ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, March 21, 2018

CRIME INCIDENTS 21-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:21-03-2018 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ - ಗದಗ  ರಸ್ತೆ ಹತ್ತಿರ ಬಸವರಾಜ ತಂದೆ ವೀರಪ್ಪ ಬಿಂಗಿ ವಯಾ: 32 ವರ್ಷ ಜಾತಿ: ಹಿಂದೂ ಕುರುಬರ ಉದ್ಯೋಗ: ಗ್ರಾಮ ಲೆಕ್ಕಾಧಿಕಾರಿ [ ಮಾಜಿ ಸೈನಿಕ ] ಸಾ: ಗದಗ ರಾಜೀವಗಾಂಧಿ ನಗರ , ಟೀಚರ್ಸ ಕಾಲೋನಿ ಮನೆ ನಂ. 52 ಇವನು ತಮ್ಮ ಹಿರೋ ಪ್ಲೇಜರ್ ಸ್ಕೂಟಿ ನಂ. ಕೆ.ಎ. 26/ ವಾಯ್. 0811 ನೇದ್ದನ್ನು ನಿಧಾನವಾಗಿ ನಡೆಸುತ್ತಾ ದುಂದೂರ ಗ್ರಾಮದ ಕ್ರಾಸ್ ಸಮೀಪ ಹೊಸದಾಗಿ ನಿರ್ಮಾಣ ಮಾಡುತ್ತಿರುವ ಬ್ರೀಡ್ಜನ ಗುತ್ತಿಗೆದಾರ [ ಆರೋಪಿ ] ಇವನು ರಸ್ತೆಯನ್ನು ಒಡೆದು, ಹೋಗಿ ಬರುವ ವಾಹನಗಳಿಗೆ ಸಂಚರಿಸುವ ಸಲುವಾಗಿ ಪರ್ಯಾಯವಾಗಿ ರಸ್ತೆಯ ಎಡ ಭಾಗದಲ್ಲಿ ಹೇಡಿ ಗರಸುನ್ನು ಹಾಕಿದ್ದು, ಫಿರ್ಯಾದಿಯು ಎದುರುಗಡೆಯಿಂದ ಬರುವ ಟಿಪ್ಪರಗೆ ಸೈಡ್ ಕೊಡಬೇಕೆಂದು ತನ್ನ ಎಡ ಸೈಡಿಗೆ ಸ್ಕೂಟಿ ತೆಗೆದುಕೊಂಡಾಗ, ಹೆಡಿ ಗರಸಿನ ಪರಿಣಾಮವಾಗಿ ಸ್ಕೂಟಿ ಗ್ರೀಡ್ ಆಗಿ ಕೆಡವಿ, ಭಾರಿ ಸ್ವರೂಪದಲ್ಲಿ ಗಾಯಗೊಂಡಿದ್ದು, ಬ್ರೀಡ್ಜ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರನು ಹೇಡಿ ಗರಸನ್ನು ಹಾಕಿದ ಪರಿಣಾಮದಿಂದಲೇ ಫಿರ್ಯಾದಿಯು ನಡೆಸಿಕೊಂಡು ಬರುವ ಸ್ಕೂಟಿ ಸ್ಕೀಡ್ ಆಗಿ ಬೀದ್ದು, ಭಾರಿ ಗಾಯ ಹೊಂದಲು ಕಾರಣಿಭೂತನಾಗಿರುತ್ತಾನೆ ಅಂತಾ ಲಿಖಿತ ದೂರು ನೀಡಿದ್ದನ್ನು  ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 30/2018 ಕಲಂ 338 ಣೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ನವಲಗುಂದ ಗ್ರಾಮದ ಹತ್ತಿರ ಆರೋಪಿ ವಸಂತ ಅರಭಾವಿ ಇವರು ಸಹಾಯಕ ಕೃಷಿ ನಿರ್ದೇಶಕರು ನವಲಗುಂದ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ:- 11-10-2017 ರಿಂದ ದಿನಾಂಕ:- 14-03-2018 ರ ನಡುವಿನ ಅವಧಿಯ ಆರ್ಥಿಕ ವರ್ಷದಲ್ಲಿ ನವಲಗುಂದ ತಾಲೂಕಿನ ಕೃಷಿ ಇಲಾಖೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಅಭಿವೃದ್ದಿಗಾಗಿ ಬಿಡುಗಡೆ ಮಾಡಿದ ಅನುಧಾನ ಪೂರ್ತಿ ಖರ್ಚು ಮಾಡದೆ ಉಳಿದಿದ್ದು ಇಲಾಖೆಯ ವಿವಿಧ ಯೋಜನೆಗಳಲ್ಲಿ ಭೌತಿಕ ಹಾಗೂ ಆರ್ಥಿಕ  ಪ್ರಗತಿಯನ್ನು ನಿಗಧಿತ ಗುರಿಯಂತೆ ಸಾಧನೆ ಮಾಡದೆ ನಿರಾಸಕ್ತಿ ತೋರಿ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡದ ಜನರ ಅಭಿವೃದ್ದಿಗಾಗಿ ಸರಕಾರ ಕೈಗೊಂಡ ಯೋಜನೆಗಳು ಅವರಿಗೆ ತಲುಪದೆ ವಿಫಲವಾಗುಂತೆ ಮಾಡಿದ್ದಲ್ಲದೆ ಸರಕಾರದ ಯೋಜನೆಗಳಾದ ಪರಿಶಿಷ್ಠ ಜಾತಿ / ಪರಿಶಿಷ್ಠ ಪಂಗಡದ ರೈತರಿಗೆ ಅನುಕೂಲವಾಗಲೆಂದು ಅನುಸೂಚಿತ ಜಾತಿಗಳ ಉಪಯೋಜನೆ  ಮತ್ತು ಬುಡಕಟ್ಟು ಉಪಯೋಜನೆಗಳನ್ನು ಜಾರಿಗೆ ತಂದಿದ್ದು ಸರಕಾರದಿಂದ ಸಾಕಷ್ಟು ಅನುಧಾನವನ್ನು ಸಹ ಬಿಡುಗಡೆ ಮಾಡಿದ್ದರೂ ಅನುಧಾನವನ್ನು ಅದೇ ವರ್ಷ ಕಡ್ಡಾಯವಾಗಿ ನಿಗಧಿತ ಗುರಿಯಂತೆ ಖರ್ಚು ಮಾಡದೆ ಕಾಯ್ದೆ ನಿಯಮ 24 ರಲ್ಲಿ ಸಾರ್ವಜನಿಕ ನೌಕರನಾಗಿರುವ ಅಧಿಕಾರಿಯಾಗಿ ಈ ಅಧಿನಿಯಮದ ಮೇರೆಗೆ ತಾನು ನಿರ್ವಹಿಸ ಬೇಕಾದ ಅಗತ್ಯಪಡಿಸಿರುವ ತನ್ನ ಕರ್ತವ್ಯಗಳನ್ನು ನಿರ್ಲಕ್ಷಿಸಿ ಕಾಯ್ದೆ ಉಲ್ಲಂಘನೆ  ಮಾಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 35/2018 ಕಲಂ SC AND THE ST  (PREVENTION OF ATTROCITIES) ACT, 1989 (U/s-4) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಗುನ್ನಾನಂ 96/2018 97/2018 ಮುಂಜಾಗೃತ ಕ್ರಮವಾಗಿ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.