ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, April 10, 2018

CRIME INCIDEDENTS 10-04-2018
 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:10-04-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಸವದತ್ತಿ ರಸ್ತೆ ಕರಡಿಗುಡ್ಡ ಕ್ರಾಸ ಹತ್ತಿರ ಹೊಂಡಾ ಹಂಕ ಮೋಟರ್ ಸೈಕಲ ನಂ KA-25-ET-9719 ನೇದ್ದರ ಚಾಲಕನು ತನ್ನ ಮೋಟರ್ ಸೈಕಲನ್ನು ಧಾರವಾಡ ಕಡೆಯಿಂದ ಸವದತ್ತಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಮೋಟರ್ ಸೈಕಲನ ವೇಗ ನಿಯಂತ್ರಣ ಮಾಡಲಾಗದೇ ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಬರುತ್ತಿದ್ದ ಬಜಾಜ ಸಿಟಿ-100 ಮೋಟರ್ ಸೈಕಲ ನಂ KA-24-V-9255  ನೇದಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಬಜಾಜ ಸಿಟಿ-100 ಮೋಟರ್ ಸೈಕಲ ನಂ KA-24-V-9255  ನೇದರ ಚಾಲಕನಾದ ಮಡ್ಡೆಪ್ಪ ಬಸಪ್ಪ ಗಿಡದಮ್ಮನವರ ವಯಾ-48 ವರ್ಷ ಇವರಿಗೆ ಮೃತಪಡಿಸಿದ್ದಲ್ಲದೇ ತಾನು ಸಹ ಗಾಯಗೊಂಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 116/2018 ಕಲಂ 279.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ :ಕರಡಿಗುಡ್ಡ ಗ್ರಾಮದ ಮಂಜುನಾಥ ತಂದೆ ಬಾಳಪ್ಪ ಕೊಟ್ರಿ ವಯಾಃ34ವರ್ಷ ಜಾತಿ-ಹಿಂದು ಲಿಂಗಾಯತ, ಉದ್ಯೋಗ-ಕೂಲಿ ಕೆಲಸ ಸಾ:ಕರಡಿಗುಡ್ಡ ಇವನು ಧಾರವಾಡಕ್ಕೆ ಹೋಗಿ  ಬರುತ್ತೆನೆ ಅಂತಾ ಹೇಳಿ ಹೋಗಿ ಈ ವರೆಗೂ ಮನೆಗೆ ಮರಳಿ ಬಾರದೇ ಎಲ್ಲಿಗೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿಗುನ್ನಾನಂ 17/2018 ಕಲಂ ಮನುಷ್ಯ ಕಾಣೆ ಪ್ರಕಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.  ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಹಳೇ ಹಂಚಿನಾಳ ಗ್ರಾಮದ ಮೃತಳಾದ ವಿಜಯಲಕ್ಷ್ಮೀ ತಂದೆ ಮಹಾಂತಯ್ಯಾ ಹಿರೇಮಠ. ವಯಾ: 18 ವರ್ಷ, ಸಾ: ಇವಳು ಹೆನಿನ ಪುಡಿಯನ್ನು ಕಲಿಸಿ ಒಂದು ಲೋಟದಲ್ಲಿ ಇಟ್ಟಿದ್ದು, ಸದರ ಲೋಟದಲ್ಲಿ ಮೃತಳ ವಯಸ್ಸಾದ ಹಾಗೂ ಸರಿಯಾಗಿ ಕಣ್ಣು ಕಾಣದ ಅಜ್ಜಿಯು ಚಹಾವನ್ನು ಹಾಕಿ ಕೊಟ್ಟಿದ್ದು ಮೃತಳು ಅದನ್ನು ಗಮನಿಸದೇ ಕುಡಿದು ಅಸ್ವಸ್ಥಳಾಗಿ ತ್ರಾಸ ಮಾಡಿಕೊಳ್ಳುತ್ತಿದ್ದಾಗ ಅವಳನ್ನು ಉಪಚಾರಕ್ಕೆ ಕುಂದಗೋಳ ಸರಕಾರಿ ದವಾಖಾನೆಯಲ್ಲಿ ದಾಖಲ ಮಾಡಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ದಾಖಲ ಮಾಡಿದವಳು ಉಪಚಾರ ಫಲಿಸದೇ ಈ ದಿವಸ ದಿನಾಂಕ: 10-04-2018 ರಂದು ಬೆಳಗಿನ 4-15 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಇದರ ಹೊರತಾಗಿ ಅವಳ ಮರಣದಲ್ಲಿ ಬೇರೆ ಯಾವ ಮತ್ತು ಯಾರ ಮೇಲೆಯೂ ಸಂಶಯ ಇರುವುದಿಲ್ಲ ಅಂತಾ ಮೃತಳ ತಾಯಿ ಫಿಯಾಱಧಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 14/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.