ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, March 23, 2018

CRIME INCIDENTS 23-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:23-03-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ನುಗ್ಗಿಕೇರಿ ಗ್ರಾಮದಿಂದ ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆಗೆ ಕೂಡುವ ಕಚ್ಚಾ ರಸ್ತೆಯಲ್ಲಿ ಆರೋಪಿತರಾದ 01)ಯಲ್ಲಪ್ಪ ಪರಸಪ್ಪ ಶಿರುಂದ ವಯಾಃ50ವರ್ಷ ಜಾತಿಃಹಿಂದೂ ಮರಾಠ ಉದ್ಯೋಗಃಶೇತ್ಕಿ ಸಾಃನೆಲೊಗಲ ತಾಃಶಿರಟ್ಟಿ 02)ಮಂಜಪ್ಪ ತಂದೆ ಹನಮಂತಪ್ಪ ವಾಲೀಕಾರ ಸಾಃಸುಗನಳ್ಳಿ ತಾಃಶಿರಟ್ಟಿ   ಇವರು  ಲಾರಿ ನಂ KA-22-A-4256  ನೇದ್ದರಲ್ಲಿ  ಒಟ್ಟು 25000/- ರೂ ಕಿಮ್ಮತ್ತಿನ ಮರಳನ್ನು ತಮ್ಮ ಸ್ವಂತ ಪಾಯ್ದೆಗೋಸ್ಕರ ಯಾವುದೇ ಅಧಿಕೃತ ಪಾಸು ವ ಪರ್ಮಿಟ ಇಲ್ಲದೇ ಅಕ್ರಮವಾಗಿ ಎಲ್ಲಿಂದಲೋ ಕಳವು ಮಾಡಿ ಲಾರಿಯಲ್ಲಿ ಲೋಡ ಮಾಡಿ ಸಾಗಾಟ ಮಾಡುತ್ತಿರುವಾಗ ಮಾಲು ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 98/2018 ಕಲಂ 379 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಹುಬ್ಬಳ್ಳಿ ರಸ್ತೆ ತಡಸ ಕ್ರಾಸ್ ಹತ್ತಿರ ಆರೋಪಿತನಾದ ಚಂದ್ರು ಕೃಷ್ಣಪ್ಪ ಕಬ್ಬೇರ ವಯಾ 35 ವರ್ಷ ಸಾ: ಕೆಂದಲಗೇರಿ ಈತನು ತನ್ನ ಮೊಟಾರ ಸೈಕಲ್ಲ ನಂ KA31/Y 7803 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಕಲಘಟಗಿ ಕಡೆಗೆ ಅತಿಜೋರು ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವೇಗದ ನಿಯಂತ್ರಣ ಮಾಡಲಾಗದೇ ಸ್ಕಿಡ್ ಮಾಡಿ ಕೆಡವಿ ಅಪಘಾತ ಪಡಿಸಿಕೊಂಡು ತಾನೇ ಬಲವಾದ ಗಾಯಗೊಂಡು ಉಪಚಾರಕ್ಕೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ದಾಖಲಿಸಿದಾಗ ಉಪಚಾರ ಪಲಿಸದೇ ಇಂದು ದಿ:23-03-2018 ರಂದು ಮದ್ಯಾಹ್ನ 12-00 ಗಂಟೆಗೆ ಮರಣಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 99/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

3. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ತಡಕೋಡ ಗ್ರಾಮದ ಈರವ್ವಾ ವಿರಕ್ತಿಮಠ ಇವರು ಅಣ್ಣತಮ್ಮಂದಿರಿಂದ  ಆರೋಪಿತರಿಗೆ 1.ಈರಯ್ಯ ವಿಭುತ್ತಿ ಹಾಗೂ ಇನ್ನೂ 04 ಜನರಿಗೆ ಮನೆಯಲ್ಲಿದ್ದಾಗ ಮನೆಯ ಮುಂದೆ ನಿಂತು ನಿಮ್ಮ ಅಣ್ಣ ತಮ್ಮಂದಿರ ಕಡೆಯಿಂದ ನನಗೆ ಬೈಯಿಸುತ್ತಿ ಅಂತಾ ಅವಾಚ್ಯವಾಗಿ ಬೈದಾಡುತ್ತಿದ್ದಾಗ ಬಂದು ಹಾಗೇಕೆ ಬೈದಾಡುತ್ತಿ ಅಂತಾ ಕೇಳಿದಾಗ ಸಹ ಕೂಡಿಕೊಂಡು ಬಂದು ಪಿರ್ಯಾದಿಗೆ ಅವಾಚ್ಯವಾಗಿ ಬೈದಾಡಿ ಕೈಯಿಂದಾ ಹೊಡಿಬಡಿಮಾಡಿ ಕಾಲಿಗೆ ಹೊಡೆದು ಗಾಯಪಡಿಸಿ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 57/2018 ಕಲಂ 506.504.143.149.147.148.323.324 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಗಟಿಕೊಪ್ಪ ಗ್ರಾಮದ ರಾಮಚಂದ್ರ  ವಿಠೋಬಾ ಗಾಂವಕರ  ಇವರ ಮನೆಯ ಮುಂದಿನ ಬಾಳೆಯ ತೋಟದ ಹುಣಸಿ ಮರದ ಕೆಳಗೆ ಯಾವುದೋ ಹೆಸರು ವಿಳಾಸ ಗೊತ್ತಿಲ್ಲದ ಅನಾಮದೇಯ ಬಿಕ್ಷುಕಿ ಅಂದಾಜು 50 ರಿಂದ 60 ವರ್ಷದ ಹೆಂಗಸ್ಸು ಅಂದಾಜು 7 ಮತ್ತು 8 ದಿವಸಗಳಿಂದ ನಮ್ಮ ಊರಲ್ಲಿ ಬಿಕ್ಷೆ ಬೇಡುತ್ತಾ ಅಲ್ಲಿ ಮಲುಗುತ್ತಾ ಇದ್ದವಳು ಮಲಗಿದಲ್ಲಿಯೇ ಮೃತಪಟ್ಟಿದ್ದು ಅವಳು ನೋಡಲು ಸಾದ ಕಪ್ಪು ಮೈ ಬಣ್ಣ  ತಲೆಯಲ್ಲಿ 12 ಇಂಚು ಕಪ್ಪು ಬಿಳಿ ಕೂದಲು ಅಗಲ ಹಣೆ ನಿಟಾದ ಮುಗೂ ಬಾಯಲ್ಲಿ  ಮೂರು ಹಲ್ಲುಗಳು ಹೋರಗೆ ಕಾಣುತ್ತವೆ. ಅವಳು ನೋಡಲು 5 ಪುಟ ಎತ್ತರ  ಇದ್ದು ಅವಳ ಮೈ ಮೈಲೆ ಯಾವುದೇ ಗಾಯಗಳು ಕಚ್ಚು ಪೆಟ್ಟುಗಳು ಕಂಡುಬಾರದರಿಂದ ಅವಳ ಸಾವಿನಲ್ಲಿ ಯಾವುದೇ ಸಂಶಯ ವೈಗೇರೆ ಇರುವುದಿಲ್ಲಾ ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 20/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.