ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, March 24, 2018

CRIME INCIDENTS 24-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:24-03-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ  ಮಂಡಿಕಹೊನ್ನಳ್ಳಿ ಗ್ರಾಮದ ವಾಸದ ಮನೆಯಲ್ಲಿ ಯಾರೋ ಕಳ್ಳರು ಹಿತ್ತಲ ಬಾಗಿಲ ಕದವನ್ನು ತೆಗೆದು ಒಳ ಪ್ರವೇಶ ಮಾಡಿ ಟ್ರೆಜರಿಯ ಬಾಗಿಲು ತೆರದು ಅದರಲ್ಲಿದ್ದ ಬಂಗಾರದ ಹಾಗೂ ಬೆಳ್ಳಿಯ ಆಭರಣಗಳು ಹಾಗೂ ರೋಖ ಹಣ 4.500/- ರೂಗಳು ಇವೆಲ್ಲವುಗಳ ಒಟ್ಟು ಅಕಿ: 3,00,000/-ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಲ್ಲದೇ ಪಕ್ಕದ ಮನೆಯಾದ ಗುರುಸಿದ್ದಪ್ಪ ಗಾಡದ ಹಾಗೂ ಕಲ್ಲಯ್ಯ ಹಿರೇಮಠ ಇವರ ಮನೆಯಲ್ಲಿಯೂ ಸಹ ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 102/2018 ಕಲಂ 457.380 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

2.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 25/2017.26/2017  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ. 

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಮಿಶ್ರಿಕೋಟಿ ಗ್ರಾಮದ ಮೃತ ಬಸವರಾಜ ತಂದೆ ಪರಶುರಾಮ ತಾಳಿಕೋಟಿ ವಯಾ 21 ವರ್ಷ ಸಾ: ಮಿಶ್ರೀಕೋಟಿ ಇವನು ಸರಿಯಾಗಿ ದುಡಿಯದೇ ವಿಪರೀತವಾಗಿ ಕುಡಿಯುವ ಚಟಕ್ಕೆ ಬಿದ್ದವನು ಮನೆಯಲ್ಲಿ ಮತ್ತು ಓಣಿಯ ಹಿರಿಯರು ತಿಳಿಸಿ ಬುದ್ಧಿ ಹೇಳಿದರೂ ಕೇಳದೇ ಕುಡಿಯುತ್ತಿದ್ದವನು ತನ್ನ ಜೀವನದಲ್ಲಿ ಬೇಸರಹೊಂದಿ ದಿ: 22/03/2018 ರಂದು ಮದ್ಯಾಹ್ನ 02.00 ಗಂಟೆಗೆ ತನ್ನ ಮನೆಯಲ್ಲಿ ತಾನಾಗಿಯೇ ಶೆರೆಯಲ್ಲಿ ಯಾವುದೋ ವಿಷವನ್ನು ಸೇರಿಸಿ ಕುಡಿದು ತ್ರಾಸ್ ಮಾಡಿಕೊಳ್ಳುವಾಗ ಉಪಚಾರಕ್ಕೆ ಅಂತ ಕೆ.ಎಮ್.ಸಿ ದವಾಖಾನೆ ಹುಬ್ಬಳ್ಳಿಯಲ್ಲಿ ದಾಖಲು ಮಾಡಿದವನು ಉಪಚಾರದಿಂದ ಗುಣಹೊಂದದೇ ದಿನಾಂಕ; 23/03/2018 ರಂದು ರಾತ್ರಿ 09.00 ಗಂಟೆಗೆ ಮೃತಪಟ್ಟಿದ್ದು ಅವನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತನ ತಾಯಿ  ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 21/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.