ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, April 4, 2018

CRIME INCIDENTS 04-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:04-04-2018 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರದ ಶಾ ಮೆಡಿಕಲ್ ಶಾಪ ಮುಂದಿನ ಆಜಾದ ರಸ್ತೆಯ ಮೇಲೆ ಮೋಟರ ಸೈಕಲ್ಲ ನಂಬರ ಕೆ.ಎ24/ಜೆ-248 ನೇದ್ದರ ಚಾಲಕನಾದ ಮಹಾಲಿಂಗೇಶ್ವರ ತಂದೆ ಮಲ್ಲಿಕಾಜರ್ುನ ಹೊಸಮನಿ ಸಾ|| ಅಳ್ನಾವರ ಇಂದಿರಾನಗರ ತಾ||ಜಿ|| ದಾರವಾಡ ಅವನು ತಾನು ನಡೆಯಿಸುತ್ತಿದ್ದ ಮೋಟರ ಸೈಕಲ್ಲನ್ನು ಅಳ್ನಾವರದ ಹೊಸ ಬಸ್ಟ್ಯಾಂಡ ಕಡೆಯಿಂದ ಹಳೆ ಬಸ್ಟ್ಯಾಂಡ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಮುಂದಿನಿಂದ ರಸ್ತೆಯ ಬದಿಯಲ್ಲಿ ಹೊರಟ ಪಾದಚಾರಿ ನಾಗೇಂದ್ರ ತಂದೆ ಪರಶುರಾಮ ಇಟಗೇಕರ ಸಾ|| ಕಡಬಗಟ್ಟಿ ತಾ||ಜಿ|| ದಾರವಾಡ ಅವನಿಗೆ ಹಿಂದಿನಿಂದ ಡಿಕ್ಕಿ ಮಾಡಿ ಕೆಡವಿ ಭಾರಿ ಘಾಯ ಪಡಿಸಿ ಉಪಚಾರಕ್ಕೆ ಸಹಕರಿದೆ ಮೋಟರ ಸೈಕಲ್ಲ ಸಮೇತ ಪರಾರಿಯಾಗಿ ಹೋಗಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 44/2018 ಕಲಂ 279.338.ವಾಹನ ಕಾಯ್ದೆ 134.187.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ಬೆಣಚಿ ಗ್ರಾಮದ ಹತ್ತಿರ ಆರೋಪಿತನಾದ ಹನೀಪಸಾಬ ತಂದೆ ಬಾಬುಸಾಬ ದೊಡಮನಿ, ವಯಾ 32 ಜಾತಿ ಮುಸ್ಲಿಂ ಉದ್ಯೋಗ ಇಲೆಕ್ಟ್ರಿಷಿಯನ್ ಸಾ ಃ ಬೆಣಚಿ ಗ್ರಾಮ ತಾ ಃ ಅಳ್ನಾವರ ಇವನು ತನ್ನ ಫಾಯದೇಗೋಸ್ಕರ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣ ಇಸಿದುಕೊಂಡು ಓ. ಸಿ. ಎಂಬ ಜೂಜಾಟ ಆಡುತ್ತಿದ್ದಾಗ ದಾಳಿ ಕಾಲಕ್ಕೆ ಸಿಕ್ಕಿದ್ದು ಸದರಿ ಆಪಾದಿತನಿಂದ ರೂ. 280/- ಗಳು ಹಾಗೂ ಒಂದು ಬಾಲ್ ಪೆನ್ ಮತ್ತು ಒಂದು ಬಿಳಿ ಹಾಳಿ ಅದರಲ್ಲಿ ಕೆಲವು ಅಂಕಿ ಸಂಖ್ಯೆಗಳನ್ನು ಬರೆದಿದ್ದು ವಸಪಸಿಡಿಕೊಂಡಿದ್ದು ಇರುತ್ತದೆ. ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 45/2018  ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಸಂಶಿ ಹೊರವಲಯದ ಬಸಾಪೂರ ಕ್ರಾಸ್ ಹತ್ತಿರ, ಸ್ವರಾಜ್ ಟ್ರ್ಯಾಕ್ಟರ ಇಂಜಿನ್ ನಂ: KA 25 / TA 9951 ನೇದ್ದರ ಚಾಲಕ ಆರೋಪಿತನಾದ ಮಹೇಶ ಯಲ್ಲಪ್ಪ ಬೆಂತೂರ, ಸಾ: ಬೆನಕನಹಳ್ಳಿ ತಾ: ಕುಂದಗೋಳ ಈತನು ಸದರ ಟ್ರ್ಯಾಕ್ಟರ ಇಂಜಿನ್ ನ್ನು ಸಂಶಿ ಕಡೆಯಿಂದ ಬಸಾಪೂರ ಕ್ರಾಸ್ ಕಡೆಗೆ ಅತೀ ವೇಗ ಹಾಗೂ ಅಲಕ್ಷ್ಯತನದಿಂದ, ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿ, ಶಿರೂರ ಕಡೆಯಿಂದ ಸಂಶಿ ಕಡೆಗೆ ರಾಯಲ್ ಎನ್ ಪೀಲ್ಡ್ ಮೊಟಾರ ಸೈಕಲ್ ನಂ: KA 25 / EV 8743 ರ ಸವಾರ ರಾಜಶೇಖರಯ್ಯ ನಿಜಗುಣಯ್ಯ ಹಿರೇಮಠ, ASI ವೈರಲೆಸ್ ಹುಬ್ಬಳ್ಳಿ-ಧಾರವಾಡ ಸಿಟಿ ಕಂಟ್ರೋಲ್ ರೂಮ್ ಇವರಿಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಅವರಿಗೆ ಮರಣಾಂತಿಕ ಗಾಯಪೆಟ್ಟುಗಳಾಗುವಂತೆ ಮಾಡಿ ಉಪಚಾರಕ್ಕೋಸ್ಕರ ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳಗೆ ಒಯ್ಯುವಷ್ಟರಲ್ಲಿ ಮರಣ ಹೊಂದುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸದ್ದು ಇರುತ್ತದೆ

4.  ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಯಲಿವಾಳ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಸಾರ್ವಜನೀಕ ರಸ್ತೆ ಬದಿಗೆ ಇದರಲ್ಲಿ ಆರೋಪಿತನಾದ ಗೂಳಪ್ಪ ವೀರಭದ್ರಪ್ಪ ಕಮಡೊಳ್ಳಿ. ವಯಾ: 55 ವರ್ಷ, ಸಾ: ಯಲಿವಾಳ, ತಾ: ಕುಂದಗೋಳ ಈತನು ತನ್ನ ಲಾಭಕ್ಕೋಸ್ಕರ ಓ.ಸಿ ಅಂಕಿ-ಸಂಖ್ಯೆಗಳ ಮೇಲೆ ಸಾರ್ವಜನೀಕರಿಂದ ಹಣ ಹಚ್ಚಿಸಿಕೊಂಡು ಓ.ಸಿ ಆಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 670-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ ಠಾಣೆಯಲ್ಲಿ ಗುನ್ನಾನಂ 75/2018 ಕಲಂ 78(3) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
 
5.ನವಲಗುಂದ  ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 62/2018  ಕಲಂ 107 ಸಿ.ಆರ್.ಪಿ ಸಿ   ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6 ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ 109/18. ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

7. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಶೆಲವಡಿ ಗ್ರಾಮದ ಮೃತ ಹನಮಂತಪ್ಪ ತಂದೆ ನಿಂಗಪ್ಪ ಅಂಗಡಿ ವಯಾ-45 ವರ್ಷ ಸಾ!! ಹೊಂಬಳ ತಾ!! ಗದಗ ಈತನು ಸಾರಾಯಿ ಕುಡಿಯುವ ಚಟದನಿದ್ದು ಅತೀಯಾದ ಸರಾಯಿ ಕುಡಿದ ನಶೇಯಲ್ಲಿ ಶಲವಡಿ ರಸ್ತೆಯ ನಾವಳ್ಳಿ ಕ್ರಾಸ ಬ್ರಿಡ್ಜ ಹತ್ತಿರ ಬಂದು ಕುಳಿತಾಗ ಕುಡಿದ ನಶೇಯಲ್ಲಿ ಜೋಲಿ ಸಾಲಲಾರದೇ ಬ್ರಿಡ್ಜ ಮೇಲಿಂದ ಕೆಳಗೆ ತಲೆ ಹಚ್ಚಿ ಕಲ್ಲಿಗೆ ಬಿದ್ದು ತಲೆಗೆ ಭಾರಿ ಗಾಯ ಪೆಟ್ಟು ಗಾಯಪಡಿಸಿಕೊಂಡು ಸ್ಥಳದಲ್ಲಿಯೇ ಮರಣಹೊಂದಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಫಿಯಾ್ಧೀ ನೀಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿಯುಡಿನಂ 03/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.


8. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಕೊಟೂರು ಗ್ರಾಮದ ಮೃತ ಹುಸೆನಸಾಬ.ತಂದೆ ಇಮಾಮಸಾಬ.ಘೋರಿ ವಯಾ-45 ವರ್ಷ.ಸಾಃಕೊಟೂರ ಇತನು ಈ ದಿವಸ ದಿನಾಂಕ:04-04-2018 ರಂದು ಮುಂಜಾನೆ-10-20 ಗಂಟೆ ಸುಮಾರಿಗೆ ತನ್ನ ಹೊಸ ಮನೆಗೆ ನೀರು ಹೊಡೆಯಲು ಅಂತಾ ನೀರಿನ ಮೊಟಾರಿಗೆ ಕರೆಂಟಿದ್ದ ಪ್ಲಗ್ ಗೆ ಜೊಡಿಸುತ್ತಿದ್ದಾಗ ಆಕಸ್ಮಾತವಾಗಿ ಕರೆಂಟ ತಗಲಿ ಕರೆಂಟ್ ಶಾಖದಿಂದ ಅಸ್ತವ್ಯಸ್ಥನಾದಾಗ ಉಪಚಾರಕ್ಕೆ ಅಂತಾ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿದ್ದು ಅದೆ. ಸದರಿಯವನ ಸಾವಿನಲ್ಲಿ ಬೇರೆ ಏನು ಸಂಶಯ ವಗೈರೆ ಇರುವದಿಲ್ಲಾಂತಾ  ಫಿಯಾಱಧಿ ನೀಡಿದ್ದು ಈ  ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 10/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.