ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, March 30, 2018

CRIME INCIDENTS 30-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-03-2018 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಮಜ್ಜಿಗುಡ್ಡರೋಡ ಹತ್ತಿರ ಆರೋಪಿತನಾದ ಬಸಪ್ಪಾ ಬಿಸಕ್ಕನವರ ಇತನು ತಾನು ಚಲಾಯಿಸುತ್ತಿದ್ದ ಎಚ್.ಎಮ್.ಟಿ ಕಂಪನಿಯ ಟ್ರಾಕ್ಟರ 2522 ಚೆಸ್ಸಿ ನಂಬರ M2011181601-304010 ಹಾಗೂ ಇಂಜಿನ ನಂಬರ 30258001 ನೇದ್ದನ್ನು ಮಜ್ಜಿಗುಡ್ಡ ಕಡೆಯಿಂದ ಕಡೆಯಿಂದ ಅಣ್ಣಿಗೇರಿ ಕಡೆಗೆ ಅತೀ ಜೋರಿನಿಂದ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಹೋಗಿ ವೇಗದ ನಿಯಂತ್ರಣ ಮಾಡಲಾಗದೇ ಟ್ರಾಕ್ಟರನ್ನು ರಸ್ತೆಯ ಪಕ್ಕದ ತೆಗ್ಗಿನಲ್ಲಿ ಪಲ್ಟಿ ಮಾಡಿ ತನಗೆ ತಲೆಗೆ ಮಾರಾಣಾಂತಿಕ ಭಾರೀ ಗಾಯ ಪಡಿಸಿಕೊಂಡು ಸ್ಥಳದಲ್ಲಿಯೇ ಮರಣಹೊಂದಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 40/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಹಿರೇಬೂದಿಹಾಳ ಗ್ರಾಮದ ಮೌಲಾಸಾಬ ನದಾಫ್ ಇವರ ಹತ್ತಿರ ಹೊಲಮನಿ ವಿಷಯವಾಗಿ ವಿಚಾರಿಸಲು ಅಂತಾ ಹೋದಾಗ  ಆರೋಪಿತರಾದ 1. ಗೌಸುಸಾಬ ಹಸನಸಾಬ ನದಾಫ ಹಾಗೂ ಇನ್ನೂ 03 ಜನರು ಕೊಡಿಕೊಂಡು ತನಗೆ ಎಲ್ಲರೂ ಸೇರಿ ತಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ಅಡ್ಡಗಟ್ಟಿ ತರುಬಿ ಅವಾಚ್ಯವಾಗಿ ಬೈದಾಡಿ ಕೈಯಿಂದ ಹೊಡಿ ಬಡಿ ಮಾಡುತ್ತಾ ಜೀವದ ಧಮಕಿ ಹಾಕಿ ಅವರಲ್ಲಿ ಈತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ ತನ್ನ ತಲೆಗೆ ಹೊಡೆದು ರಕ್ತ ಘಾಯ ಪಡಿಸಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 43/2018 ಕಲಂ 323.324.341.504.506.34.ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 102/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

4.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 46/2018,47/2018,48/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 102/2018 ಕಲಂ 107 ಸಿ.ಆರ್.ಪಿ ಸಿ  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ