ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, March 18, 2018

CRIME INCIDENTS 18-03-2018ಧಾರವಾಡ ಜಿಲ್ಲೆಯಲ್ಲಿ ದಿನಾಂಕ 18-03-2018 ರಂದು ವರದಿಯಾದ ಪ್ರಕರಣಗಳು

1.ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿ:  ದಿ : 17-03-2018 ರಂದು ಸಾಯಂಕಾಲ 19-50 ಗಂಟೆಗೆ  ನಜೀರಅಹ್ಮದ ತಂದೆ ಇಮಾಮಸಾಬ ಗಾಂಜಿ, ಹಾಗೂ ರವಿ ಮಡಿವಾಳಪ್ಪಾ ಮ್ಯಾಗಡಿ ಸಾ ಃ ಲಾಳಗಟಟಿ ಇವರು ಮೋಟಾರ ಸೈಕಲ್ ನಂ. ಕೆಎ - 25/ ಇಡಿ - 9033 ನೇದ್ದರಲ್ಲಿ ದೇವರ ಹುಬ್ಬಳ್ಳಿಯಿಂದ ದೇವಗಿರಿ ಕಡೆಗೆ ಹೋಗುತ್ತಿರುವಾಗ  ಎದುರುಗಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ ನಂ. ಆರ್ ಜೆ - 17/ ಆರ್ ಎ - 4842 ನೇದ್ದರ ಚಾಲಕನಾದ ಸೈಬಾಜ ಮುಲ್ಲಾ ಸಾ ಃ ದೇವರ ಹುಬ್ಬಳ್ಳಿ ಇವನು ತನ್ನ ವಾಹನವನ್ನು ಅತೀ ವೇಗವಾಗಿ ನಡೆಸಿ ಡಿಕ್ಕಿ  ಮಾಡಿ ಅಪಘಾತಪಡಿಸಿ ನನ್ನ ತಮ್ಮನಿಗೆ ಮತ್ತು ರವಿ ಮ್ಯಾಗಡಿ ಇವನಿಗೆ ಭಾರೀ ದುಃಖಾಪತ ಪಡಿಸಿದ ಇರುತ್ತದೆ. ಈ ಕುರಿತು ಅಳ್ನಾವರ್ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 22/2018 ಕಲಂ 279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿ:ದಿನಾಂಕಃ 18-03-2018 ರಂದು 1430 ಗಂಟೆಗೆ ಫಿರ್ಯಾದಿದಾರರು ಖುದ್ದಾಗಿ ಠಾಣೆಗೆ ಹಾಜರಾಗಿ ನೀಡಿದ ಹೇಳಿಕೆ ಫಿರ್ಯಾದಿಯಲ್ಲಿ ಆಪಾದಿತನಾದ ಅರವಿಂದ ತಂದೆ ಶ್ರೀಪಾದ ಪೂಜಾರ ಸಾಃ ಹಾವನೂರ ತಾಃಜಿಃಹಾವೇರಿ ಈತನು ತಾನು ಚಲಾಯಿಸುತ್ತಿದ್ದ ಬುಲೆಟ್ ಗಾಡಿ ನಂ ಕೆಎಃ25/ಇಡಬ್ಲ್ಯೂಃ 0768 ನೇದ್ದನ್ನು ದಿನಾಂಕಃ17-03-2018 ರ ರಾತ್ರಿ 8-30 ಗಂಟೆ ಸುಮಾರಿಗೆ ಫಿಃದಿಃ ಬಾಬತ್ ಮೋಟಾರ್ ಸೈಕಲ್ ಹಿಂದಿನಿಂದ ಅಂದರೆ ಬಸಾಪೂರ ಕ್ರಾಸ್ ಕಡೆಯಿಂದ ಸುಮಾರು 500 ಮೀಟರ್ ಅಂತರದಲ್ಲಿ ಪಶುಪತಿಹಾಳ ಕಡೆಗೆ ಅತೀ ಜೋರಿನಿಂದ ವ ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಅವನ ಮುಂದೆ ಹೊರಟಿದ್ದ ತಾವು ತಮ್ಮ ಕುರಿ ತರುಬಿದ ಸ್ಥಳಕ್ಕೆ ಹೊರಳುವಷ್ಟರಲ್ಲಿ ತಮ್ಮ ಹೀರೊ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ನಂಬರ ಕೆಎಃ26/ಯುಃ7016 ನೇದ್ದಕ್ಕೆ ಹಿಂದೆ ಬಲ ಸೈಡಿಗೆ ಡಿಕ್ಕೀ ಪಡಿಸಿ ಅದರಲ್ಲಿದ್ದ ತಮಗೆ ಸಾದಾ ವ ಭಾರೀ ಘಾಯ ಪಡಿಸಿ ತಾನೂ ಕೂಡ ಸಾದಾ ಹಾಗೂ ಒಳಪೆಟ್ಟು ನೋವುಗಳನ್ನು ಹೊಂದಿದ್ದು ಅವನ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಅಂತಾ ತಮ್ಮೊಂದಿಗೆ ಇದ್ದ ಕುರಿ ಹಿಂಡಿನಲ್ಲಿರುವ ತಮ್ಮ ಸಂಬಂಧಿಕರಲ್ಲಿ ಹಾಗೂ ತಮ್ಮ ಮನೆಯ ಜನರಲ್ಲಿ ವಿಚಾರಿಸಿ ಆಸ್ಪತ್ರೆಯಲ್ಲಿ ಉಪಚಾರ ಹೊಂದಿ ಈ ದಿವಸ ತಡವಾಗಿ ಬಂದು ನನ್ನ ಫಿರ್ಯಾದಿಯನ್ನು ಕೊಟ್ಟಿದ್ದು ಇರುತ್ತದೆ. ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 41/2018 ಕಲಂ 279,337,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.