ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, April 8, 2018

CRIME INCEDENTS 08/04/2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:08-04-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ: ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ 109/2018,110/2018, 111/2018, 112/201/ & 113/2018 ನೇದ್ದ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ

2.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿ: ಲ್ಲಿ ಮುಂಜಾಗ್ರತಾ ಕ್ರಮವಾಗಿ ಸಿ.ಆರ್.ಪಿ.ಸಿ. ಅಡಿಯಲ್ಲಿ ಗುನ್ನಾ ನಂ 51/2018 & 52/2018 ನೇದ್ದ ಪ್ರಕರಣಗಳು ದಾಖಲಾಗಿದ್ದು ಇರುತ್ತದೆ.

3. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಪಶುಪತಿಹಾಳ ಗ್ರಾಮದ ಮೃತ ತನ್ನ ಮಗಳಾದ ಹೊನ್ನಮ್ಮ ಕೋಂ ಜಗದೀಶ ನಾವಿ ವಯಾಃ36 ಇವಳು ದಿನಾಂಕಃ04/04/2018 ರಂದು ರಾತ್ರಿ 9-30 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ ಚಿಮಣಿಯನ್ನು ಹಚ್ಚಿ ಅಡುಗೆ ಮಾಡುತ್ತಿದ್ದಾಗ ಚಿಮಣಿಗೆ ಬಂದ ದೀಪದ ಹುಳುಗಳನ್ನು ಹಿಡಿಯಲು ಅಂತಾ ತಮ್ಮ ಮನೆಯಲ್ಲಿದ್ದ ಬೆಕ್ಕು ಜಿಗಿದಾಡುತ್ತಾ ಚಿಮಣೆಯನ್ನು ಕೆಡವಿದ್ದರಿಂದ ಅದು ಅವಳ ಮೈಮೇಲೆ ಬಿದ್ದಾಗ ಹತ್ತಿದ ಬೆಂಕಿಯಿಂದ ಉಪಚಾರಕ್ಕೆ ಕೆ,ಎಂ,ಸಿ ಹುಬ್ಬಳ್ಳಿಯಲ್ಲಿ ದಾಖಲಿದ್ದಾಗ ಉಪಚಾರ ಫಲಿಸದೇ ಈ ದಿವಸ ದಿನಾಂಕಃ 08-04-2018 ರಂದು ಮುಂಜಾನೆ 08-00 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾಳೆ ವಿನಃ ಅವಳ ಮರಣದಲ್ಲಿ ಬೇರೆ ಯಾವುದೇ ಯಾರ ಮೇಲೂ ಸಂಶಯ ಇರುವುದಿಲ್ಲಾ ಫಿಯಾಱಧಿ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 05/2018 ಕಲಂ 174 ಸಿ.ಆರ್.ಪಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಯಮನೂರ ಗ್ರಾಮದ ಮೃತ ಮಂಜುನಾಥ ಪರಮೇಶ್ವರಪ್ಪ ಸಿಂದೋಗಿ ವಯಾ:30 ಸಾ:ಯಮನೂರ ಈತನು ಎರಡು ವರ್ಷಗಳ ಹಿಂದೆ ಮಾಡಿದ್ದ ಸಾಲ ತೀರಿಸಲಾಗದೆ ಮಾನಸಿಕ ಮಾಡಿಕೊಂಡು ಈ ಚಿಂತೆಯನ್ನು ಯಾರಿಗೂ ಹೇಳದೆ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಮನೆ ಬಿಟ್ಟು ಹೋಗಿ ಯಮನೂರ ಗ್ರಾಮದ ಕೆರೆಯ ಬಂಡೆಯ ಮೇಲೆ ತನ್ನಷ್ಟಕ್ಕೆ ತಾನೆ ಕ್ರಿಮಿನಾಶಕ ವಿಷ ಸೇವನೆ ಮಾಡಿ ಮೃತಪಟ್ಟಿರುತ್ತಾನೆ. ಪೋತಿಯ ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವದಿಲ್ಲ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 14/2018 ಕಲಂ 174 ಸಿ.ಆರ್.ಪಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.