ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, March 31, 2018

CRIME INCIDENTS 31-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:31-03-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬೋಗೆನಾಗರಕೊಪ್ಪ ಗ್ರಾಮದ ಆರೋಪಿತನಾದ ಬಸವರಾಜ ಮಹಾದೇವಪ್ಪ ತಡಸದ @ ಕಿಳ್ಳಿಕೇತರ ಇವನು ತನ್ನ ಕೈಯಲ್ಲಿ ಕಂದ್ಲಿಯನ್ನು ಹಿಡಿದುಕೊಂಡು ತಿರುಗಾಡುತ್ತಾ ಚನ್ನಬಸಪ್ಪಾ ಕಿಳ್ಳಿಕ್ಯಾತರ ಇತನು ತನ್ನ ಹೆಂಡತಿಯ ಜೊತೆಯಲ್ಲಿ ಪೋನಿನಲ್ಲಿ ಮಾತನಾಡುವ ಕಾಲಕ್ಕೆ  ಅವನಿಗೆ ಅಡ್ಡಗಟ್ಟಿ ತರುಬಿ ನಿಲ್ಲಿಸಿ  ವಿನಾಕಾರಣ ಅವನೊಂದಿಗೆ ತಂಟೆ ತೆಗೆದು ಅಂತಾ ಅವಾಚ್ಯ ಬೈದಾಡಿ ನಿನ್ನನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 106/2018 ಕಲಂ 341.504.506 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಯರಿಕೊಪ್ಪಾ ಗ್ರಾಮದ ಹತ್ತಿರ ಕಾರ ನಂ MH 13 AC 6202 ನೇದ್ದರ ಚಾಲಕ ಹುಬ್ಬಳ್ಳಿ ಧಾರವಾಡ ಬೈಪಾಸ ರಸ್ತೆ ಯರಿಕೊಪ್ಪ ಗ್ರಾಮದ ಹತ್ತಿರ ಬೆಳಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ತನ್ನ ಕಾರನ್ನು ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯ ವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ತನ್ನ ಕಾರಿನ ಮುಂದೆ ಹೋಗುತ್ತಿದ್ದ ಯಾವುದೊ ಒಂದು ವಾಹನವನ್ನು ಓವರಟೇಕ ಮಾಡಿಕೊಂಡು ಬಂದು ತನ್ನ ಕಾರಿನ ವೇಗ ನಿಯಂತ್ರನ ಮಾಡಲಾಗದೆ ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ರಸ್ತೆ ಎಡ ಸೈಡಿನಲ್ಲಿ ಸಾವಕಾಶವಾಗಿ ಚಲಾಯಿ ಕೊಂಡು ಬರುತ್ತಿದ್ದ ಕಾರ ನಂ KA 02 MN 3654 ನೇದ್ದಕ್ಕೆ ಅಪಘಾತ ಪಡಿಸಿ ಕಾರಿನಲ್ಲಿದ್ದ ಹಮಿದಾಬಾನು ಇವರಿಗೆ ಸಾದಾ  ಗಾಯ ಪಡಿಸಿದ್ದಲ್ಲದೆ  ತನಗೆ ಹಾಗೂ ತನ್ನ ಕಾರಿನಲ್ಲಿದ್ದವರಿಗೆ ಸಾಧಾ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 104/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 34/2018, 35/2018, 36/2018, 37/2018 ಕಲಂ 107 ಸಿ.ಆರ್.ಪಿ ಸಿ ನೇದ್ದವುಗಳಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

4.ನವಲಗುಂದ  ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 49/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 41/2018.42/2018  ಕಲಂ 107   
  ಸಿ.ಆರ್.ಪಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 107/2018,108/2018 ಕಲಂ 107  
   ಸಿ.ಆರ್.ಪಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ