ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, April 19, 2018

CRIME INCIDENTS 19-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:19-04-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದ ಪಟ್ಟಣದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಣೆ ಪ್ರಕರಣಗಳ ವಿಕ್ಷಣೆ ಮಾಡುತ್ತಾ ತಮ್ಮ ಟೀಮ್ ಸದಸ್ಯರೊಂದಿಗೆ ಹೊರಟಾಗ ಜೆಡಿಎಸ್ ಪಕ್ಷದ ವತಿಯಿಂದ ಕುಮಾರ ಪರ್ವ ಕಾರ್ಯಕ್ರಮವು ನವಲಗುಂದ ಶಂಕರ ಕಾಲೇಜ ಮೈದಾನದಲ್ಲಿ ಜರುಗಿದ ಪ್ರಯುಕ್ತ  ಜೆ.ಡಿ.ಎಸ್. ಪಕ್ಷದ ವತಿಯಿಂದ ನೀತಿ ಸಂಹಿತೆ ಉಲ್ಲಂಘಣೆಯಾಗಿರುತ್ತದೆ ಈ ಬಗ್ಗೆ  ವಿಡಿಯೊ ಸರ್ವೇಲೆನ್ಸ ಟೀಮ್ನವರು ವಿಡಿಯೊ ಚಿತ್ರಿಕರಣ ಮಾಡಿರುತ್ತಾರೆ ಸದರ ಜೆ.ಡಿ.ಎಸ್. ಪಕ್ಷದ ವೀರಣ್ಣ ನೀರಲಗಿ ತಾಲೂಕಾ ಜೆ.ಡಿ.ಎಸ್. ಅಧ್ಯಕ್ಷರು, ನವಲಗುಂದ ಇವರು ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದು ಇರುತ್ತದೆ. ಇದರ ಬಗ್ಗೆ ಚುನಾವಣಾ ಆಧಿಕಾರಿಗಳಿಂದ ಬಂದ ಫಿರ್ಯಾದಿಯು ಕಾರ್ಯಕ್ರಮದ ವಿಡಿಯೊ ಚಿತ್ರಿಕರಣವನ್ನು ಖುದ್ದಾಗಿ ವೀಕ್ಷಿಸಲಾಗಿ ಆ ದಿನ ಕುಮಾರ ಪರ್ವ ಕಾರ್ಯಕ್ರಮ ನಿಮಿತ್ಯ  ಜೆಡಿಎಸ್ ಪಕ್ಷದ ಚಿಹ್ನೆಯುಳ್ಳ ಪಾಂಪ್ಲೆಗಳಿಂದ ತಯಾರಿಸಲಾದ ತೋರಣವನ್ನು ನವಲಗುಂದ ಬಸ್ ನಿಲ್ದಾಣದಿಂದ ಶಂಕರ ಕಾಲೇಜ ವರಗೆ ವಿದ್ಯುತ್ ಕಂಬಗಳಿಗೆ ಅನುಮತಿ ಇಲ್ಲದೇ ಕಟ್ಟಿರುವದು ಕಂಡು ಬಂದಿರುತ್ತದೆ ಈ ರೀತಿ ಸರ್ಕಾರಿ ಆಸ್ತಿಯಾದ ವಿದ್ಯುತ್ ಕಂಬಳಿಗೆ ಜೆಡಿಎಸ್ ಪಕ್ಷದ ಪಾಂಪ್ಲೆಟ್ ಗಳನ್ನು ತೋರಣಕಟ್ಟುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ  ಮಾಡಿದ ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 86/2018 ಕಲಂ IPC 1860 (U/s-171H); KARNATAKA OPEN PLACE DISFIGUREMENT ACT 1951 & 1981 (U/s-3)

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪ್ರಭುನಗರ ಹೊನ್ನಾಪೂರ  ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಶ್ರೀಕಾಂತ ಕಮತಿ ಇತನು ಕುಡಿದು ಚಿರಾಡುತ್ತಾ ಒದರಾಡುತ್ತಾ ಕೈಯಲ್ಲಿ ಕಲ್ಲು ಹಿಡಿದು ಕೊಂಡು ರಸ್ತೆಯಲ್ಲಿ ಹಾಯ್ದುಹೋಗುವ ಸಾರ್ವಜನಿಕರಿಗೆ ಬೈದಾಡುತ್ತಾ ಹೆಣ್ಣು ಮಕ್ಕಳಿಗೆ ಅವಾಚ್ಯವಾಗಿ ಬೈಯುವ ಮಾತನಾಡುವ ಹಾಗು ಕಲ್ಲು ಒಗೆಯುವದು ಸಾರ್ವಜನಿಕ ಶಾಂತತಾ ಭಂಗವನ್ನುಂಟು ಮಾಡುವ  ಹಾಗೂ  ಯಾವುದಾದರೂ ಸಂಜ್ಞೆಯ ಅಪರಾಧಗಳನ್ನು ಮಾಡುವ  ಇರ್ಯಾದೆಯವನಿದ್ದುದ್ದರಿಂದ ಸದರಿಯವನಿಗೆ 12-00 ಗಂಟೆಗೆ ಪ್ರಭುನಗರ ಹೊನ್ನಾಪೂರ ಗ್ರಾಮದಲ್ಲಿ ಹಿಡಿದು ಠಾಣೆಗೆ ತಂದು ಸದರಿಯವನ ಮೇಲೆ ಗುನ್ನಾನಂ 120/2018 ಕಲಂ 110(ಇ)(ಜಿ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಜೋಗೆಲ್ಲಾಪುರು ಮೃತ  ಹಿರೇಗೌಡ ತಂದೆ ಭರಮ್ಮಗೌಡ ಪಾಟೇಲ ವಯಾ 63 ವರ್ಷ ಜಾತಿ ಹಿಂದು ಲಿಂಗವಂತ ಉದ್ಯೋಗ ಶೇತ್ಕಿ ಕೆಲಸ ಸಾ:ಜೋಗೆಲ್ಲಾಪುರ ಇತನಿಗೆ ಕಳೆದ 4 ವರ್ಷಗಳಿಂದ ನರದೋಷದ ಖಾಯಿಲೆಯು ಇದ್ದು ಈ ಬಗ್ಗೆ ಧಾರವಾಡ ರಾಮನಗೌಡ ಆಸ್ಪತ್ರೆಯಲ್ಲಿ ಉಪಚಾರವನ್ನು ಮಾಡಿಸಿದರು ಸಹಿತಾ ಸದರಿಯವನಿಗೆ ಇದ್ದ ನರದೋಷದ ಖಾಯಿಲೆಯು ಕಡಿಮಿಯಾಗದ್ದರಿಂದ ಮತ್ತು ಕಳೆದ ವರ್ಷ ಸರಿಯಾಗಿ ಮಳೆ ಬರಲಿಲ್ಲಾ ಸರಿಯಾಗಿ ಬೆಳೆಯು ಬರಲಿಲ್ಲಾ ಅಂತಾ ಮಾನಸಿಕ ಮಾಡಿಕೊಂಡು ತನ್ನ ಪ್ಲಾಟ ಸರ್ವೇ ನಂಬರ 100 ಕ್ಷೇತ್ರ 7 ಗುಂಟೆ  ಜಾಗೆಯಲ್ಲಿನ ಮಾವಿನ ಗಿಡಕ್ಕೆ ಹಗ್ಗವನ್ನು ಕಟ್ಟಿ ಅದೆ ಹಗ್ಗದಿಂದ ನೇಣು ಹಾಕಿಕೊಂಡು ಒದ್ದಾಡುತ್ತಾದ್ದಾಗ ಮೃತನ ಹೆಂಡತಿ ಮತ್ತು ಸುತ್ತಮುತ್ತಲಿನ ಜನರು ಕೂಡಲೆ ಕೆಳಗೆ ಇಳಿಸಿಕೊಂಡು ಉಪಚಾರ ಕುರಿತು 108 ಅಂಬ್ಯುಲೇನ್ಸದಲ್ಲಿ ಹಾಕಿಕೊಂಡು ಜಿಲ್ಲಾ ಆಸ್ಪತ್ರೆ ಧಾರವಾಡಕ್ಕೆ ಬರುವಾಗ ಮಾರ್ಗ ಮದ್ಯೆದಲ್ಲಿ ಮೃತ ಪಟ್ಟಿದ್ದು ಇರುತ್ತದೆ  ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 11/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ.