ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, April 9, 2018

CRIME INCIDENTS 09-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:09-04-2018 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಗರಗದ ಬಸ್ಟ್ಯಾಂಡಿನಲ್ಲಿಹತ್ತಿರ ಚಿಂದಾನಂದ ಕಮ್ಮಾರ ಇತನು ನಿಂತುಕೊಂಡಾಗ ಆರೋಪಿತನಾದ ಅಸ್ಪಾಕ.ಹವಾಲ್ದಾರ.ಸಾಃಗರಗ ಇತನು ಪಿರ್ಯಾದಿಗೆ ನೋಡಿ ಬಂದು ವಿನಾಕಾರಣ ಅವಾಚ್ಯಶಬ್ದಗಳಿಂದಾ ಬೈದಾಡುತ್ತಿದ್ದಾಗ ಮನೆಯ ಕಡೆಗೆ ಹೊರಟಾಗ ಅಡ್ಡಗಟ್ಟಿ ತರುಬಿ ತನ್ನ ಕೈಯಲ್ಲಿದ್ದ ಕೊಯಿತಾದಿಂದ ಬೆನ್ನಿಗೆ ಹೊಡೆದು ಸಾದಾ ಸ್ವರೂಪದ ಗಾಯ ಪಡಿಸಿದಲ್ಲದೇ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 65/2018 ಕಲಂ 506.341.504.324. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಶಿಂಗಳ್ಳಿ ಗ್ರಾಮದ ಹತ್ತಿರ ಲಾರಿ ನಂಬರ ಎಮ್,ಎಚ್ 09-ಇಎಮ್-1165 ನೇದರ ಚಾಲಕನು ತನ್ನ ಲಾರಿಯನ್ನು ಬೆಳಗಾವ ಕಡೆಯಿಂದಾ ಧಾರವಾಡ ಕಡೆಗೆ ರಾಷ್ಟ್ರೀಯ ಹೆದಾರಿಯ ಮೇಲೆ ಅತೀ ಜೋರಿನಿಂದಾ ವ ನಿಷ್ಕಾಳಜೀತನದಿಂದಾ ಮಾನವಿಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಸಿಂಗನಹಳ್ಳಿ ಕ್ರಾಸ್ ಹತ್ತಿರ ತನ್ನ ಮುಂದೆ ಹೋಗುತ್ತಿದ ಲಾಂಗ ಚಸ್ಸ ಲಾರಿ ನಂಬರ ಆರ್,ಜೆ 14-ಜಿಜಿ-5209 ನೇದಕ್ಕೆ ಹಿಂದಿನಿಂದಾ ಡಿಕ್ಕಿ ಮಾಡಿ ಅಪಘಾತಪಡಿಸಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 67/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಶೆರವಾಡ ಗ್ರಾಮದ ಹತ್ತಿರ ಟ್ಯಾಂಕರ್ ಲಾರಿ ನಂಬರ ಕೆ.ಎ-26/ಎ-2327 ನೇದ್ದನ್ನು  ಚಾಲಕ ಬಸವಣಯ್ಯಾ ತಂದೆ ಶಂಭುಲಿಂಗಯ್ಯಾ ಹಿರೇಮಠ ಸಾಃ ಹಾವೇರಿ ಇತನು ಹುಬ್ಬಳ್ಳಿ ಕಡೆಯಿಂದ ಹಾವೇರಿ ಕಡೆಗೆ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಅತಿ ಜೋರಿನಿಂದ ನಡೆಯಿಸಿಕೊಂಡು ಬಂದು ಶೇರೆವಾಡ ಕ್ರಾಸ್ ದಾಟಿ ಸ್ವಲ್ಪ ಮುಂದೆ ಎನ್.ಹೆಚ್.4 ರಸ್ತೆಯ 6 ಲೈನ್ ಕಾಮಗಾರಿ ನಡೆಸುತ್ತಿದ್ದ ರಸ್ತೆ ಬಾಜುಕ್ಕೆ ನಿಂತಿದ್ದ ಮಾರುತಿ ಇನ್ಪ್ರಾಕ್ರಿಯೇಷನ್ ಪ್ರೈ.ಲಿಮಿಟೇಡ ಕಂಪನಿಯ ಸುಪುರೈಜರ್  ಮಹೇಶಕುಮಾರ ಶ್ರೀವಾತ್ಸವ ತಂದೆ ಮಹೇಶ ಪ್ರಸಾದ ಶ್ರೀವಾತ್ಸವ ಸಾಃ ಅಯೋಧ್ಯಾಪೂರ ಇವರಿಗೆ ಮರಣಹೊಂದುವಂತೆ ಢಿಕಿ ಮಾಡಿದ್ದಲ್ಲದೇ ಅಲ್ಲಯೇ ನಿಲ್ಲಿಸಿದ ಟೀಪರ್ ಲಾರಿ ನಂಬರ ಕೆಎ-25/ಎಎ-9537 ನೇದ್ದಕ್ಕೆ ಢಿಕ್ಕಿ ಮಾಡಿ ಸದರಿ ಟೀಪ್ಪರ ಲಾರಿಯಲ್ಲಿದ್ದ ಕಾಮೇಶ್ವರ ತಂದೆ ಹೀರಾಲಾಲ್ ತೋರಿ ಸಾಃ ಲೇತಾ ಬರಕಟ್ಟಿ ಮನಗಡಿಯಾ ಇವರಿಗೆ ಸಾದಾ ವ ಭಾರಿ ಗಾಯಪಡಿಸಿದ್ದಲ್ಲದೇ ರಸ್ತೆಯ ಬದಿಗೆ ರಸ್ತೆಯ ಕಾಮಗಾರಿ ಮಾಡಲು ನಿಂತಿದ್ದ ಇನ್ನೊಂದು ಟೀಪ್ಪರ ಲಾರಿ ನಂಬರ ಕೆಎ-25/ಎಎ-9346 ನೇದ್ದಕ್ಕೆ ಢಿಕ್ಕಿ ಮಾಡಿ ಜಖಂಗೊಳಿಸಿ ತಾನು ಸಹ ಭಾರಿ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 114/2018 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಜಿನ್ನೂರ ಗ್ರಾಮದ ಪಿರ್ಯಾದಿ ರೇಣವ್ವಾ ಕೋಂ ರಾಯಪ್ಪ ಹರಿಜನ ಇವರ ಮನೆಯ ಮುಂದೆ ಆರೋಪಿತರಾದ 1]ಚೆನಬಸಪ್ಪ ತಂದೆ ಶಿವಪ್ಪ ಹುಲಿಗೆಮ್ಮನವರ & 2] ಶಿವಪ್ಪ ತಂದೆ ಫಕ್ಕೀರಪ್ಪ ಹುಲಿಗೆಮ್ಮನವರ ಇವರು ಪಿರ್ಯಾದಿಯ ಮನೆಯ ಮುಂದೆ ಟ್ರ್ಯಾಕ್ಟರದಲ್ಲಿ ಮಣ್ಣನ್ನು ಹೇರಿಕೊಂಡು ಬಂದು ಹಾಕಿದಾಗ ಪಿರ್ಯಾದಿಯು ನಮ್ಮ ಮನೆಯ ಮುಂದೆ ಯಾಕೆ ಮಣ್ಣನ್ನು ಹಾಕುತ್ತಿದ್ದಿರಿ ನಮ್ಮ ಮನೆಯೊಳಗೆ ಧೂಳು ಬರುತ್ತಿದೆ ಅಂತಾ ಕೇಳಿದಾಗ ಆರೋಪಿತರು  ಪಿರ್ಯಾಧಿಗೆ ಈ ಜಾಗೆ ಏನ್ ನಿಮ್ಮಪ್ಪಂದನ ನಾವು ಇಲ್ಲಿಯೇ ಹಾಕುತ್ತೇವೆ ಹಾದರಗಿತ್ತಿ ರಂಡಿ ಅಂತಾ ಅವಾಚ್ಯ ಬೈದಾಡಿ ಕೈಯಿಂದಾ ಹೊಡಿಬಡಿ ಮಾಡುತ್ತಿರುವಾಗ ಬಿಡಿಸಿಕೊಳ್ಳಲು ಬಂದ ಪಿರ್ಯಾದಿಯ ಗಂಡ ರಾಯಪ್ಪ ಹರಿಜನ ಇವನಿಗೂ ಸಹಾ ಆರೋಪಿತರಿಬ್ಬರೂ ಕೈಯಿಂದಾ ಹೊಡಿಬಡಿ ಮಾಡಿ ಇದೊಮ್ಮೆ ಉಳಕೊಂಡ್ರಿ ಹೊಲಿಯಾ ಜಾತಿ ಸೂಳೆ ಮಕ್ಕಳಾ ಇನ್ನೊಮ್ಮೆ ಸಿಕ್ಕರೆ ನಿಮ್ಮನ್ನು ಜೀವಂತ ಬಿಡುವದಿಲ್ಲಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 125/2018 ಕಲಂ IPC 1860 (U/s-323,504,506,34); SC AND THE ST  (PREVENTION OF ATTROCITIES) ACT, 1989 (U/s-3(1)(r),3(1)(s)) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಹಿರೇನರ್ತಿ ಮೃತಳಾದ ಶ್ರೀಮತಿ ಶಂಕ್ರವ್ವ ಕೋಂ ಯಲ್ಲಪ್ಪ ನೇಕಾರ, ವಯಾ: 85 ವರ್ಷ, ಸಾ: ಹಿರೇನರ್ತಿ ಇವಳು ಮಲಗಿದಾಗ, ಬೆಳಕಿನ ಸಲುವಾಗಿ ಹಚ್ಚಿ ಇಟ್ಟಿದ್ದ ಚಿಮಣಿಯು ಅಕಸ್ಮಾತ್ ಮೃತಳ ಮೈಮೇಲೆ ಬಿದ್ದು ಅವಳು ಧರಿಸಿದ್ದ ಪತ್ತಲಕ್ಕೆ ಬೆಂಕಿ ಹತ್ತಿ ಬೆಂಕಿಯು ಮೈತುಂಬಾ ಆವರಿಸಿ ಸುಟ್ಟ ಗಾಯಗಳಾಗಿ ಸ್ಥಳದಲ್ಲಿಯೇ ಮರಣ ಹೊಂದಿದ್ದು ಇರುತ್ತದೆ. ಸದರಿಯವಳ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಫಿಯಾಱಧಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 13/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.