ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, April 3, 2018

CRIME INCIDENTS 03-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:03-04-2018 ರಂದು ವರದಿಯಾದ ಪ್ರಕರಣಗಳು

1.ನವಲಗುಂದ  ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 57/2018, 58/2018 59/2018, 60/2018, 61/2018  ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣಗಳನ್ನು ದಾಖಲಿಸಿದ್ದು ಇರುತ್ತದೆ.

2.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಲ್ಲಿ ಮುಂಜಾಗೃತ ಕ್ರಮವಾಗಿ ಗುನ್ನಾನಂ 111/2018 ಕಲಂ107   
  ಸಿ.ಆರ್.ಪಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಅಳ್ನಾವರ  ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 43/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:  ಲ್ಲಿ ಮುಂಜಾಗೃತ ಕ್ರಮವಾಗಿ 105/18, 106/2018, 107/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣಗಳನ್ನು ದಾಖಲಿಸಿದ್ದು ಇರುತ್ತದೆ.

5. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಸವದತ್ತಿ ರಸ್ತೆ ಹಾರೋಬೆಳವಡಿ ಗ್ರಾಮದ ಚುನಾವಣಾ ತನಿಖಾ ಠಾಣೆಯ ಹತ್ತಿರ  ಆರೋಪಿತನು ತನ್ನ ಸ್ವಿಪ್ಟ ಡಿಜೈರ ಕಾರ ನಂ KA-29-M-5626 ರಲ್ಲಿ ಚುನಾವಣಾಧಿಕಾರಿಗಳಿಂದ ಯಾವುದೇ ಅನುಮತಿ ಪಡೆಯದೇ ಭಾರತೀಯ ರಾಷ್ಟ್ರೀಯ ಕಾಂಗ್ರೇಸ ಪಕ್ಷದ ಚಿಹ್ನೆ ಹಾಗೂ ಧ್ವಜದ ಚಿತ್ರವನ್ನೊಳಗೊಂಡ ಒಟ್ಟು 28 ತಲೆಗೆ ಹಾಕಿಕೊಳ್ಳುವ ಟೋಪಿಗಳು ಅ:ಕಿ: 700/- ಇವುಗಳನ್ನು ಪಕ್ಷದ ಪ್ರಚಾರಕ್ಕೆ ಸವದತ್ತಿ ಕಡೆಯಿಂದ ಧಾರವಾಡ ಕಡೆಗೆ ಸಾಗಾಟ ಮಾಡುತ್ತಿರುವಾಗ ಸಿಕ್ಕು ಚುಣಾವಣಾ ನೀತಿ ಸಂಹಿತೆ ಉಲ್ಲಂಘಣೆ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 108/2018 ಕಲಂ 171(ಎಚ್) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಾಲವಾಡ  ಮೃತ ನಿಂಗಪ್ಪ ತಂದೆ  ಭೀಮಪ್ಪ ಬಾಡಗಿ ವಯಾ-43 ವರ್ಷ ಸಾ!! ಕಾಲವಾಡ ತಾ!! ನವಲಗುಂದ ಈತನು ತಾನು ಹೆಬಸೂರು ಎಸ್.ಬಿ.ಐ ಬ್ಯಾಂಕಿನಲ್ಲಿ ಸುಮಾರು 3 ಲಕ್ಷ ರೂಪಾಯಿ ಬೆಳೆ ಸಲವನ್ನು ಪಡೆದುಕೊಂಡು ತನ್ನ ಹೊಲಕ್ಕೆ ಬೀಜ ಗೊಬ್ಬರ ಅಂತಾ ಖರ್ಚು ಮಾಡಿದ್ದು ಆದರೆ ಮಳೆ ಸರಿಯಾಗಿ ಆಗದೇ ಬೆಳೆ ಬಾರದ್ದರಿಂದ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಮಾನಸಿಕ ಮಾಡಿಕೊಂಡು ದಿನಾಂಕ 31-03-2018 ನೇದ್ದರ ಸಾಯಂಕಾಲ 04-00 ಗಂಟೆಯಿಂದ ದಿನಾಂಕ 02-04-2018 ನೇದ್ದರ ರಾತ್ರಿ 09-00 ಗಂಟೆಯ ನಡುವಿನ ಅವಧಿಯಲ್ಲಿ ತನ್ನ ಮನೆಯಲ್ಲಿನ ಕಟ್ಟಿಗೆಯ ಜಂತಿಗೆ ಹಗ್ಗದ ಸಹಾಯದಿಂದ ತನ್ನಷ್ಟಕ್ಕೆ ತಾನೇ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಫಿಯಾಱಧಿ ನೀಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 02/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.