ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, April 14, 2018

CRIME INCIDENTS 14-04-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:14-04-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಡಸ ಕ್ರಾಸ್, ಗಣೇಶ ಹೊಟೇಲ್ ಹತ್ತಿರ, ಚುನಾವಣಾ ಚೆಕ್ ಪೋಸ್ಟ್ ದಲ್ಲಿ, ಪೂನಾ ಬೆಂಗಳೂರು ರಸ್ತೆ ಮೇಲೆ, ಆರೋಪಿ ಸೌರವ ತಂದೆ ಕೃಷ್ಣಕುಮಾರ ಗ್ರೋವರ ಸಾ. ದೆಹಲಿ ಇವನು ಕಾರ ನಂ. ಕೆಎ-03-ಎಂ.ಎಕ್ಸ್-2438 ನೇದ್ದರಲ್ಲಿ,97000/- ರೂ. ಗಳನ್ನು ಯಾವುದೇ ದಾಖಲೆಗಳಿಲ್ಲದೇ, ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ, ಹಣವನ್ನು ಮತದಾರರಿಗೆ ಹಂಚುವ ಅಥವಾ ಆಮೀಷ ಒಡ್ಡುವ ಉದ್ದೇಶದಿಂದ, ಸಾಗಾಟ ಮಾಡುತ್ತಿದ್ದಾಗ ಕಾರ ನಂ. ಕೆಎ-03-ಎಂ.ಎಕ್ಸ್-2438 ಅ.ಕಿ. 3,00,000/- ರೂ. ನೇದ್ದವುಗಳ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಭಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 117/2018 ಕಲಂ IPC 1860 (U/s-171E); KARNATAKA POLICE ACT, 1963 (U/s-98) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಸಂಶಿ ಗ್ರಾಮದ ಮನೆಯಲ್ಲಿ ಗುಂಪು ಕಟ್ಟಿಕೊಂಡು ಆರೋಪಿತರಾದ 1ಈರಪ್ಪಾ ಮಣತನಗಿ ಹಾಗೂ ಇನ್ನೂ 04 ಜನರು ಕೊಡಿಕೊಂಡು ಅತೀಕ್ರಮ ಪ್ರವೇಶ ಮಾಡಿ ತನ್ನ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ವಿಶಾಲ ಶೆಟ್ಟರ ಇವರ  ತಲೆಗೆ ಹೊಡೆದು ರಕ್ತಗಾಯಪಡಿಸಿ, ಕೈಯಲ್ಲಿದ್ದ ಬಡಿಗೆಗಳಿಂದ ಮೈಕೈಗೆ ಹೊಡೆದಿದ್ದಲ್ಲದೇ, ಕೈಯಿಂದ ಹೊಡೆ ಬಡೆ ಮಾಡಿದ್ದು, ಬಿಡಿಸಲು ಬಂದ ಪಿರ್ಯಾದಿಯ ಅಣ್ಣ ಶಿವಕುಮಾರನಿಗೆ ಬಡಿಗೆಯಿಂದ ಮೈಕೈಗೆ ಹೊಡೆದು ದುಃಖಾಪತಪಡಿಸಿ, ನಮ್ಮ ಹಿತ್ತಲು ಜಾಗೆಯನ್ನು ನಿಮ್ಮದು ಅಂತಾ ಅಂತಿರಾ ಅವಾಚ್ಯ ಬೈಯ್ದಾಡಿ, ಇದೊಮ್ಮೆ ಉಳಕೊಂಡಿರಿ ಇನ್ನೊಮ್ಮೆ ಸಿಗ್ರಲೇ ನಿಮ್ಮನ್ನ ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 84/2018 ಕಲಂ 143.147.148.323.324.341.448.504.506.149 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.