ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, March 22, 2018

CRIME INCIDENTS 22-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:22-03-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಕಾರವಾರ ರಸ್ತೆ ಸಾತೋ ಶಹೀಧ ದರ್ಗಾ ಕ್ರಾಸ್ ಹತ್ತಿರ ರಸ್ತೆ ಮೇಲೆ ಗೂಡ್ಸ ಟ್ರಕ್ ನಂ ಕೆಎ24/ 8461 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ಲಾರಿಯನ್ನು ಕಲಘಟಗಿ ಕಡೆಯಿಂದ ಕಾರವಾರ ಕಡೆಗೆ ಅತಿಜೋರು ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಹೋಗಿ ತನ್ನ ಮುಂದೆ ಕಲಘಟಗಿ ಕಡೆಯಿಂದ ಸಾತೋ ಶಹೀದ ದರ್ಗಾ ಕಡೆಗೆ ಹೊರಟ ಪಿರ್ಯಾದಿ ತಮ್ಮ ಶೌಕತ್ ಇಂಗಳಹಳ್ಳಿ ಸಾ:ಹುಬ್ಬಳ್ಳಿ ಈತನ ಮೊಟಾರ ಸೈಕಲ್ಲ ನಂ ಕೆಎ25/ ಇವಾಯ್ 3549 ನೇದ್ದಕ್ಕೆ ಹಿಂದಿನಿಂದ ಡಿಕ್ಕಿಮಾಡಿ ಅಪಘಾತ ಪಡಿಸಿ ಬಲವಾದ ಗಾಯಪಡಿಸಿ ಉಪಚಾರಕ್ಕೆ ಸಾಗಿಸುವಾಗ ಮಾರ್ಗದಲ್ಲಿ ಮರಣಹೊಂದುವಂತೆ ಮಾಡಿ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 98/2018 ಕಲಂ 279.304(ಎ) ವಾಹನ ಕಾಯ್ದೆ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಗುನ್ನಾನಂ 55/2018.56/2018 ಮುಂಜಾಗೃತ ಕ್ರಮವಾಗಿ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.