ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, April 12, 2018

CRIME INCIDENTS 12-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:12-04-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ತಿಲಾಱಪುರ ಗ್ರಾಮದ ಶೋಭಾ ಗೊಡಿ  ಇವರು ತಮ್ಮ ಮನೆಯಿಂದ ಹುಬ್ಬಳ್ಳಿಯ ವಿದ್ಯಾನಗರದ ಕನಕದಾಸ ಕಾಲೇಜ್ ಗೆ ಹೋಗುತ್ತೆನೆ ಅಂತಾ  ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ ಎಲ್ಲ ಕಡೆ ಹುಡಕಲಾಗಿ ಸಿಗದೇ ಇದ್ದುದರಿಂದ ನವಲಗುಂ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 76/2018 ಕಲಂ ಮಹಿಳೆ ಕಾಣೆ ಪ್ರಕಣದಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:, ಬ್ಯಾಹಟ್ಟಿ ಗ್ರಾಮದ, ಜಾಡಗೇರಿ ಓಣಿಯಲ್ಲಿರುವ, ಗಾಳಪ್ಪನವರ ಇವರ ಮನೆಯಲ್ಲಿ ಮೃತ ದ್ರಾಕ್ಷಾಯಣಿ ಕೋಂ ಹುಲಿಗೆಪ್ಪ ಡೊಂಗ್ರೆ ವಯಾ. 26 ವರ್ಷ ಸಾ. ತೋರವಿ ಹಕ್ಕಲ, ಹುಬ್ಬಳ್ಳಿ ಹಾಲಿ ವಸ್ತಿ ಬ್ಯಾಹಟ್ಟಿ, ಜಾಡಗೇರಿ ಓಣಿ ಇವರು, ಮೃತಳ ಗಂಡ ಹುಲಿಗೆಪ್ಪ ಮಾರುತಿ ಡೊಂಗ್ರೆ ಇವನು ಫೋನ ಮಾಡಿ, ದ್ರಾಕ್ಷಾಯಣಿ ಡೊಂಗ್ರೆ ಇವಳು ಮನೆಯಲ್ಲಿ ಉರುಲು ಹಾಕಿಕೊಂಡು ಮೃತಪಟ್ಟಿರುತ್ತಾಳೆ ಅಂತ ಹೇಳಿದ್ದು, ಬ್ಯಾಹಟ್ಟಿಗೆ ಬಂದು ದ್ರಾಕ್ಷಾಯಣಿ ವಾಸವಾಗಿದ್ದ ಮನೆಗೆ ಹೋಗಿ, ಮಗಳ ಶವವನ್ನು ನೋಡಿದ್ದು, ಮಗಳ ಕೊರಳಲ್ಲಿ ಅರ್ಧ ಚಂದ್ರಾಕಾರದ  ಗಾಯದ ಕಪ್ಪು ಕಲೆ ಇದ್ದು, ನನ್ನ ಮಗಳ ಮರಣದಲ್ಲಿ ಸಂಶಯವಿರುತ್ತದೆ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 20/2018 ಕಲಂ174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.