ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, April 15, 2018

CRIME INCIDENTS 15-04-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:15-04-2018 ರಂದು ವರದಿಯಾದ ಪ್ರಕರಣಗಳು


1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಶೆಲವಡಿ ಗ್ರಾಮದ ಹತ್ತಿರ ಆರೋಪಿತನಾದ ಫಿರಸಾಬ ನಾಗನೂರ ಇತನು ಶೆಲವಡಿ ಗ್ರಾಮದ ಬಸ್ ನಿಲ್ದಾಣದ ಮುದಿನ ಸಾರ್ವಜನಿಕ ರಸ್ತೆಯ ಮೇಲೆ  ನಿಂತು ತನ್ನ ಸ್ವಂತ ಪಾಯಿದೆಗೊಸ್ಕರ ಪಾಸ್ ವ ಪರ್ಮಿಟ್ ಇಲ್ಲದೆ  ಅನಧಿಕೃತವಾಗಿ ಸರಾಯಿ ಪಾಕೀಟಗಳನ್ನು ಮಾರಾಟ ಮಾಡುತ್ತಿದ್ದಾಗ ಸಿಕ್ಕಿದ್ದು  ಅವನಿಂದ ರೂ 1.632-00 ವಶಪಡಿಸಿಕೊಂಡಿದ್ದು ಈ ಕುರಿತು  ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 77/2018 ಕಲಂ 32.34.  ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 78/2018.79/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಗಾಳಿಕೊಪ್ಪ ಗ್ರಾಮದ  ಮೃತ ವಸಂತಾ ತಂದೆ ಅಶೋಕ ಭಜಂತ್ರಿ ವಯಾ 17 ವರ್ಷ ಇವಳಿಗೆ ತಿಂಗಳಿಗೊಮ್ಮೆ ಮುಟ್ಟಿನ ಸಮಯದಲ್ಲಿ ತೊಂದರೆಯಾಗಿ ಹೊಟ್ಟೆನೋವು ಅಂತ ತ್ರಾಸ್ ಮಾಡಿಕೊಳ್ಳುತ್ತಿದ್ದು ವೈದ್ಯರಿಗೆ ತೋರಿಸಿದಾಗ ಅವಳಿಗೆ ಹೃದಯದ ಕಾಯಿಲೆ ಸಮಸ್ಯ ಇದೆ ಅಂತಾ ತಿಳಿದು ಬಂದಿದ್ದರಿಂದ ಉಪಚಾರ ಮಾಡುತ್ತ ಬಂದಿದ್ದು ದಿ: 15/04/2018 ರಂದು 03.30 ಪಿ.ಎಮ್ ಸುಮಾರಿಗೆ ಮೃತಳು ಮನೆಯಲ್ಲಿ ಹೊಟ್ಟೆ ನೋವು ಅಂತ ತ್ರಾಸ್ ಮಾಡಿಕೊಳ್ಳುವಾಗ ಉಪಚಾರಕ್ಕೆ ಅಂತ 108 ಅಂಬುಲೆನ್ಸಿನಲ್ಲಿ ಕಲಘಟಗಿಗೆ ತರುವಾಗ ಕಲಘಟಗಿಯ ತಾಲೂಕಾ ಸಾರ್ವಜನಿಕ ಆಸ್ಪತ್ರೆ ಸಮೀಪ ಸಾಯಂಕಾಲ 05.00 ಗಂಟೆ ಸುಮಾರಿಗೆ ಮೃತಪಟ್ಟಿದ್ದು ನನ್ನ ಮಗಳು ಹೃದಯದ ತೊಂದರೆಯಿಂದ ಮೃತಪಟ್ಟಿದ್ದಾಳೆಯೋ ಅಥವಾ ತನಗಿದ್ದ ಹೊಟ್ಟೆನೋವಿನ ತೊಂದರೆಯಿಂದ ಏನಾದರೂ ಮಾಡಿಕೊಂಡಿದ್ದಾಳೋ ತಿಳಿಯದಾಗಿದ್ದು ಅವಳ ಮರಣೋತ್ತರ ಪರೀಕ್ಷೆಯಿಂದ ತಿಳಿಯಬೇಕಿದ್ದು ನನ್ನ ಮಗಳ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತ ಮೃತಳ ತಾಯಿ  ಫಿಯಾಱಧೀ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 24/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ.