ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, April 30, 2018

CRIME INCIDENTS 30-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-04-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಳಸನಕೊಪ್ಪ ಗ್ರಾಮದ ಚೆನ್ನಪ್ಪ ತಂದೆ ಯಲ್ಲಪ್ಪ ಆಯಟ್ಟಿ ಸಾ..ಕಳಸನಕೊಪ್ಪ ಇವರು ಮಗಳು ಮನೆಯಿಂದಾ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಹಾಗೂ  ಶಿವಪ್ಪ ಸಿದ್ದಪ್ಪ ಗುಡ್ಡಪ್ಪನವರ ಸಾ..ಗಂಗಿವಾಳ ಇವನ ಮೇಲೆ ನಮಗೆ ಸಂಶಯ ಇರುತ್ತದೆ  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 134/2018 ಕಲಂ ಹೆಣ್ಣುಮಗಳು ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಕಲಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಅಮರಗೋಳ ಗ್ರಾಮದಲ್ಲಿ ಸರ್ಕಾರಿ ಪ್ರಾಥಮೀಕ ಶಾಲೆ ಹತ್ತಿರ 1) ನಾಗಪ್ಪ ಮಲ್ಲಪ್ಪ ಮಾಟರಂಗಿ ವಯಾ 32 ವರ್ಷ 2) ಬೀರಪ್ಪ ಶಿವಪ್ಪ ಕಟ್ಟಿಕಾರ ಸಾ!! ಇಬ್ಬರೂ ಅಮರಗೋಳ ಬೀರಪ್ಪ ಕಲ್ಲಪ್ಪ ಪೂಜಾರ ಇವರುಗಳೊಂದಿಗೆ ಮನೆಯ ಜಾಗೆಯ ಸಂಭಂದ ತಂಟೆ ತಕರಾರುಗಳಿದ್ದು ಅಂತಾ ಜನರು ಮಾತನಾಡುತ್ತಿದ್ದು ಆಗ ಫಿರ್ಯಾದಿಯು ಅಮರಗೋಳ ಗ್ರಾಮದ ಪ್ರಾಥಮೀಕ ಶಾಲೆ ಹತ್ತಿರ ಹೋಗಿ ನೋಡಿದಾಗ ಸದರಿಯವರು ತಮ್ಮ ಜಾಗೆಯ ಸಂಭಂದ ಬೀರಪ್ಪ ಕಲ್ಲಪ್ಪ ಪೂಜಾರ ಇವರೊಂದಿಗೆ ತಂಟೆ ಮಾಡುತ್ತಿದ್ದು ಸದರಿಯವರಿಗೆ ಬೆಳಗಿನ 10-00 ಗಂಟೆಗೆ ಹಿಡಿದು ಹೆಸರು ಕೇಳಲಾಗಿ ಅವರು ತಮ್ಮ ಹೆಸರು 1) ನಾಗಪ್ಪ ಮಲ್ಲಪ್ಪ ಮಾಟರಂಗಿ ವಯಾ 32 ವರ್ಷ 2) ಬೀರಪ್ಪ ಶಿವಪ್ಪ ಕಟ್ಟಿಕಾರ ಸಾ!! ಇಬ್ಬರೂ ಅಮರಗೋಳ ಸದರಿಯವರು ಮನೆಯ ಜಾಗೆಯ ಸಂಭಂದ  ಬಾಯಿಗೆ ಬಂದಂತೆ ಬ್ಶೆದಾಡುತ್ತಿದ್ದಲ್ಲದೆ ಬುಧ್ದಿ ಹೇಳಲು ಬಂದ ಹಿರಿಯರಿಗೆ ಅಕ್ಕಪಕ್ಕದವರಿಗೆ ಸಹ ಬೈದು ಬೆದರಿಕೆ ಹಾಕುತ್ತಾ ಗಲಾಟೆ ಮಾಡುತ್ತಾ ಬಂದಿರುತ್ತಾನೆ ಸದರಿಯವರು ಯಾರು ಮಾತು ಕೇಳದವರಾಗಿದ್ದು ಪದೇಪದೇ ತಂಟೆ ಮಾಡುವರಿದ್ದು ಸದರಿಯವರಿಗೆ ಹಾಗೆ ಬಿಟ್ಟಲ್ಲಿ ಏನಾದರೂ ಗುನ್ನೆ ಸಂಭವ ಇರುತ್ತದೆ ಅಲ್ಲದೆ ಮುಂಬರುವ ವಿಧಾನಸಭಾ ಚುನಾವಣಾ ಕಾಲಕ್ಕೆ ಯಾವುದಾದರೂ ಪಕ್ಷದವರ ಸಂಗಡ ತಂಟೆ ತೆಗೆದು ಗಲಾಟೆ ಮಾಡಿ ಸಾರ್ವಜನೀಕ ಶಾಂತಾ ಭಂಗ ಪಡಿಸುವ ಸಂಭವ ಇರುತ್ತದೆ ಅಂತಾ ತಿಳಿಸಿದ್ದು ಇರುತ್ತದೆ ಸದರ ಮೇಲೆ ಗುನ್ನಾನಂ 100/2018 ಕಲಂ110 (ಇ&ಜಿ) ಸಿಆರ್ಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ : ಅಮರಗೋಳ ಗ್ರಾಮದಲ್ಲಿ ಸರ್ಕಾರಿ ಪ್ರಾಥಮೀಕ ಶಾಲೆ ಹತ್ತಿರ ಫಿರ್ಯಾದಿಯು ಪೆಟ್ರೋಲಿಂಗ ಮಾಡುತ್ತಿದ್ದಾಗ ಇಬ್ಬರೂ 1) ಬೀರಪ್ಪ ಕಲ್ಲಪ್ಪ ಪೂಜಾರಿ ವಯಾ 35 ವರ್ಷ 2) ರವಿ ಕಲ್ಲಪ್ಪ ಪೂಜಾರಿ ವಯಾ 26 ವರ್ಷ  ಸಾ!! ಇಬ್ಬರೂ ಅಮರಗೋಳ ನಾಗಪ್ಪ ಮಲ್ಲಪ್ಪ ಮಾಟರಂಗಿ ಇವರುಗಳೊಂದಿಗೆ ಮನೆಯ ಜಾಗೆಯ ಸಂಭಂದ ತಂಟೆ ತಕರಾರುಗಳಿದ್ದು ಅಂತಾ ಜನರು ಮಾತನಾಡುತ್ತಿದ್ದು ಆಗ ಅಮರಗೋಳ ಗ್ರಾಮದ ಪ್ರಾಥಮೀಕ ಶಾಲೆ ಹತ್ತಿರ ಹೋಗಿ ನೋಡಿದಾಗ ಸದರಿಯವರು ತಮ್ಮ ಜಾಗೆಯ ಸಂಭಂದ ಇವರ ಮನೆಯ ಜನರೊಂದಿಗೆ ತಂಟೆ ಮಾಡುತ್ತಿದ್ದು ಸದರಿಯವರಿಗೆ ಬೆಳಗಿನ 12-00 ಗಂಟೆಗೆ ಹಿಡಿದು ಹೆಸರು ಕೇಳಲಾಗಿ ಅವರು ತಮ್ಮ ಹೆಸರು 1) ಬೀರಪ್ಪ ಕಲ್ಲಪ್ಪ ಪೂಜಾರಿ ವಯಾ 35 ವರ್ಷ 2) ರವಿ ಕಲ್ಲಪ್ಪ ಪೂಜಾರಿ ವಯಾ 26 ವರ್ಷ ಸಾ!! ಇಬ್ಬರೂ ಅಮರಗೊಳ ಇವರು ಮನೆಯ ಜಾಗೆಯ ಸಂಭಂದ  ಬಾಯಿಗೆ ಬಂದಂತೆ ಬ್ಶೆದಾಡುತ್ತಿದ್ದಲ್ಲದೆ ಬುಧ್ದಿ ಹೇಳಲು ಬಂದ ಹಿರಿಯರಿಗೆ ಅಕ್ಕಪಕ್ಕದವರಿಗೆ ಬೈದು ಬೆದರಿಕೆ ಹಾಕುತ್ತಾ ಗಲಾಟೆ ಮಾಡುತ್ತಾ ಬಂದಿರುತ್ತಾರೆ ಸದರಿಯವರು ಯಾರು ಮಾತು ಕೇಳದವರಾಗಿದ್ದು ಪದೇಪದೇ ತಂಟೆ ಮಾಡುವರಿದ್ದು ಸದರಿಯವರಿಗೆ ಹಾಗೆ ಬಿಟ್ಟಲ್ಲಿ ಏನಾದರೂ ಗುನ್ನೆ ಸಂಭವ ಇರುತ್ತದೆ ಅಲ್ಲದೆ ಮುಂಬರುವ ವಿಧಾನಸಭಾ ಚುನಾವಣಾ ಕಾಲಕ್ಕೆ ಯಾವುದಾದರೂ ಪಕ್ಷದವರ ಸಂಗಡ ತಂಟೆ ತೆಗೆದು ಗಲಾಟೆ ಮಾಡಿ ಸಾರ್ವಜನೀಕ ಶಾಂತಾ ಭಂಗ ಪಡಿಸುವ ಸಂಭವ ಇರುತ್ತದೆ ಅಂತಾ ತಿಳಿಸಿದ್ದು ಇರುತ್ತದೆ ಸದರ ಮೇಲೆ ಗುನ್ನಾನಂ 101/2018 ಕಲಂ110 (ಇ&ಜಿ) ಸಿಆರ್ಪಿಸಿ ಪ್ರಕಾರ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Sunday, April 29, 2018

CRIME INCIDENTS 29-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-04-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ತಾಲೂಕಿನ ಮುಕ್ಕಲ್ಲ ಗ್ರಾಮದ ಜಮೀನ ರಿಸ ನಂ 302 ನೇದ್ದರಲ್ಲಿಆರೋಪಿತರಾದರವರು ಭೀಮರೆಡ್ಡಿ ಕುತಱಕೊಟಿ ಹಾಗೂ ಇನ್ನೂ ಇಬ್ಬರೂ  ವಿರೇಶ ಚವರೆಡ್ಡಿ ಇವರ ಮಾವ ಯಲ್ಲಪ್ಪಗೌಡ ತಂದೆ ಈರನಗೌಡ ಶಂಕ್ರಗೌಡ್ರ ವಯಾ 40 ವರ್ಷ ಸಾ: ಮುಕ್ಕಲ್ಲ ಈತನ ಹೆಂಡತಿ ಮೀನಾಕ್ಷಿ ಇವಳೊಂದಿಗೆ ಹಲವಾರು ವರ್ಷಗಳಿಂದ ಅನೈತಿಕ ಸಂಬಂಧಹೊಂದಿದ್ದು ಅದಕ್ಕೆ ಅವನು ವಿರೋದ ವ್ಯಕ್ತ ಪಡಿಸಿದ್ದಕ್ಕೆ ಅವನು ಹೊಲಕ್ಕೆ ಹೋದಾಗ ತನ್ನೊಂದಿಗೆ ಇತರರನ್ನು ಸೇರಿಸಿಕೊಂಡು ಅವನ ಕಣ್ಣಿಗೆ ಖಾರದ ಪುಡಿ ಎರಚಿ ಯಾವದೋ ಹರಿತವಾದ ಆಯುಧದಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 132/2018 ಕಲಂ 302 ಐಪಿಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ :ಕಲಘಟಗಿ ಯಲ್ಲಾಪೂರ ರಸ್ತೆಯ ಮೇಲೆ ಫಾರೆಸ್ಟ ನರ್ಸರಿ ಹತ್ತೀರ ಗೂಡ್ಸ ಕ್ಯಾಂಟರ್ ನಂ MH-04-HS-0875 ನೇದ್ದರ ಚಾಲಕನು ಯಲ್ಲಾಪೂರ ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ತನ್ನ ಮುಂದಿನ ವಾಹನಕ್ಕೆ ಓವರಟೇಕ್ ಮಾಡಿಕೊಂಡು ರಾಂಗ್ ಸೈಡಿನಲ್ಲಿ ಬಂದು ಕಲಘಟಗಿ ಕಡೆಯಿಂದಾ ಹುಲಗಿನಕೊಪ್ಪ ಕಡೆಗೆ ಹೊರಟ ಮೋಟಾರ್ ಸೈಕಲ್ ನಂ  KA-27-EJ-9293 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ್ ಸೈಕಲ್ ಸವಾರನಾದ ವೀರುಪಾಕ್ಷಪ್ಪ ತಂದೆ ಫಕ್ಕೀರಪ್ಪ ಭೀಮನವರ ಇವನಿಗೆ ಗಂಭೀರ ಸ್ವರೂಪದ ಗಾಯಪಡಿಸಿ ಮೋಟಾರ್ ಸೈಕಲ್ ಹಿಂಬದಿ ಕುಳಿತ ಗಂಗಮ್ಮಾ ಕೋಂ ವೀರುಪಾಕ್ಷಪ್ಪ ಭೀಮನವರ 35 ವರ್ಷ ಸಾ..ಶ್ಯಾಡಂಭಿ ತಾ..ಶಿಗ್ಗಾಂವ ಇವಳಿಗೂ ಸಹಾ ಗಂಭೀರ ಸ್ವರೂಪದ ಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿದ್ದಲ್ಲದೆ ಗಾಯಾಳು ಜನರಿಗೆ ಉಪಚಾರಕ್ಕೆ ಸಹಕರಿಸದೆ & ಘಟನೆಯ ವಿಷಯವನ್ನು ಪೊಲೀಸ ಠಾಣೆಗೆ ತಿಳಿಸದೆ ವಾಹನ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಈ ಕುರಿತು  ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 133/2018 ಕಲಂ 279.338.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಗುಡಗೇರಿ ಗ್ರಾಮದ ಮೃತ ಶ್ರೀಮತಿ ನೀಲಮ್ಮ ಕೋಂ ಮಲ್ಲಪ್ಪ ಸಂಚಗಾರ ವಯಾಃ70 ಇವಳು ಈಗ ಸುಮಾರು 4-5 ವರ್ಷಗಳ ಹಿಂದೆ ಅವಳ ಗಂಡ ತೀರಿಕೊಂಡಿದ್ದಕ್ಕೆ ಅವಳು ಮಾನಸೀಕಳಾಗಿ ಭುದ್ಧಿ ಭ್ರಮಣೆಯಾಗಿದ್ದರಿಂದ ಅವಳಿಗೆ ಖಾಸಗೀ ವೈಧ್ಯೋಪಚಾರ ಮಾಡಿಸಿದರೂ ಗುಣಮುಖಳಾಗದೇ ಇದ್ದುದರಿಂದ ಮತ್ತು ಅವಳು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದುದರಿಂದ ಅವಳು ದಿನಾಂಕಃ 26/04/2018 ರ ಮುಂಜಾನೆ 0900 ಗಂಟೆಯಿಂದ ದಿನಾಂಕಃ29/04/2018 ರ ಮುಂಜಾನೆ 0930 ಗಂಟೆಯ ನಡುವಿನ ಅವಧಿಯಲ್ಲಿ ಗುಡಗೇರಿ ಶಹರದ ಸಿಧ್ಧನ ಹೊಂಡದಲ್ಲಿ ಅಕಸ್ಮಾತ ನೀರಲ್ಲಿ ಬಿದ್ದು ಮುಳುಗಿ ಮೃತಪಟ್ಟಿರಬಹುದು ವಿನಃ ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಫಿಯಾಱದಿ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2018 ಕಲಂ 174.ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, April 27, 2018

CRIME INCIDENTS 27-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:27-04-2018 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಕೊಂಡಿಕೂಪ್ಪಾ ಗ್ರಾಮದ   ಆರೋಪಿತನಾದ ಸುಧಾಕರ ಚನ್ನಭೈರಪ್ಪಾ ತಾನು ಚಲಾಯಿಸುತ್ತಿದ್ದ ಲಾರಿ ನಂಬರ AP-21/TX-9933 ನೇದ್ದನ್ನು ಹುಬ್ಬಳ್ಳಿ ಕಡೆಯಿಂದ ಗದಗ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಸವಳಹಳ್ಳ ಬ್ರಿಡ್ಜ ಹತ್ತಿರ ಲಾರಿಯ ವೇಗದ ನಿಯಂತ್ರಣ ಮಾಡಲಾಗದೇ ಲಾರಿಯನ್ನು ಬ್ರಿಡ್ಜ ಹತ್ತಿರ ಕೆಳಗಡೆ ಪಲ್ಟಿ ಮಾಡಿ ಲಾರಿಯನ್ನು ಜಖಂಗೊಳಿಸಿದ್ದು ಇರುತ್ತದೆ.ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 57/2018 ಕಲಂ 279 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಪಿ ಬಿ ರೋಡ ಮುಲ್ಲಾ ಡಾಬಾ ಹತ್ತಿರ  ಕಾರ ನಂಃ ಕೆಎ/17/ಸಿ/9972 ನೇದ್ದರ ಚಾಲಕನಾದ ನಿರಂಜನಮೂರ್ತಿ ಎಸ್.ಎಸ್. ಸಾಃ ದಾವಣಗೆರೆ ಇವನು ತಾನು ನಡೆಸುತ್ತಿದ್ದ ಸದರಿ ಕಾರನ್ನು ಬೆಳಗಾಂವಕಡೆಯಿಂದ ಧಾರವಾಡಕಡೆಗೆ ಎನ್-ಎಚ್-4 ರಸ್ತೆಯ ಮೇಲೆ ಅತೀವೇಗ ವ ನಿರ್ಲಕ್ಷತೆಯಿಂದ, ಮತ್ತು ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವಾಹನವನ್ನು ನಿಯಂತ್ರಿಸಲಾಗದೆ  ತೇಗೂರ ಮುಲ್ಲಾ ದಾಬಾದ ಹತ್ತಿರ ರಸ್ತೆ ವಿಭಜಕ ಕಟ್ಟೆಗೆ ಡಿಕ್ಕಿಪಡಿಸಿ ಅಪಘಾತ ಪಡಿಸಿ ಕಾರಿನಲ್ಲಿದ್ದ ಇಬ್ಬರಿಗೆ ಸಾದಾ ವ ಭಾರಿ ಗಾಯಪಡಿಸಿದ್ದು ಅಲ್ಲದೇ ತಾನು ಸಹಿತ ಭಾರಿ ಗಾಯಹೊಂದಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 72/2018 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:  ಮುಂಜಾಗೃತ ಕ್ರಮವಾಗಿ ಗುನ್ನಾನಂ 85/2018, 86/2018, 87/2018, 88/2018  ಕಲಂ107ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Wednesday, April 25, 2018

CRIME INCIDENTS 25-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-04-2018 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಎನ್.ಎಚ್ 218 ನವಲಗುಂದ ಹುಬ್ಬಳ್ಳಿ ರಸ್ತೆಯ ಕಾಲವಾಡ ಕ್ರಾಸ್ ಹತ್ತಿರ ಆರೋಪಿತ ಯಾವುದೋ ಲಾರಿಯ ಚಾಲಕನು ತಾನು ಚಲಾಯಿಸುತ್ತಿದ್ದ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ನವಲಗುಂದ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿಕೊಂಡು ತನ್ನ ಮುಂದೆ ಹೊರಟ ವಾಹನವನ್ನು ಓವರ್ಟೇಫ್ ಮಾಡುತ್ತಾ ಲಾರಿಯನ್ನು ರಸ್ತೆಯ ಬಲ ಸೈಡಿನಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ತನ್ನ ಸೈಡಿನಲ್ಲಿ ಮೋಟರ್ ಸೈಕಲ್ ನಂಬರ್ KA-25/ES 1465 ನೇದ್ದರಲ್ಲಿನೇದ್ದರ ಚಾಲಕನಾದ ಮಹದೇವಪ್ಪಾ ಪಡೆಸೂರ ಇತನು ತಮ್ಮ ಹೆಂಡತಿಯನ್ನು ಕೂಡಿಸಿಕೊಂಡು ಹೊರಟಿದ್ದ ಚಾಲನೆ ಮಾಡುತ್ತಿದ್ದ ಮೋಟರ್ ಸೈಕಲ್ ಹ್ಯಾಂಡಲ್ಗೆ ಲಾರಿಯ ಬಲಗಡೆಯ ಭಾಗವನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ಲಾರಿಯ ಸಮೇತ ಘಟನಾ ಸ್ತಳದಿಂದ ಪರಾರಿ ಆಗಿ ಹೋಗಿದ್ದು ಅಪಘಾತದ ರಭಸಕ್ಕೆ ಮೋಟರ್ ಸೈಕಲ್ ಹಿಂದೆ ಕುಳಿತ ಅವರ ಹೆಂಡತಿ ನೆಲಕ್ಕೆ ಬಿದ್ದಿದ್ದು ಅಲ್ಲದೇ ಪಿರ್ಯಾದಿಯೂ ಸಹಿತ ಬಿದ್ದಿದ್ದು ಇರುತ್ತದೆ ಪಿರ್ಯಾದಿಯ ಹೆಂಡತಿಯ ತಲೆಯ ಹಿಂಭಾಗಕ್ಕೆ ಭಾರೀ ಪ್ರಮಾಣದ ರಕ್ತ ಗಾಯ ಪೆಟ್ಟು ಆಗಿದ್ದು ಅವರನ್ನು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಉಪಚಾರಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 55/2018 ಕಲಂ 279.337.304(ಎ) ವಾಹನ ಕಾಯ್ದೆ 187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಜಿಲ್ಲಾ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ:ಹೆಬ್ಬಳ್ಳಿ ಗ್ರಾಮದ ರಮೇಶ ಕೋಪರ್ಡೆ, ಇವರ ಮಗಳಿಗೆ ಇವಳಿಗೆ ಯಾರೋ ಯಾವುದೋ ಆಮೇಶ ಒಡ್ಡಿ ಎಲ್ಲಿಯೋ ಅಪಹರಿಸಿಕೊಂಡು ಹೋಗಿದ್ದು ಇರುತ್ತದೆ.ಈ ಕುರಿತು ಧಾರವಾಡ ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 01/2018 ಕಲಂ 363 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದ ತಾಲೂಕಿನ ತಡಹಾಳ ಗ್ರಾಮದ ಹದ್ದಿಯಲ್ಲಿ ಬರುವ ಕೊರವ್ವಮ್ಮನ ಹಳ್ಳದ ಬ್ರಿಜ ಕಾಮಗಾರಿ ನಿರ್ಮಾಣದ ಕೆಲಸಕ್ಕೆ ಇಟ್ಟ ಸ್ಥಳದಲ್ಲಿ 40-45 ಸೇತುವೆ ವಾಲಿಗೆ ಸಿಮೆಂಟ್ ಕಾಂಕ್ರಿಟ್ ಗೆ ಹಾಕಲು ತಂದಿದ್ದ ಸ್ಟೀಲ್ ಪ್ಲೇಟುಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋದ ಅಪರಾಧ. ಸದರಿಯವುಗಳ ಒಟ್ಟು ಕ್ಕಿಮ್ಮತ್ತು 40,000=00  ಇದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 96/2018 ಕಲಂ 379 ನೇದ್ದರಲ್ಲಿ ಪ್ರಕನವನ್ನು ದಾಖಲಿಸಿದ್ದು ಇರುತ್ತದೆ.