ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, March 27, 2018

CRIME INCIDENTS 26-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:26-03-2018 ರಂದು ವರದಿಯಾದ ಪ್ರಕರಣಗಳು

1.  ಅಳ್ನಾವರ್ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ : 26-03-2018 ರಂದು ಮದ್ಯಾಹ್ನ 13-15 ಗಂಟೆಯ ಸುಮಾರಿಗೆ ಹಳಿಯಾಳ ಧಾರವಾಡ ರಸ್ತೆಯ ಮೇಲೆ ಕೊಕ್ರೆವಾಡ ಗ್ರಾಮದ ಹದ್ದಿಯಲ್ಲಿ ಕಾರ ನಂ. ಕೆಎ-32/ಎಂ-4995 ನೇದ್ದರ ಚಾಲಕನು ತನ್ನ ಕಾರನ್ನು ಧಾರವಾಡ ಕಡೆಯಿಂದ ಹಳಿಯಾಳ ಕಡೆಗೆ ಅತೀ ವೇಗವಾಗಿ ಮತ್ತು ನಿಷ್ಖಾಳಜಿತನದಿಂದ ನಡೆಸಿಕೊಂಡು ಒಮ್ಮಿಂದೊಮ್ಮೆಲೆ ಬಂದು ಹಳಿಯಾಳ ಕಡೆಯಿಂದ ಧಾರವಾಡ ಕಡೆಗೆ ಹೊರಟಿದ್ದ ಕಾರ ನಂ. ಕೆಎ-25/ಎಂಎ-8534 ನೇದ್ದರ ಬಲ ಸೈಡಿನ ಹಿಂಬದಿಯ ಗಾಲಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿದ್ದು ಅಲ್ಲದೇ ತನ್ನ ವಾಹನದ ವೇಗದ ನಿಯಂತ್ರಣ ಮಾಡಲಾಗದೇ ತನ್ನ ಬಲ ಸೈಡಿಗೆ ಬಂದು ಪಿರ್ಯಾದಿಯ ಓಮಿನಿ ವಾಹನ ನಂ. ಕೆಎ-31ಎಂ-5272 ನೇದ್ದರ  ಎಡಬದಿಯ ಹಿಂಬದಿಯ ಗಾಲಿಗೆ ಡಿಕ್ಕಿ ಮಾಡಿ ಪಿರ್ಯಾದಿಯ ವಾಹನದಲ್ಲಿದ್ದ ಎರಡು ಜನರಿಗೆ ಭಾರೀ ದುಃಖಾಪತ್ ಪಡಿಸಿದ್ದು ಅಲ್ಲದೇ ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದ ಅಪರಾಧ. ಈ ಕುರಿತು ಅಳ್ನಾವರ್ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 27/2018 ಕಲಂ IPC 1860 (U/s-279,337,338); INDIAN MOTOR VEHICLES ACT, 1988 (U/s-134,187) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 26-03-2018 ರಂದು 18-10 ಗಂಟೆ ಸುಮಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ನಂಬರ್ KA-42/ಎಫ್ 1117 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಬಸ್ನ್ನು ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿ ಪಿರ್ಯಾದಿದಾರನು ಚಲಾಯಿಸುತ್ತಿದ್ದ ಕಾರ್ ನಂಬರ್ KA-63/ 1810 ನೇದ್ದಕ್ಕೆ ಹಿಂಬದಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಕಾರನ್ನು ಜಖಂಗೊಳಿಸಿದ ಅಪರಾಧ. ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 34/2018 ಕಲಂ 279 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 25-01-2018 ರಂದು 18-00 ಗಂಟೆ ಸುಮಾರಿಗೆ ಧಾರವಾಡ ಅಳ್ನಾವರ ರಸ್ತೆ ಕರೆಮ್ಮದೇವರ ಗುಡಿ  ಹತ್ತಿರ ರಸ್ತೆ ಮೇಲೆ    ಧಾರವಾಡ ಕಡೆಯಿಂದ ಗೋವಾ  ಕಡೆಗೆ ಹೋಗುತ್ತಿದ್ದ ಪಿರ್ಯಾದಿದಾರರ ಬಾಬತ ಲಾರಿ ನಂ MH 12 HD 5478 ನೇದ್ದನ್ನು  ಯಾರೋ ಆರೋಪಿತರು ರಿಕ್ಷಾ ನಂ KA-25-AA-8912 ನೇದ್ದು ಪಂಚರಾಗಿದೆ ಅಂತಾ ನಿಲ್ಲಿಸಿ ಪಿರ್ಯಾದಿಗೆ ಕೈಯಿಂದ ಹೊಡಿ ಬಡಿ ಮಾಡಿ ಪಿರ್ಯಾದಿಯು ಲಾರಿಯಲ್ಲಟ್ಟಿದ್ದ 45,000/- ಹಣವನ್ನು ದರೋಡೆ ಮಾಡಿಕೊಂಡು ರಿಕ್ಷಾ  ಸಮೇತ ಪರಾರಿಯಾಗಿ ಹೋದ ಅಪರಾಧ. ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 99/2018 ಕಲಂ 394 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 25-03-2018 ರಂದು ಸಂಜೆ 5-30 ಗಂಟೆಯ ಸುಮಾರಿಗೆ ಕಾರವಾರ ಹುಬ್ಬಳ್ಳಿ ರಸ್ತೆಯ ಮೇಲೆ ಕಾಮದೇನು ಕ್ರಾಸ್ ಹತ್ತಿರ ಇದರಲ್ಲಿ ನಮೂದ ಮಾಡಿದ  ಆರೋಪಿತನು ತಾನು ನಡೆಸುತ್ತಿದ್ದ ಟ್ಯಾಂಕರ ಲಾರಿ ನಂಬರ KA 01 / AF 2901  ನೇದ್ದನ್ನು ಕಾರವಾರ ಕಡೆಯಿಂದ ಹುಬ್ಬಳ್ಳಿ ರಸ್ತೆ ಕಡೆಗೆ ಅತೀ ವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ವಾಹನ ಮೇಲಿನ ನೀಯಂತ್ರಣ ಕಳೆದುಕೊಂಡು ಹುಬ್ಬಳ್ಳಿ ರಸ್ತೆ ಕಡೆಯಿಂದ ಕಾರವಾರ ರಸ್ತೆ ಕಡೆಗೆ ಬರುತ್ತಿದ್ದ ಫಿರ್ಯಾದಿ ಕಾಕಾನ ಮಗನ ಮೋಟರ್ ಸೈಕಲ ನಂಬರ KA 25/ EQ 9803 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಸಿ ಮೋಟರ್ ಸೈಕಲ್ ಸವಾರ ಕಲದಂರ ಇವನಿಗೆ ಬಲಗಾಲು ಮುರಿಯುವಂತೆ ಮಾಡಿ ಬಗೈಗೆ ಗಾಯಪಡಿಸಿದ ಅಪರಾದ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 103/2018 ಕಲಂ 279,338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.