ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, April 16, 2018

CRIME INCIDENTS 16-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-04-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ರೇವಡಿಹಾಳ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರ, ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1] ಶಿವಾಜಿ ಅಣ್ಣಪ್ಪ ಚವ್ಹಾಣ ಸಾ. ರೇವಡಿಹಾಳ 2] ಅಯ್ಯಪ್ಪ ಈರಯ್ಯ ಶಿರಕೋಳ ಸಾ. ರೇವಡಿಹಾಳ 3] ಬಸಪ್ಪ ಕೇದಾರಪ್ಪ ಮಟ್ಟಿ ಸಾ. ರೇವಡಿಹಾಳ 4] ಮುದಕಪ್ಪ ರಾಮಪ್ಪ ದುಮ್ಮವಾಡ ಸಾ. ರೇವಡಿಹಾಳ ಇವರುಗಳು ತಮ್ಮ ತಮ್ಮ ಫಾಯ್ದೆಗೋಸ್ಕರ ಹಣವನ್ನು ಪಣಕ್ಕೆ ಹಚ್ಚಿ, ಇಸ್ಪೆಟ್ ಎಲೆಗಳ ಸಹಾಯದಿಂದ ಅಂದರ ಬಾಹರ ಎನ್ನುವ, ಇಸ್ಪೆಟ್ ಜೂಜಾಟ ಆಡುತ್ತಿದ್ದಾಗ ಸಿಕ್ಕಿದ್ದು ಅವನಿಂದ ರೂ 3.700-00 ಗಳನ್ನು ವಶಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 119/2018 ಕಲಂ 87 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. . ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ : ಹುಬ್ಬಳ್ಳಿ ನವಲಗುಂದ ರಸ್ತೆ ಮೇಲೆ ಕುಸುಗಲ್ ಪೆಟ್ರೋಲ್ ಬಂಕ್ ಆರೋಪಿತನಾದ ಖಾಜಾಮೋಹಿದ್ದಿನ್ ಮರ್ದಾನಸಾಬ ಕರ್ಜಗಿ ಸಾ!! ಶಿರಸಿ ಇತನು ಟ್ಯಾಂಕರ್ ಲಾರಿ ನಂಬರ ಎಮ್ ಎಚ್-43/ಯು-4158 ನೇದ್ದನ್ನು ನವಲಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಅಜಗಾರುಕತೆಯಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ತನ್ನ ಮುಂದೆ ಹೊರಟಿದ್ದ ಯಾವುದೋ ಒಂದು ವಾಹನಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಟ್ಯಾಂಕರ್ ಲಾರಿ ಜಕ್ಕಂಗೊಳ್ಳುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 120/2018 ಕಲಂ 279. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕಿರೇಸೂರ ಗ್ರಾಮದ ಇದರಲ್ಲಿಯ ಪಿರ್ಯಾಧಿ ಚನ್ನಪ್ಪ ಹನಮಪ್ಪ ಮಲ್ಲಾಡದ ಇವರ ಮನೆಯ ಮುಂದೆ ಆರೋಪಿತರಾದ 1) ನಾಗಪ್ಪ ಹನಮಪ್ಪ ಮಲ್ಲಾಡದ 2) ಮಂಜುನಾಥ ನಾಗಪ್ಪ ಮಲ್ಲಾಡದ 3) ಶಶಿಕಲಾ ಕೊಂ ನಾಗಪ್ಪ ಮಲ್ಲಾಡದ ಎಲ್ಲರೂ ಸಾ!! ಕಿರೇಸೂರ ಇವರುಗಳು ಆಸ್ತಿ ಸಲುವಾಗಿ ಎಕಾಎಕಿಯಾಗಿ ಬಂದವರೇ ಪಿರ್ಯಾಧಿಗೆ ಬಾ ಲೇ ಹೊರಗ ನಿನಗ ಆಸ್ತಿ ಬೇಕೆನಲೇ ಬೋಸಡಿ ಮಗನ ಅಂತಾ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ ಪಿರ್ಯಾಧಿಗೆ ಬಡಿಗೆಯಿಂದ ಹಾಗೂ ಕೈಯಿಂದ ಹೊಡೆದು ಗಾಯಪಡಿಸಿದ್ದಲ್ಲದೇ, ಜಗಳ ಬಿಡಿಸಲು ಬಂದ ಪಿರ್ಯಾಧಿ ಹೆಂಡತಿ ಅಕ್ಕಮ್ಮಾ ಕೊಂ ಚನ್ನಪ್ಪ ಮಲ್ಲಾಡದ ಇವರಿಗೆ ಬಡಿಗೆಯಿಂದ ಹಾಗೂ ಪಿರ್ಯಾಧಿ ಮಗಳು ಅರ್ಚನಾ ಇತಳಿಗೂ ಸಹಾ ಬಡಿಗೆಯಿಂದ ಹೊಡೆದು ಗಾಯಪಡಿಸಿದ್ದಲ್ಲದೇ, ಹೆಂಡತಿ ಅಕ್ಕಮ್ಮಳಿಗೆ ಕೈಯಿಂದ ಕಪಾಳಕ್ಕೆ ಹೊಡೆದು ಗಾಯಪಡಿಸಿ ಜೀವದ ಬೆಧರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಯಲ್ಲಿ ಗುನ್ನಾನಂ 121/2018 ಕಲಂ 323.324.504.506.34. ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 80/2018.81/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹೆಬ್ಬಳ್ಳಿ ಗ್ರಾಮದ ಮೃತ ಗಾಯಿತ್ರಿ ಕೋಂ ಆನಂದಆಚಾರ ಸಾಸವಿಹಳ್ಳಿ ವಯಾ 49 ವರ್ಷ ಸಾ:ಹೆಬ್ಬಳ್ಳಿ ಇತಳಿಗೆ ಕಳೆದ 3 ವರ್ಷಗಳಿಂದ ಬುದ್ದಿಯು ಬ್ರಮಣೆಯಾಗಿದ್ದು ಈ ಬಗ್ಗೆ ಧಾರವಾಡ ಆನಂದ ಪಾಂಡುರಂಗಿ ವೈದ್ಯರ ಬಳಿ ಉಪಚಾರವನ್ನು ಕೊಡಿಸಿದರು ಸಹಿತಾ ಕಡಿಮಿಯಾಗದೆ ಇದ್ದಾಗ ಅದನ್ನೆ ಮಾಣಸಿಕ ಮಾಡಿಕೊಂಡು ದಿನಾಂಕ 15-04-2018 ರಂದು ರಾತ್ರಿ 2130 ಘಂಟೆಯಿಂದ 2230 ಘಂಟೆಯ ಮದ್ಯೆದ ಅವದಿಯಲ್ಲಿ ಹೆಬ್ಬಳ್ಳಿ ಗ್ರಾಮದ ತನ್ನ ವಾಸದ ಮನೆಯಲ್ಲಿ ತನ್ನಷ್ಟಕ್ಕೆ ತಾಣೆ ಚಿಮಣಿ ಎಣ್ಣೆ ಸುರುವಿಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದು ಇರುತ್ತದೆ ಸದರಿವಳ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತಳ ಅಣ್ಣ ಫಿಯಾಱದಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 07/2018 ಕಲಂ 174. ಸಿ.ಆರ್.ಪಿ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.