ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, March 8, 2018

CRIME INCIDENTS 08-03-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:08-03-2018 ರಂದು ವರದಿಯಾದ ಪ್ರಕರಣಗಳು

1.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ದಿ..28-02-2018 ರಂದು ಸಂಜೆ 5-00 ಗಂಟೆಯ ಸುಮಾರಿಗೆ ಪರಸಾಪೂರ ಗ್ರಾಮದ ಪಿರ್ಯಾದಿ ವಾಸದ ಮನೆಯಿಂದಾ ಪಿರ್ಯಾದಿಯ ಹೆಂಡತಿಯಾದ ನಗಿನಾ ಕೋಂ ಸಿಖಂದರಬಾದಷಾ ಯಲಿಗಾರ 25 ವರ್ಷ ಸಾ..ಪರಸಾಪೂರ ಇವಳು ಕುಬಿಹಾಳ ಗ್ರಾಮದ ತನ್ನ ಅಕ್ಕಳ ಮನೆಗೆ ಹೋಗಿ ಬರುವದಾಗಿ ಹೇಳಿ ಹೋದವಳು ಕುಬಿಹಾಳ ಗ್ರಾಮಕ್ಕೆ ಹೋಗದೆ ಮರಳಿ ಮನೆಗೆ ಬಾರದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಅವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ಪಿರ್ಯಾಧಿ ಕೊಟ್ಟಿದ್ದು ಇರುತ್ತದೆ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 86/2018 ಕಲಂ ಮಹಿಳೆ ಕಾಣೆ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.