ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, April 13, 2018

CRIME INCIDENTS 13-04-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:13-04-2018 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಅಗಡಿ ಕ್ರಾಸ ಹತ್ತಿರ ಎನ್.ಎಚ್-4 ರಸ್ತೆಯ ಇರುವ ಅಗಡಿ ಕ್ರಾಸ್ ಹತ್ತಿರ ಕಾಮತ ಉಪಚಾರ ಹೊಟೇಲ್ ಮುಂಭಾಗದ ಆವರಣದಲ್ಲಿ ನಿಲ್ಲಿಸಿದ ಕೆ.ಎಸ್.ಆರ್.ಟಿ.ಸಿ ಬಸ್ ನಂ: ಕೆಎ 22 / ಎಫ್: 2083 ನೇದ್ದರಲ್ಲಿಯ ಪ್ರಯಾಣಿಕ ಆರೋಪಿತನಾದ ಸುಜೀತಕುಮಾರ ಓಸವಾಲ ಸಾ: ಬೆಳಗಾವಿ ಈತನು ಸುಮಾರು 4965 ಗ್ರಾಮ್ ತೂಕದ ರೂ 1,20,000/-ಕಿಮ್ಮತ್ತಿನ ಬೆಳ್ಳಿಯ ರೌಂಡ ಲಿಂಗುಗಳನ್ನು ಹಾಗೂ ರೋಖಹಣ ರೂ 54,450/-ಗಳನ್ನು ಯಾವುದೇ ಸರಿಯಾದ ದಾಖಲಾತಿಗಳಿಲ್ಲದೇ ಅವುಗಳನ್ನು ವಿಧಾನಸಭಾ ಚುನಾವಣೆ ಸಂಬಂಧ ಮತದಾರರಿಗೆ ಆಮಿಶ ಒಡ್ಡಲು ಅಕ್ರಮವಾಗಿ ಬಳಸಿಕೊಳ್ಳುವ ಸಾಧ್ಯತೆಯಿದ್ದು ಅವುಗಳನ್ನು ತನ್ನ ತಾಬಾದಲ್ಲಿಟ್ಟುಕೊಂಡಾಗ ಮಾಡಿದ ಕಾಲಕ್ಕೆ ಸಿಕ್ಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 83/2018 ಕಲಂ IPC 1860 (U/s-171E); KARNATAKA POLICE ACT, 1963 (U/s-98) ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಕಿತ್ತೂರ ಗ್ರಾಮದ ಬಸನಗೌಡ ಈತನು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯಿಂದ ಯಾರಿಗೂ ಹೇಳದೇ ಹೋದವನು ಇಲ್ಲಿಯರೆಗೂ ಮನೆಗೆ ಬಾರದೇ ಎಲ್ಲಿಯೊ ಹೋಗಿ ಕಾಣೆಯಾಗಿದ್ದು ಇರುತ್ತದೆ ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 53/2018 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಶಹರದ ಪಾಟೀಲ ಆರೋಪಿತರಾದ 1.ಬಸವರಾಜ ಹುಡೇದ ಮಹೇಶ ಹುಣಸಿಮರದ ಇವರು ಹಣದ ಆಸೆಗಾಗಿ ಮೋಟಾರ್ ಸೈಕಲ್ ನಂ KA-25-EP-2646 ನೇದ್ದನ್ನು ಹುಬ್ಬಳ್ಳಿಯಿಂದಾ ಕಳವು ಮಾಡಿಕೊಂಡು ಕಲಘಟಗಿ ಶಹರಕ್ಕೆ ಬಂದು ಯಾರಿಗಾದರು ಮಾರಿ ಅವರಿಂದ ಹಣ ಇಸಿದುಕೊಂಡು ಹೋಗುವ ತಯಾರಿಲ್ಲಿದ್ದಾಗ ಕಳವು ಮಾಡಿಕೊಂಡು ಮೋಟಾರ್ ಸೈಕಲ್ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 126/2018 ಕಲಂ 379 ನೇದ್ದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.