ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, April 18, 2018

CRIME INCIDENTS 18-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-04-2018 ರಂದು ವರದಿಯಾದ ಪ್ರಕರಣಗಳು

1.ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ರೆಟ್ಟಿಗೇರಿ ಗ್ರಾಮದ  ಮೃತ ತನ್ನ ತಂದೆಃ ಪದ್ಮನಗೌಡ ಹನಮಂತಗೌಡ ಪಾಟೀಲ, ವಯಾಃ 68, ಇವರು ರಟ್ಟಿಗೇರಿಯಿಂದ ಸುಮಾರು 300 ಮೀಟರ್ ಅಂತರಲ್ಲಿರುವ ಲಾವಣಿ ತರೀಖ ಮಾಡಿದ ಹಿರೇಗೌಡ್ರ ಹೋಲದಲ್ಲಿ ನೇಗಿಲು ಹೊಡೆಯುತ್ತಿರುವಾಗ ತಾವು ಚಲಾಯಿಸುತ್ತಿದ್ದ ಐಸರ್ ಟ್ರ್ಯಾಕ್ಟರ ನಂಃ ಕೆಎಃ 27/ ಟಿಸಿ-1019 ನೇದ್ದನ್ನು ನಿರ್ಲಕ್ಷ್ಯತೆಯಿಂದ ಚಲಾಯಿಸಿಕೊಂಡು ಬಂದು ಹಿರೇಗೌಡ್ರ ಹೊಲಕ್ಕೆ ಹೊಂದಿ ಇರುವ ಹಿರೇಗೌಡ್ರ ಕೆರೆಯ ಅಂಗಳದಲ್ಲಿ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ಪಲ್ಟೀ ಮಾಡಿ ಅದರಡಿಯಲ್ಲಿ ತಾವು ಸಿಕ್ಕು ಮರಣ ಹೊಂದಿದ್ದು  ಇರುತ್ತದೆ ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 46/2018 ಕಲಂ 304(ಎ) ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಯಮನೂರ ಗ್ರಾಮದ ಹತ್ತಿರ ಐ-20 ಕಾರ ನಂ.ಕೆಎ-48/ಎಂ-8602 ನೇದ್ದರ ಚಾಲಕನು ತನ್ನ ಕಾರನ್ನು ನವಲಗುಂದ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತೀ ಜೋರಿನಿಂದ ಮತ್ತು ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಿಂದ ನಡೆಯಿಸಿಕೊಂಡು ಬಂದವನೆ ಏಕಾಏಕಿ ನವಲಗುಂದ ಕಡೆಗೆ ಹೊರಟ   ಅರವಿಂದ ತಿರುಪತಿ ಇವರ ಕಾರಿಗೆ ಎದುರಿನಿಂದ ಢಿಕ್ಕಿ ಮಾಡಿ ಅಪಘಾತಪಡಿಸಿ ಕಾರಿನಲ್ಲಿದ್ದ 9 ಜನ ಗೆಳೆಯರಿಗೆ ಮತ್ತು ತನಗೂ ಮತ್ತು ತನ್ನ ಕಾರಿನಲ್ಲಿದ್ದವರಿಗೆ ಸಾದಾ ವ ಭಾರಿ ಗಾಯಪಡಿಸಿದ್ದಲ್ಲದೆ ಫಿರ್ಯಾದಿಯ ಕಾರಿಗೆ ಮತ್ತು ತನ್ನ ಕಾರನ್ನು ಸುಡುವಂತೆ ಮಾಡಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 85/2018 ಕಲಂ 279.337.338.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಪಾಲಿಕೊಪ್ಪ ಕ್ರಾಸ್ ಹತ್ತಿರ, 400 ಮೀಟರ ಅಂತರದಲ್ಲಿ ಹುಬ್ಬಳ್ಳಿ ಕಡೆಗೆ, ಪೂನಾ ಬೆಂಗಳೂರು ರಸ್ತೆಯ ಮೇಲೆ, ರಸ್ತೆಯ ಡಿವೈಡರ ಬಾಜುಕ್ಕೆ, ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ, ಅನಾಮಧೇಯ ಗಂಡಸು ಸುಮಾರು 25 ರಿಂದ 30 ವರ್ಷ ವಯಸ್ಸಿನವನು ನೇದವನಿಗೆ ಡಿಕ್ಕಿ ಮಾಡಿ, ಸ್ಥಳದಲ್ಲಿಯೇ ಮರಣಪಡಿಸಿ, ಅಪಘಾತದ ವಿಷಯವನ್ನು ಠಾಣೆಗೆ ತಿಳಿಸದೇ ಹಾಗೆಯೇ ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 126/2018 ಕಲಂ 279.304(ಎ)ವಾಹನ ಕಾಯ್ದೆ 134.187. ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಗಂಬ್ಯಾಪೂರ ಗ್ರಾಮದ ಮುಗಪ್ಪಾ ಗಂಜಿ ಇವರ ಮನೆಯ  ವಾಸದ ಮನೆಯ ಮುಂದೆ  ಇವರ ಮಗಳನ್ನು   ಆರೋಪಿತನಾದ ಆಶೀಫ ತಂದೆ ಗೌಸುಸಾಬ ಕಿಲ್ಲೇದಾರ ಸಾ..ಗಂಬ್ಯಾಪೂರ ಇವನು ಪುಸಲಾಯಿಸಿ ಒತ್ತಾಯದಿಂದ ಯಾವುದೋ ಉದ್ದೇಶಕ್ಕಾಗಿ ಅಪಹರಿಸಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 128/2018 ಕಲಂ 363ಮ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

5. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:ಬೆನಕನಹಳ್ಳಿ ಗ್ರಾಮದ ಮೃತ ಗುರುಸಿದ್ದಪ್ಪ ಭೀಮಪ್ಪ ಸರಾವರಿ, ವಯಾ: 58 ವರ್ಷ, ಸಾ: ಬೆನಕನಹಳ್ಳಿ ತಾ: ಕುಂದಗೋಳ ಇವನು ಕುಂದಗೋಳ ಸಿಂಡಿಕೇಟ ಬ್ಯಾಂಕಿನಲ್ಲಿ ಬೆಳೆಸಾಲ ಹಾಗೂ ಊರಲ್ಲಿ ಕೈಗಡ ಸಾಲ ಅಂತಾ ಒಟ್ಟು 7,00,000/-ರೂ ಗಳಷ್ಟು ಸಾಲ ಮಾಡಿಕೊಂಡು ಅದನ್ನು ಹೇಗೆ ತೀರಿಸುವುದು ಅಂತಾ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ, ದಿನಾಂಕ: 17-04-2018 ರಂದು ಮದ್ಯಾಹ್ನ 12-30 ಗಂಟೆಯಿಂದ, 1-30 ಗಂಟೆಯ ನಡುವಿನ ಅವಧಿಯಲ್ಲಿ ಬೆನಕನಹಳ್ಳಿ ಗ್ರಾಮದ ಕೆರೆಯ ಒಂಡೆಯ ಮೇಲೆ ಯಾವುದೋ ವಿಷಕಾರಕ ಎಣ್ಣೆಯನ್ನು ಸೇವಿಸಿ ಅಸ್ವಸ್ಥನಾಗಿದ್ದು ಅವನನ್ನು ಕುಂದಗೋಳ ಸರ್ಕಾರಿ ದವಾಖಾನೆಯಲ್ಲಿ ಪ್ರಥಮೋಪಚಾರ ಮಾಡಿಸಿ, ಹೆಚ್ಚಿನ ಉಪಚಾರಕ್ಕೆ ಅಂತಾ ಹುಬ್ಬಳ್ಳಿಯ ಕೆ.ಎಮ್.ಸಿ ದವಾಖಾನೆಗೆ ದಾಖಲಿಸಿದರೂ ಸಹ ಉಪಚಾರ ಫಲಿಸದೇ ದಿನಾಂಕ: 17-04-2018 ರಂದು ರಾತ್ರಿ 11-15 ಗಂಟೆಗೆ ಮರಣ ಹೊಂದಿದ್ದು ಇರುತ್ತದೆ. ಸದರಿಯವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಫಿಯಾಱಧಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 17/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

6.  ಧಾರವಾಡ ಗ್ರಾಮೀಣಪ ಪೊಲೀಸ್ ಠಾಣಾ ವ್ಯಾಪ್ತಿಯ: ಅಮ್ಮಿನಬಾವಿ ಗ್ರಾಮದ ಮೃತ  ರಿಯಾಜ ತಂದೆ ಬಾಬು ಬಾನಿ ವಯಾ 35 ವರ್ಷ ಜಾತಿ ಮುಸ್ಲಿಂ ಉದ್ಯೋಗ ಗೌಂಡಿ ಕೆಲಸ ಸಾ:ಅಮ್ಮಿನಬಾವಿ ಹಾಲಿವಸ್ತೀ ಹಾರೂ ಬೆಳವಡಿ ಇತನು ಹಮೇಶಾ ಸರಾಯಿಯನ್ನು ಕುಡಿಯುವ ಚಟವನ್ನು ಹೊಂದಿದ್ದು ಮಾನಸಿಕವಾಗಿ ಅಸ್ವಸ್ಥನಾಗಿ ಅದೆ ಮಾನಸಿಕ ಅಸ್ಥಿತಿಯಲ್ಲಿ ಸರಾಯಿ ಕುಡಿದ ನಶೆಯಲ್ಲಿ ತಾವು ಬಾಡಿಗೆ ಇದ್ದ ಹಾರೂ ಬೆಳವಡಿ ಗ್ರಾಮದ ಶೌಕತಅಲಿ ನಧಾಪ ಇವರ ಮನೆಯಲ್ಲಿ ಜಂತ್ತಿಗೆ ಪತ್ತಲವನ್ನು ಕಟ್ಟಿ ಅದೆ ಪತ್ತಲದಿಂದ ತನ್ನಷ್ಠಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದು ಇರುತ್ತದೆ, ಸದರಿಯವನ ಸಾವಿನಲ್ಲಿ ಯಾವುದೆ ಸಂಶಯ ವಗೈರೆ ಇರುವದಿಲ್ಲಾ. ಅಂತಾ ಮೃತನ ಹೆಂಡತಿಯು ಕೊಟ್ಟಫಿಯಾಱಧಿ ನೀಡಿದ್ದು ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 10/2018 ಕಲಂ 174. ಸಿ.ಆರ್.ಪಿ ಸಿನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.