ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, March 27, 2018

CRIME INCIDENTS 27-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-03-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅಮ್ಮಿನಬಾವಿ ಗ್ರಾಮದ  ಆರೋಪಿತನಾದ ಕಲ್ಲಪ್ಪ ತಂದೆ ಈಶ್ವರಪ್ಪ ಶೇರೆವಾಡ ಸಾಃಅಮ್ಮಿನಭಾವಿ ಇವನು ತನ್ನ ಹೆಂಡಿತಿ ಮಗನೋಂದಿಗೆ   ಆಗ್ಗಾಗ ತನ್ನ ಖರ್ಚಿಗೆ ಸಾರಾಯಿ ಕುಡಿಯಲು ಹಣ ಕೊಡರಿ ಇಲ್ಲಂದರ ನೀಮ್ಮ ಸಾವ ನನ್ನ ಕೈಯಲ್ಲಿ ಅಂತಾ ಜಗಳ ತೆಗೆಯುತಿದ್ದನು ಇದೇ ಸಿಟ್ಟಲ್ಲಿ  ದಿಃ27-03-2018 ರಂದು ಬೆಳಗಿನ ಜಾವ 02-00 ಗಂಟೆಗೆ  ತಮ್ಮ ಮನೆಯಲ್ಲಿ ತನ್ನ ಹೆಂಡತಿ  ಪಾರವ್ವಾ ಕೋಂ ಕಲ್ಲಪ್ಪಾ ಶೇರೆವಾಡ  ವಯಾ 48 ವರ್ಷ ಜಾತಿಹಿಂದೂ ಲಿಂಗಾಯತ ಉದ್ಯೋಗಃಕಾಳು ಕಡಿ ವ್ಯಾಪಾರ ಸಾಃಅಮ್ಮಿನಭಾವಿ ಇವಳೊಂದಿಗೆ ಜಗಳ ತೆಗೆದು ಕುಡಗೋಲಿನಿಂದ ಕುತ್ತಿಗೆಯ ಬಲಬಾಗಕ್ಕೆ ಮತ್ತು ಬಲಗೈಗೆ  ಹೊಡೆದು ಭಾರಿ ರಕ್ತ ಗಾಯ ಪಡಿಸಿ  ಎಸ್ ಡಿ ಎಂ  ಆಸ್ಪತ್ರೆಯಲ್ಲಿ ಉಪಚಾರದಲ್ಲಿದ್ದಾಗ ಉಪಚಾರ ಫಲಿಸದೇ ಬೆಳಗಿನ ಜಾವ 04-00 ಗಂಟೆಗೆ ಮರಣ ಹೊಂದುವಂತೆ ಮಾಡಿ ಕೊಲೆ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 100/2018 ಕಲಂ 302 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಭೂ ಅರಳಿಕಟ್ಟಿ ಗ್ರಾಮದಲ್ಲಿ ಫಕ್ಕೀರಪ್ಪ ಪರಸಪ್ಪ ಹಾದಿಮನಿ ಇವರ ಮನೆಯ ಮುಂದಿನ ಶೇಡ್ಡಿನಲ್ಲಿ ನಿಲ್ಲಿಸಿದ ಹಿರೋ ಹೊಂಡಾ ಫ್ಯಾಷನ್ ಪ್ರೋ ಮೋಟರ ಸೈಕಲ್ ನಂಬರ ಕೆಎ-25/ಇಡ್ಲೂ-4372 ನೇದ್ದರ  ಎರಡು ಗಾಲಿಗಳನ್ನು ಡಿಸ್ಕ, ಮ್ಯಾಗವೀಲ್ ಸಮೇತ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 98/2018 ಕಲಂ 379 ನೇದ್ದರಲ್ಲಿ ಪ್ರಕರಣನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಗ್ರಾಮದ ತುಪ್ಪರಿ ಹಳ್ಳ ಆರೋಪಿತರಾದ 1.ಮಲ್ಲಿಕಾಜುಱನ ಸಿಂಗಣ್ಣವರ ಹಾಗೂ ಇನ್ನೂ 04 ಜನರು ಕೊಡಿಕೊಂಡು ಹೊಲದಲ್ಲಿ ತಮ್ಮ ಪಾಯಿದೆಗೋಸ್ಕರ ಜೆ.ಸಿ.ಬಿ. ಯಂತ್ರದಿಂದ ಸರಕಾರದ ಕಂದಾಯ ಇಲಾಖೆಯ ಜಮೀನದಲ್ಲಿ ನಿಯಮದ ಆಳಕ್ಕಿಂತ ಹೆಚ್ಚಿಗೆ ಆಳದಲ್ಲಿ ಜೆ.ಸಿ.ಬಿ. ಯಂತ್ರದಿಂದ ತೆಗ್ಗು ತೆಗೆದು ಉಸುಕು ಕಳ್ಳತನದಿಂದ ಸಂಗ್ರಹಿಸಿ ಬೋಟ ಮೋಟಾರುದಿಂದ ಫಿಲ್ಟರ ಮಾಡಿ ಟಿಪ್ಪರ ಹಾಗೂ ಟ್ಯಾಕ್ಟರ ಮುಖಾಂತರ ಅಕ್ರಮವಾಗಿ ಅನುಮತಿ ಇಲ್ಲದೆ ಕಳ್ಳತನ ಸಾಗಾಟ ಮಾಡುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 38/2018 ಕಲಂ 379 ಐಪಿಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು  ಇರುತ್ತದೆ.

4.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಗುನ್ನಾನಂ 28/2018,29/2018 ಮುಂಜಾಗೃತ ಕ್ರಮವಾಗಿ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.