ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Tuesday, April 17, 2018

CRIME INCIDENTS 17-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:17-04-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಸುಳ್ಳ ಗ್ರಾಮದ ಬಸ್ ನಿಲ್ದಾಣದ ಎದುರುಗಡೆ ಇರುವ ಕರೆಯ ದಂಡೆಯ ಮೆಲೆ, ಆರೋಪಿತರಾದ 1] ಶಂಕ್ರಪ್ಪ ಮಲಪೂರಪ್ಪ ಭಾವಿಕಟ್ಟಿ ಸಾ. ಹೆಬ್ಬಳ್ಳಿ ತಾ. ಧಾರವಾಡ 2] ರಾಮಪ್ಪ@ರಮೇಶ ತಂದೆ ಫಕ್ಕಿರಪ್ಪ ಮಲ್ಲಿಗವಾಡ ಸಾ. ಸುಳ್ಳ ತಾ. ಹುಬ್ಬಳ್ಳಿ 3] ಸಿದ್ದಪ್ಪ ಕಲ್ಲಪ್ಪ ಸುಣಗಾರ ಸಾ. ಸುಳ್ಳ 4] ಮಂಜುನಾಥ ಶೇಖರಪ್ಪ ತಡಹಾಳ ಸಾ. ಸುಳ್ಳ ತಾ. ಹುಬ್ಬಳ್ಳಿ ಇವರುಗಳು ತಮ್ಮ ತಮ್ಮ ಫಾಯ್ದೆಗೋಸ್ಕರ, ಇಸ್ಪೆಟೆ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಎನ್ನುವ ಇಸ್ಪೆಟ್ ಜೂಜಾಟವನ್ನು ಆಡುತ್ತಿದ್ದಾಗ, ರೋಖ ರಕಂ 2900/- ರೂ. ಮತ್ತು 52 ಇಸ್ಪೆಟ್ ಎಲೆಗಳು ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 123/2018 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:, ಹಳ್ಯಾಳ ಗ್ರಾಮದ, ಆರೋಪಿತನಾದ ಸುರೇಶ ಇಟಗಿ ಇತನ ಚಹಾದ ಅಂಗಡಿಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ, ಇವನು ಚೀಲಗಳಲ್ಲಿ 1] ಒಟ್ಟು 48 ಓರಿಜಿನಲ್ ಚಾಯ್ಸ್ ವಿಸ್ಕಿ 180 ಎಂ. ಎಲ್. ಟೆಟ್ರಾ ಪೌಚಗಳು ಅ.ಕಿ. 2736/- ರೂ. 2] ಒಟ್ಟು 72 ಓಲ್ಡ್ ಟಾವೆರ್ನ ವಿಸ್ಕಿ 180 ಎಂ. ಎಲ್. ಟೆಟ್ರಾ ಪೌಚಗಳು ಅ.ಕಿ. 5040/- ರೂ. 3] ಒಟ್ಟು 48 ಹೈವಡ್ಸ್ ಚಿಯರ್ಸ್ ವಿಸ್ಕಿ 180 ಎಂ.ಎಲ್. ಟೆಟ್ರಾ ಪೌಚಗಳು ಅ.ಕಿ. 2736/- ರೂ. 4] ಒಟ್ಟು 27 ಬ್ಯಾಗಪೈಪರ ವಿಸ್ಕಿ 180 ಎಂ.ಎಲ್. ಟೆಟ್ರಾ ಪೌಚಗಳು ಅ.ಕಿ. 2241/- ರೂ. ಇವೆಲ್ಲವುಗಳ ಒಟ್ಟು ಅ.ಕಿ. 12,753/- ರೂ. ನೇದ್ದವುಗಳನ್ನು ಯಾವುದೇ ಪಾಸ ವ ಪರ್ಮಿಟ್ ಇಲ್ಲದೇ, ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುತ್ತಿದ್ದಾಗ, ಸಿಕ್ಕಿದ್ದು ಇರುತ್ತದೆ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 122/2018 ಕಲಂ 34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಗುಮ್ಮಗೋಳ ಗ್ರಾಮದ ಭೀಮಪ್ಪಾ ಹೆಬ್ಬಳ್ಳಿ ಇವರ ಮನೆಯ ಹಿಂದಿನ ಹಿತ್ತಲದಲ್ಲಿ ಫಿರ್ಯಾದಿಯು ಒಟ್ಟಿದ ಮೇವು ಮತ್ತು ಬಣವಿಗೆ ಇದರಲ್ಲಿ ಸಂಶಯುಕ್ತನಾದ ಸುರೇಶ ಹಣಸಿ ಇನತು ಈ ಹಿಂದಿನ ಗುಡಿಯ ಜಾಗೆಯ ತಂಟೆಯ ಸಿಟ್ಟಿನಿಂದ ಫಿರ್ಯಾದಿಗೆ ಕೇಡು ಮಾಡುವ ಉದ್ದೇಶದಿಂದ ಬಣವಿಗೆ ಬೆಂಕಿ ಹಚ್ಚಿ ಸುಟ್ಟು ಲುಕ್ಸಾನ ಪಡಿಸಿದ ಬಗ್ಗೆ ಸಂಶಯ ಇದೆ ಫಿರ್ಯಾದಿಯ ನೀಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 83/2018 ಕಲಂ 435 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಮುರಕಟ್ಟಿ ಗ್ರಾಮದ ನಿಂಗಪ್ಪ ಘಾಟಿನ ಅವರ ಮನೆಯ ಹತ್ತಿರ ಇದರಲ್ಲಿಯ ಆಪಾದಿತನಾದ ಕಲ್ಲಪ್ಪ ತಂದೆ ನಾಗಪ್ಪ ಬಳಗೇರ ಸಾ|| ಮುರಕಟ್ಟಿ ತಾ||ಜಿ|| ದಾರವಾಡ ಅವನು ಇದರಲ್ಲಿಯ ಪಿರ್ಯಾದಿದಾರಳ ಹೊಲದಲ್ಲಿ ಇರುವ ಬೋರಿನ ನೀರನ್ನು ತಾನು ಪಡೆಬೆಕೆನ್ನುವ ಆಶೆಯಿಂದ ಪಿಯಾ್ದಿದಾರಳಿಗೆ ಕೈಯಿಂದ ಜಗ್ಗಾಡಿ ಅವಮಾನ ಗೊಳಿಸಿ ನಿಮ್ಮ ಮನೆಯನ್ನು ಬೆಂಕಿಯಿಂದ  ನಿಮಗೆ ಸುಟ್ಟುಸಾಯಿಸುತ್ತೇನೆ ಅಂತಾ ಜೀವದ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 59/2018 ಕಲಂ 354.506. ನೇದ್ದರಲ್ಲಿ ಪ್ರಕನವನ್ನು ದಾಖಲಿಸಿದ್ದು ಇರುತ್ತದೆ.

5. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಉಪ್ಪಿನಬೇಟಗೇರಿ ಗ್ರಾಮದ  ಮೃತ ಹಾಸಿಮ.ತಂದೆ ಅಬ್ದುಲಮಜಿದ.ಹಾದಿಮನಿ,ವಯಾ-14 ವರ್ಷ.ಸಾಃಉಪ್ಪಿನಬೆಟಗೇರಿ.ಇತನು ದಿನಾಂಕ:17-04-2018 ರಂದು ಮದ್ಯಾಹ್ನ-11-30 ಗಂಟೆಯ ಸುಮಾರಿಗೆ ತನ್ನ ಮಾವನ ಹೊಲದಲ್ಲಿಯ ಕೇರೆಯಲ್ಲಿ ನೀರು ಕುಡಿಯಲು ಅಂತಾ ಹೊದಾಗ ಅಕಸ್ಮಾತವಾಗಿ ಕಾಲು ಜಾರಿ ಕೇರೆಯಲ್ಲಿ ಬಿದ್ದು ನೀರಲ್ಲಿ ಮುಳಗಿ ಮೃತ ಪಟ್ಟಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 12/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಕರಡಿಗುಡ್ಡ ಗ್ರಾಮದ ಮೃತ  ಬಸನಗೌಡ ತಂದೆ ಚನ್ನಬಸಗೌಡ ಪಾಟೀಲ ವಯಾ 30 ವರ್ಷ ಸಾ:ನುಗ್ಗಿಕೇರಿ ಹಾಲಿ ಕರಡಿಗುಡ್ಡ ಇತನು ದಿನಾಂಕ 16-04-2018 ರಂದು 2200 ಗಂಟೆಯಿಂದ 2300 ಘಂಟೆಯ ಮದ್ಯೆದ ಅವದಿಯಲ್ಲಿ ತನ್ನ ಜಮೀನುದಲ್ಲಿನ ಜಮೀನಕ್ಕೆ ನೀರು ಹಾಯಿಸಲು ಅಂತಾ ಬೋರ ಚಾಲು ಮಾಡಲು ಹೋದಾಗ ಬೋರದಲ್ಲಿನ ವಿದ್ಯೋತ್ ವಾಯರಗಳು ಆಕಸ್ಮಾತಾಗಿ ನನ್ನ ಗಂಡನ ಎಡಗೈ ಹೆಬ್ಬಟ್ಟಿನ ಹತ್ತಿರ ತಗುಲಿ ವಿದ್ಯೋತ ಶಾಖ ಹೊಡೆದು ನನ್ನ ಗಂಡನು ಸ್ಥಳದಲ್ಲಿಯೆ ಮೃತ ಪಟ್ಟಿದ್ದು ಇರುತ್ತದೆ ಇದನ್ನು ಹೊರತು ಪಡಿಸಿ ಸದರಿವಳ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ಹೆಂಡತಿಯು ಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ  ಪೊಲೀಸ್ ಠಾಣೆಯಲ್ಲಿ ಯುಡಿನಂ 08/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.