ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, April 2, 2018

CRIME INCIDENTS 02-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:02-04-2018 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಗ್ರಾಮದ ಹತ್ತಿರ  ಆರೋಪಿತನಾದ ಪರಮೇಶ್ವರ ಅಕ್ಕಿ ಇತನು  ತಾನು ಚಲಾಯಿಸುತ್ತಿದ್ದ ಓಮಿನಿ ವಾಹನ ಸಂಖ್ಯೆ ಕೆಎ-25/ಎಮ್-ಬಿ-9679 ನೇದ್ದನ್ನು ಹಿಂಭದಿಯಿಂದ (ರಿವರ್ಸ) ಅತೀ ವೇಗ ಹಾಗೂ ಹಾಗೂ ಅಲಕ್ಷತನದಿಂದ ಚಾಲನೆ ಮಾಡಿ ಇದರಲ್ಲಿಯ ಪಿರ್ಯಾದಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಅಮೃತಪ್ಪಾ ಗುರಿಕಾರ ಇವರ ಕಾಲಿನ ಮೇಲೆ ವಾಹನದ ಚಕ್ರವನ್ನು ಹಾಯಿಸಿ ಸಾಧಾ ವ ಭಾರಿ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 45/2018 ಕಲಂ 279.337.338 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2.ನವಲಗುಂದ  ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 54/2018, 55/2018 ಕಲಂ 107 ಸಿ.ಆರ್.ಪಿ. ಸಿ. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 109/2018 ಕಲಂ 107   
  ಸಿ.ಆರ್.ಪಿ.ಸಿ. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ಅಳ್ನಾವರ  ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 41/2018 ಕಲಂ 107 ಸಿ.ಆರ್.ಪಿ. ಸಿ. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಮುಗಳಿ ಮೃತ ಸೊಮಲಿಂಗಪ್ಪ.ಮಲ್ಲಪ್ಪ.ಮುಗಳಿ.ವಯಾ-48 ವರ್ಷ.ಸಾಃಹನಸಿ. ಇತನು ಸನ್ 2017 ನೇ ಸಾಲಿನಲ್ಲಿ ಶಿರಕೊಳದ ಕೆ.ವಿ.ಜಿ.ಬ್ಯಾಂಕದಲ್ಲಿ 1 ಲಕ್ಷ ರೂ ಬೆಳೆಸಾಲ ಹಾಗೂ ಹೊರಗಡೆ 5 ಲಕ್ಷ ರೂ ಕೈಗಡ ಸಾಲವನ್ನುಪಡೆದುಕೊಂಡಿದ್ದು ಈ ವರ್ಷ ಸರಿಯಾಗಿ ಮಳೆಬಾರದೇ ಬೆಳೆ ಬಾರದ್ದರಿಂದ ಸಾಲವನ್ನು ಹೇಗೆ ತಿರಿಸುವದು ಅಂತಾ ಮನಸ್ಸಿಗೆ ಹಚ್ಚಿಕೊಂಡು ದಿ:26-03-2018 ರಂದು ಮದ್ಯಾಹ್ನ-1-00 ಗಂಟೆ ಸುಮಾರಿಗೆ ಹತ್ತಿಗೆ ಹೊಡೆಯುವ ಎಣ್ಣೆಯನ್ನು ತೆಗೆದುಕೊಂಡು ಉಪಚಾರಕ್ಕೆ ಅಂತಾ ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದಾಗ ಉಪಚಾರವು ಫಲಿಸದೇ ದಿನಾಂಕ:01-04-2018 ರಂದು ರಾತ್ರಿ-9-45 ಗಂಟೆಗೆ ಮೃತ ಪಟ್ಟಿದ್ದು ಅದೆ. ಸದರಿಯವನ ಸಾವಿನಲ್ಲಿ ಬೇರೆ ಏನು ಸಂಶಯ ವಗೈರೆ ಇರುವದಿಲ್ಲಾಂತಾ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 13/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕರಡಿಗುಡ್ಡ ಗ್ರಾಮದ ಮೃತ ಸಂಗಪ್ಪ ತಂದೆ ಈರಪ್ಪ ಉಳ್ಳಿಗೇರಿ ವಯಾ 65 ವರ್ಷ ಜಾತಿ ಹಿಂದು ಲಿಂಗವಂತ ಉದ್ಯೋಗ ಶೇತ್ಕಿ ಕೆಲಸ ಸಾ:ಕರಡಿಗುಡ್ಡ ಇತನಿಗೆ ಇದ್ದ ಅಂಗಾಲು ಉರಿತ ಮತ್ತು ತಲೆಯ ನೆತ್ತಿಯ ಉರಿತದ ಬಾದೆಯನ್ನು ತಾಳಲಾರದೆ ದಿನಾಂಕ 01-04-2018 ರಂದು ರಾತ್ರಿ 2300 ಘಂಟೆಯಿಂದ ದಿನಾಂಕ 02-04-2018 ರ ಬೆಳಗಿನ 0700 ಘಂಟೆಯ ಮದ್ಯೆದ ಅವದಿಯಲ್ಲಿ ತನ್ನ ವಾಸದ ಮನೆಯಲ್ಲಿ ತನ್ನಷ್ಟಕ್ಕೆ ತಾನೆ ನೇಣು ಹಾಕಿಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದು ಇರುತ್ತದೆ ಸದರಿಯವನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ಹೆಂಡತಿಯು ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ನಂ 06/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.