ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, April 1, 2018

CRIME INCIDENTS 01-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:01-04-2018 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ನಿಗದಿ ಗ್ರಾಮ ಸಮೀಪ ಬರುತ್ತಿದ್ದಂತೆ ಶ್ರೀ ಏಳು ಕರೆಮ್ಮನ ಗುಡಿಯ ಹತ್ತಿರ ರಸ್ತೆಯ ಮೇಲೆ ಧಾರವಾಡ ಕಡೆಯಿಂದ ಹಳಿಯಾಳ ಕಡೆಗೆ ಒಬ್ಬ ಕಾರ ಚಾಲಕನು ತನ್ನ ಕಾರನ್ನು ಅತೀ ವೇಗವಾಗಿ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ರಸ್ತೆಯ ತಿರುವಿನಲ್ಲಿ ತನ್ನ ಬಲಸೈಡಿಗೆ ಬಂದವನೇ ನಮ್ಮ ಮೋಟಾರ ಸೈಕಲ್ ನಂ. ಕೆಎ-25/ಇಪಿ-2583 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿದನು. ಬಲಗಾಲು ಮುರಿದಂತೆ ಆಗಿತ್ತು.  ಮತ್ತು ಮಹ್ಮದಸಾಬ ಮಲಂಗನವರ ಇವನಿಗೆ ನೋಡಲು ಅವನ ಬಲಗಾಲು ಮುರಿದು ಭಾರ ರಕ್ತಗಾಯವಾಗಿತ್ತು.  ಅಲ್ಲಿದ್ದ ಜನರು 108 ವಾಹನಕ್ಕೆ ಕರೆ ಮಾಡುತ್ತಿದ್ದರು.  ಅಲ್ಲದೇ ನನಗೆ ಡಿಕ್ಕಿ ಮಾಡಿ ಅಪಘಾತಪಡಿಸಿದ ಕಾರ ನಂಬರ ನೋಡಲು ಕಾರ ನಂಬರ ಎಪಿ - 10 / ಎವಿ - 2030 ಅಂತಾ ಇತ್ತು.  ನಮ್ಮ ಬಳಿ ಇದ್ದ ಕಾರ ಚಾಲಕನ ಹೆಸರು ಕೇಳಲು ಅವನು ತನ್ನ ಹೆಸರು ಪಿ. ವಿಕಾಸ ತಂದೆ ಪಿ. ಸತೀಶ ನಾಯ್ಡು ಸಾ ಃ ಹೈದರಾಬಾದ ಅಂತಾ ಹೇಳಿದನು.  ಈ ಘಟನೆಯು ನಿನ್ನೆ ರಾತ್ರಿ 10-30 ಗಂಟೆಗೆ ಹಳಿಯಾಳ ಧಾರವಾಡ ರಸ್ತೆಯ ಮೇಲೆ ನಿಗದಿ ಸಮೀಪ ಶ್ರೀ ಏಳು ಕರೆಮ್ಮನ ಗುಡಿಯ ಹತ್ತಿರ ಆಗಿದ್ದು ಅದೆ. ಉಪಚಾರಕ್ಕಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಬಂದು ನಂತರ ಹೆಚ್ಚಿನ ಉಪಚಾರಕ್ಕಾಗಿ ಎಸ್. ಡಿ. ಎಂ. ಆಸ್ಪತ್ರೆ ಧಾರವಾಡದಲ್ಲಿ ದಾಖಲಿಸಿದ್ದು ಅದೆ ಮುಂದಿನ ಚಿಕಿತ್ಸಗಾಗಿ   ಅವನಿಗೆ ಕೆ. ಎಲ್. ಇ. ಆಸ್ಪತ್ರೆ ಬೆಳಗಾವಿಗೆ ಕರೆದುಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 38/2018 ಕಲಂ 279.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 39/2018.40/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ನವಲಗುಂದ  ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 52/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 43/2018.44/2018  ಕಲಂ 107  ಸಿ.ಆರ್.ಪಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.