ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, April 11, 2018

CRIME INCIDENTS 11-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:11-04-2018 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಶಿಶುವಿನಹಳ್ಳಿ ಗ್ರಾಮದ ಮೃತಳಾದ  ಕವಿತಾ ತಂದೆ ಸಿದ್ದಪ್ಪ ಬಡಿಗೇರ ವಯಾ-14 ವರ್ಷ ಸಾ!! ಶಿಶ್ವಿನಹಳ್ಳಿ ತಾ!! ನವಲಗುಂದ ಇವಳು ತನಗೆ 9 ನೇ ತರಗತಿಯ ಪರೀಕ್ಷೆ ಅಂಕಗಳು ಕಡಿಮೆ ಬಂದಿರುತ್ತವೆ ಅಂತಾ ಮಾನಸಿಕ ಮಾಡಿಕೊಂಡು ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ಕೀಟನಾಶಕ ಗುಳಿಗೆ ಸೇವಿಸಿ ಮರಣಹೊಂದಿದ್ದು ಇರುತ್ತದೆ ವಿನಃ ಅವಳ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಫಿಯಾಱಧೀ ನೀಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 04/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರ ಶಹರದಲ್ಲಿ ಪೆಟ್ರೋಲಿಂಗ ಕುರಿತು  ಹಾಗೂ ಮುಂಬರುವ ಚುನಾವಣೆ ಪ್ರಯುಕ್ತ ಮಾಹಿತಿ ಸಂಗ್ರಹಿಸುವ ಸಲುವಾಗಿ ಪೆಟ್ರೋಲಿಂಗ್ ಮಾಡುತ್ತಿರುವಾಗ ಅಳ್ನಾವರ ಪಟ್ಟಣದಲ್ಲಿ 1] ವಿನಾಯಕ ತಂದೆ ಅಜ್ಜಪ್ಪಾ ಕುರುಬರ, ವಯಾ 30 ಜಾತಿ ಹಿಂದೂ ಕುರುಬರ ಉದ್ಯೋಗ ಶೇತ್ಕಿ ಕೆಲಸ ಸಾ ಃ ಅಳ್ನಾವರ ಪಟ್ಟಣ ತಾ ಃ ಅಳ್ನಾವರ ಜಿಲ್ಲಾ ಧಾರವಾಡ ಇವರು ಮುಂಬರುವ ಚುನಾವಣೆ ಕಾಲಕ್ಕೆ ಆಗಲಿ ಅಥವಾ ಸಾರ್ವಜನಿಕ ಸಭೆಗಳಲ್ಲಿ ಆಗಲಿ ಯಾವ ವೇಳೆಗೆ ಏನು ಅನಾಹುತ ಮಾಡಿ ಸಾರ್ವಜನಿಕ  ಆಸ್ತಿ ಪಾಸ್ತಿ ಹಾಗೂ ಪ್ರಾಣ ಹಾನಿಯನ್ನುಂಟು ಮಾಡಿ ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವ ಸಾದ್ಯತೆಗಳು ಕಂಡು ಬಂದಿದ್ದರಿಂದ ಸದರಿಯವರ ಮೇಲೆ ಮುಂಜಾಗ್ರತಾ ಕ್ರಮವಾಗಿ ಕಲಂ 107 ಸಿಆರ್ ಪಿಸಿ ಪ್ರಕಾರ ಕ್ರಮ ಜರುಗಿಸಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 55/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.

3.ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಗೊಬ್ಬರಗುಂಪಿ ಗ್ರಾಮದ ಮೃತ ದುರಗಪ್ಪ ತಂದೆ ರಾಮಪ್ಪ ಗೊಬ್ಬರಗುಂಪಿ ವಯಾ 41 ವರ್ಷ, ಸಾ: ಶ್ಯಾನವಾಡ ತಾ; ನವಲಗುಂದ ಹಾ:ವ: ಮುಕ್ಕಲ್ ಇವನು ಅಜಮಾಸ 2 ವರ್ಷದಿಂದ ತನ್ನ ಊರು ಬಿಟ್ಟು ಇಟಿಗಟ್ಟಿ ಗ್ರಾಮದಲ್ಲಿ ಇಟ್ಟಂಗಿ ಹೊಡೆಯುವ ಕೆಲಸ ಮಾಡಿಕೊಂಡಿದ್ದು, ನಂತರ ಸುಮಾರು ಎಂಟು ದಿವಸಗಳ ಹಿಂದೆ ಮುಕ್ಕಲ್ಲದ ತನ್ನ ಹೆಂಡತಿಯ ಅಕ್ಕನ ಮನೆಗೆ ಬಂದು ವಾಸವಾಗಿದ್ದು, ದಿನಾಂಕ: 11/04/2018ರ ರಾತ್ರಿ 12 ಗಂಟೆಯಿಂದ ಮುಂಜಾನೆ 5.30 ಗಂಟೆಯ ನಡುವಿನ ಅವಧಿಯಲ್ಲಿ ಮುಕ್ಕಲ್ ಗ್ರಾಮದ ತನ್ನ ಹೆಂಡತಿಯ ಅಕ್ಕಳ ಮನೆಯ ಪಕ್ಕದ ಕೆರೆಯ ದಂಡಿಯ ಮೇಲಿನ ಸಾಗವಾನಿ ಗಿಡಕ್ಕೆ ಉರುಲು ಹಾಕಿಕೊಂಡು ಮೃತಪಟ್ಟು ನೇತು ಬಿದ್ದ ಸ್ಥಿತಿಯನ್ನು ನೋಡಿದರೆ ನಮಗೆ ಸಂಶಯ ಇರುತ್ತದೆ. ಈ ಬಗ್ಗೆ ನನ್ನ ಮಗನ ಮೃತ ದೇಹದ ಮರಣೋತ್ತರ ಪರೀಕ್ಷೆಯಿಂದ ಅವನ ಸಾವಿನ ಬಗ್ಗೆ ತಿಳಿದು ಬರಬೇಕು ಅಂತ ಮೃತನ ತಂದೆ ಫಿಯಾಱಧಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ23/2018 ಕಲಂ 174.ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.