್ ಈತನು 6 ವರ್ಷಗಳ ಹಿಂದೆ ತನ್ನ ಹೊಲದಲ್ಲಿನ ಗೋವಿನ ಜೋಳದ ತೆಣೆ ಸುಟ್ಟ ಬಗ್ಗೆ ನವಲಗುಂದ ಠಾಣೆಯಲ್ಲಿ ಪಿರ್ಯಾದಿ ನೀಡಿದ್ದು ಈಗ ಮಾನ್ಯ ನ್ಯಾಯಾಲಯದ ವಿಚಾರಣೆಯಲ್ಲಿರುತ್ತದೆ. 3ಜನರ ಕೂಡಿಕೊಂಡು ಅರ್ಜಿದಾರನಿಗೆ ಸಾಕ್ಷಿ ಹೇಳದಂತೆ ತಂಟೆ ತಕರಾರು ಮಾಡುತ್ತಾ ಬಂದಿದ್ದು ಸದರಿ ಎದರುಗಾರರಿಗೆ ಬಿಟ್ಟರೆ ಇದೇ ಕಾರಣವಾಗಿ ಯಾವ ವೇಳೆಯಲ್ಲಿ ಏನು ಮಾಡುತ್ತಾರೊ ಹೇಳಲು ಬಾರದ್ದರಿಂದ ಗುನ್ನಾನಂ 27/2018 ಕಲಂ ಮುಂಜಾಗೃತ ಕ್ರಮವಾಗಿ 107 ಸಿ. ಆರ್.ಪಿ. ಸಿ151 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ ಠಾಣಾ ವ್ಯಾಪ್ತಿಯ: ಗರಗ ಗ್ರಾಮದ ವಿನಾಯಕ ಇವರ  ಮನೆಯಲ್ಲಿ ಯಾರೋ ಕಳ್ಳರು ದಿನಾಂಕಃ 11-03-2018 ರಂದು ಮದ್ಯರಾತ್ರಿ 1-30 ಗಂಟೆಯಿಂದಾ ಬೆಳಗಿನ 5-00 ಗಂಟೆಯ ನಡುವಿನ ಅವಧಿಯಲ್ಲಿ ನಮ್ಮ ಮನೆಯ ಮುಂಚಿ ಬಾಗಿಲದ ಕೀಲಿ ಮುರಿದು ಒಳಹೊಕ್ಕು ಮನೆಯಲ್ಲಿಯ ಕೀಲಿ ಹಾಕಿದ್ದ ಟ್ರೇಜರಿ ಬಾಗಿಲನ್ನು ಮುರಿದು ಅದರಲ್ಲಿ ಇಟ್ಟ ರೋಖ ರಕಂಃ 6000/-ರೂ ಮತ್ತು 1,15,500/-ರೂ ಕಿಮ್ಮತ್ತಿನ ಬಂಗಾರ, ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 380.457 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕರಡಿಗುಡ್ಡ ಗ್ರಾಮದ ಆರೋಪಿತನಾದ ಬಸಪ್ಪ ಚನ್ನಬಸಪ್ಪ ಮಾಟರ ಇವನು ತನ್ನ ಹೆಂಡಿತಿ ಲಲಿತಾ ಕೋಂ ಬಸಪ್ಪ ಮಾಟಾರ ವಯಾಃ45 ವರ್ಷ ಜಾತಿಹಿಂದೂ ಲಿಂಗಾಯತ ಉದ್ಯೋಗಃಅಂಗನವಾಡಿ ಸಹಾಯಕಿ  ಸಾಃಗೌಡ್ರ ಓಣಿ ಕರಡಿಗುಡ್ಡ ಇವಳೊಂದಿಗೆ ಆಗ್ಗಾಗ ತನ್ನ ಖರ್ಚಿಗೆ ಹಣ ಕೊಡು ಅಂತಾ ಜಗಳ ತೆಗೆಯುತಿದ್ದನು ಆದರೆ ಕಳೆದ ಮೂರು ತಿಂಗಳಿಂದ ತನ್ನ ಖರ್ಚಿಗೆ ಹಣ ಕೊಟ್ಟಿಲ್ಲ ಅಂತಾ ಸಿಟ್ಟಾಗಿ ದಿಃ13-03-2018 ರಂದು ಬೆಳಗಿನ ಜಾವ 01-30 ಗಂಟೆಗೆ  ತಮ್ಮ ಮನೆಯ ಅಡುಗೆ ಕೊಣೆಯಲ್ಲಿ ತನ್ನ ಹೆಂಡತಿ ಲಲಿತಾ ಕೋಂ ಬಸಪ್ಪ ಮಾಟಾರ ವಯಾಃ45 ವರ್ಷ ಇವಳಿಗೆ ಕುಡಗೋಲಿನಿಂದ ಕುತ್ತಿಗೆಗೆ ಕೈಗೆ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 91/2018 ಕಲಂ 302 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ.

4.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಸೋಲಾರಗೊಪ್ಪ ಗ್ರಾಮದಲ್ಲಿ ಮಹಾದೇವಪ್ಪಾ ಬಳಿಗಾರ ಇತನು  ರೌಡಿ ಶೀಟರ್ ಇದ್ದು ಸದರಿಯವನು ಬೀಟ ಸಿಬ್ಬಂದಿಯು ಬೀಟ ಸಂಚರಣೆ ಕಾಲಕ್ಕೆ ಹೋದಾಗ ಅವರಿಂದ ತಪ್ಪಿಸಿಕೊಂಡು ಹೋಗುವದು ಮಾಡುತ್ತಿದ್ದು ಈ ಬಗ್ಗೆ ಗ್ರಾಮಸ್ಥರಲ್ಲಿ ವಿಚಾರಿಸಲಾಗಿ ಸದರಿಯವನು ಅಕ್ರಮವಾಗಿ ಸರಯಾಯಿ ಮಾರಾಟ ಮಾಡುತ್ತಿರುವದಾಗಿ ತಿಳಿಸಿದ ಪ್ರಕಾರ ಎದರುಗಾರನ ಮನೆಗೆ ಚೆಕ್ ಮಾಡಲಾಗಿ ಸದರಿಯವನ ಮನೆಯಲ್ಲಿ ಸರಾಯಿ ಪಾಕೀಟುಗಳು ಸಿಕ್ಕಿರುವದಿಲ್ಲಾ, & ಅವನ ಮನೆಯ ಪಕ್ಕಕ್ಕೆ ಖಾಲಿ ಸರಾಯಿ ಪಾಕೀಟುಗಳು ಬಿದ್ದಿದ್ದು ಸದರಿಯವನಿಗೆ ಹಾಗೆ ಬಿಟ್ಟಲ್ಲಿ ಗ್ರಾಮದಲ್ಲಿ ಸರಾಯಿ ಮಾರಾಟ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡಿ ಗ್ರಾಮದಲ್ಲಿ ಶಾಂತಿ ಸುವ್ಯೆವಸ್ಥೆಯನ್ನು ಹಾಳು ಮಾಡಿ ಇನ್ನು ಹೆಚ್ಚಿನ ಘೋರ ಅಪರಾಧ ಎಸಗುವ ಸಂಭವ ಇದ್ದರಿಂದ ಸದರಿಯವನ ಮೇಲೆ ಗುನ್ನಾನಂ 91/2018 ಕಲಂ 110(ಇ)(ಜಿ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಇಂಗಳಹಳ್ಳಿ ಕ್ರಾಸ್ ನಲ್ಲಿ, ಹುಬ್ಬಳ್ಳಿ ಗದಗ ರಸ್ತೆ ಮೇಲೆ, ಆರೋಪಿ ಟ್ಯಾಂಕರ ಲಾರಿ ನಂಬರ ಕೆಎ-19-ಬಿ-3408 ನೇದ್ದರ ಚಾಲಕ ದಾವಲಸಾಬ ತಂದೆ ಇಮಾಮಸಾಬ ಸಾ. ಗೋರಿಗುಡ್ಡ, ಕಂಕನಾಡಿ, ಮಂಗಳೂರು ಇವನು ಟ್ಯಾಂಕರ ಲಾರಿ ನಂಬರ ಕೆಎ-19-ಬಿ-3408 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ, ಗದಗ ಕಡೆಯಿಂದ ಹುಬ್ಬಳ್ಳಿ ಕಡೆಗೆ, ಮಕ್ತುಂಹುಸೇನ ಕಾಶಿಮಸಾಬ ಮೊಮಿನ್ ಸಾ. ಶಿರಹಟ್ಟಿ ಓಣಿ, ಗದಗ-ಬೆಟಗೇರಿ ಇವನು ಚಾಲನೆ ಮಾಡಿಕೊಂಡು ಬರುತ್ತಿದ್ದ ಬೊಲೆರೋ ಮ್ಯಾಕ್ಸಿಟ್ರಕ್ ವಾಹನ ನಂಬರ ಕೆಎ-25-ಎಎ-7767 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ, ಬೊಲೆರೋ ವಾಹನದ ಚಾಲಕ ಮಕ್ತುಂಹುಸೇನ ಕಾಶಿಮಸಾಬ ಮೊಮಿನ್ ಇವನಿಗೆ ಸಾದಾ ಗಾಯಪಡಿಸಿ, ಬಶೀರಅಹ್ಮದ ಹೊನ್ನೂರಸಾಬ ಚಿನ್ನೂರ ಸಾ. ಗಣೇಶ ನಗರ, ಕನ್ನಾಳ ಅಗಸಿ, ಗದಗ ಬೆಟಗೇರಿ ಇವನಿಗೆ ತೀವ್ರ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿಗುನ್ನಾನಂ 93/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರತ್ತದೆ.