ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, April 20, 2018

CRIME INCIDENTS 20-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:20-04-2018 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಅಣ್ಣಿಗೇರಿ ರೋಡ ಹತ್ತಿರ ಆರೋಪಿತರಾದ ಬಜಾಜ ಅಪೆ ಆಟೋ ನಂಬರ್ KA-20/C 4153 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಆಟೋವನ್ನು ಅಣ್ಣಿಗೇರಿ ಕಡೆಯಿಂದ ನವಲಗುಂದ ಕಡೆಗೆ ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ತನ್ನ ಮುಂದೆ ಹೊರಟ ಟಿಪ್ಪರ್ ಲಾರಿಯನ್ನು ಓವರ್ ಟೇಫ್ ಮಾಡುವ ಕಾಲಕ್ಕೆ ಸದರ ಟಿಪ್ಪರ್ ಲಾರಿ ಚಾಲಕನೂ ಸಹಿತ ಲಾರಿಯನ್ನು ಅತೀ ವೇಗ ಹಾಗು ಅಲಕ್ಷತನದಿಂದ ಚಲಾಯಿಸಿಕೊಂಡು ಹೊರಟಿದ್ದು ಇರುತ್ತದೆ ಆಟೋ ಚಾಲಕನು ತನ್ನ ಎದುರಿಗೆ ನವಲಗುಂದ ಕಡೆಗೆಯಿಂದ ಅಣ್ಣಿಗೇರಿ ಕಡೆಗೆ ರಸ್ತೆಯ ತನ್ನ ಸೈಡಿನಲ್ಲಿ ಬರುತ್ತಿದ್ದ ಟ್ರ್2ಯಾಕ್ಟರ್ ನಂಬರ್ KA17/861 ನೇದ್ದಕ್ಕೆ ಆಟೋವನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿದ್ದು ಅಲ್ಲದೇ ಪಕ್ಕದಲ್ಲಿ ಇದ್ದ ಟಿಪ್ಪರ್ ಲಾರಿ ಚಾಲಕನು ತನ್ನ ಲಾರಿಯನ್ನು ಆಟೋಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಆಟೋದಲ್ಲಿದ್ದ ಪಿರ್ಯಾದಿ ಮಗಳು ನೆಲಕ್ಕೆ ಬೀಳುವಂತೆ ಮಾಡಿ ಅವಳ ತಲೆಗೆ ಭಾರೀ ಪ್ರಮಾಣದ ಗಾಯ ಪಡಿಸಿ ಸ್ಥಳದಲ್ಲಿಯೇ ಮರಣ ಹೊಂದುವಂತೆ ಮಾಡಿದ್ದು ಅಲ್ಲದೇ ಆಟೋದಲ್ಲಿದ್ದ ಇನ್ನೂ ಕೆಲವರಿಗೆ ಸಾದಾ ವ ಭಾರೀ ಪ್ರಮಾಣದ ರಕ್ತ ಗಾಯ ಪೆಟ್ಟು ಪಡಿಸಿ ಟಿಪ್ಪರ್ ಲಾರಿ ಚಾಲಕನು ಅಪಘಾತದ ಬಗ್ಗೆ ಮಾಹಿತಿಯನ್ನು ನೀಡದೇ ತನ್ನ ವಾಹನದೊಂದಿಗೆ ಪರಾರಿಯಾಗಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 54/2018 ಕಲಂ 279.337.338.ವಾಹನ ಕಾಯ್ದೆ 134.187 ನೇದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಕಲಘಟಗಿ ರಸ್ತೆ ನಾಯಕನ ಹುಲಿಕಟ್ಟಿ ಕ್ರಾಸ ಹತ್ತಿರ ಮೋಟರ ಸೈಕಲ ನಂ ಕೆಎ 25 ಎಕ್ಸ 0379  ನೇದ್ದರ ಚಾಲಕ ಯರಿಕೊಪ್ಪ ಕಡೆಯಿಂದ ನಾಯಕನ ಹುಲಿಕಟ್ಟಿ ಕ್ರಾಸ್ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯ ವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಮೋಟರ ಸೈಕಲ  ವೇಗ ನಿಯಂತ್ರ ಮಾಡಲಾಗದೇ ಇದೇ ಮಾರ್ಗದಲ್ಲಿ ರಸ್ತೆ ಎಡಸೈಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ  ಡಿಕ್ಕಿ ಪಡಿಸಿ ಮೋಟರ ಸೈಕಲನ್ನು ಸ್ಕಿಡ ಮಾಡಿ ಕೆಡವಿ  ಪಿರ್ಯಾದಿಗೆ   ಭಾರಿ ಗಾಯ ಪಡಿಸಿದ್ದಲ್ಲದೆ ತನಗೆ ಹಾಗೂ ಪಾದಚಾರಿಗೆ ಸಾದಾ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 121/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಮಡಿವಾಳಪ್ಪ ಮೇಗೇರಿ ಇವರು ಶಿರಕೋಳ ಗ್ರಾಮದ ಹದ್ದಿ ಪೈಕಿ ತಮ್ಮ ಜಮೀನು ವಿಪಿಸಿ ನಂ.88 ಮತ್ತು 88ಅ ಮನೆ ವ ಖುಲ್ಲಾ ಜಾಗೆಯಲ್ಲಿ ಹೋದಾಗ ಅಲ್ಲಿ ಸದರಿ ಆರೋಪಿತರಾದ1.ಹನುಮಂತಪ್ಪಾ ತಳವಾರ ಹಾಗೂ ಇನ್ನೂ 07 ಜನರು ಕೊಡಿಕೊಂಡು ಬಣವಿಯಲ್ಲಿ ಹಾಕುವ ಸಲುವಾಗಿ ಜಾಗೆಯನ್ನು ಸ್ವಚ್ಛಗೊಳಿಸಿ ತೆಗ್ಗು ತೆಗೆಯುತ್ತಿದ್ದರು ಆಗ ಫಿರ್ಯದಿದಾರನು ಮಾನ್ಯ ನ್ಯಾಯಾಲಯದಲ್ಲಿ ಡಿಕ್ರಿ ಮಾಡಿ ಮೇಲೆ ತಿಳಿಸಿದ ಆಸ್ತಿಗೆ ಸಂಬಂದಪಟ್ಟಂತೆ ಫಿರ್ಯಾದಿ ದಾರ ಮತ್ತು ಆತನ ಕುಟುಂಬದವರಿಗೆ ಯಾವುದೇ ರೀತಿಯ ಕಬ್ಬಾ ವಹಿವಾಟಿಗೆ ತಕರಾರು ಮಾಡಬಾರದು ಅಂತಾ ನಿರಂತರ ತಾಕೀತು ಹುಕುಂ ಅದೇಶವಾಗಿರುತ್ತೆದೆ.ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ ತಾವುಗಳು ಬಣವಿಯನ್ನು ಕಟ್ಟುತ್ತಿದ್ದೀರಿ ಅಂತಾ ಆರೋಪಿತರಿಗೆ ಹೇಳಿದ್ದು ಆಗ ಆರೋಪಿತರು ನೀನು ಯಾವ ನ್ಯಾಯಾಲಯದ ಅದೇಶ ತಂದರೇನು, ಯಾವ ಪೋಲಿಸರಿಗೆ ಫಿರ್ಯಾದಿ ನೀಡಿದರೇನು ನಮಗೇನು ಮಾಡಿಕೊಳ್ಳಲು ಸಾಧ್ಯವಿಲ್ಲ ಅಂತಾ ಹೇಳಿ ಫಿರ್ಯದಿದಾರನಿಗೆ ಮತ್ತು ಅವನ ಕುಟುಂಬದವರಿಗೆ ಅವಾಚ್ಯ ಶಬ್ಬಗಳಿಂದ ಬೈದು ಜೀವಧ ಧಮಕಿ ಹಾಕಿದ್ದು ಇರುತ್ತದೆ ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 87/2018 ಕಲಂ 506.34.504.323 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:  ಅಣ್ಣಿಗೇರಿ ಗ್ರಾಮದ ಮೃತ ಶ್ರೀಕಾಂತ ಬಸಪ್ಪ ಪೂಜಾರ, ವಯಾ 24 ವರ್ಷ ಜಾತಿಃ ಹಿಂದೂ ಲಿಂಗಾಯತ ಉದ್ಯೊಃ ಒಕ್ಕಲುತನ ಸಾಃ ಅಣ್ಣಿಗೇರಿ ತಾಃ ನವಲಗುಂದ ಈತನು ತನ್ನ ಜಮೀನದಲ್ಲಿ ಬೆಳೆಯನ್ನು ಬೆಳೆಯಲು ಅಂತಾ ಅಣ್ಣಿಗೇರಿಯ ಯುನಿಯನ್ ಬ್ಯಾಂಕಿನಲ್ಲಿ ಎರಡು ಲಕ್ಷ ರೂಪಾಯಿ ಸಾಲವನ್ನು ಮಾಡಿದ್ದು ಅಲ್ಲದೇ ಜನರ ಬಳಿಗೆ ಕೈಗಡ ಸಾಲವನ್ನು ಸಹಿತ ಪಡೆದುಕೊಂಡಿದ್ದು ಇರುತ್ತದೆ ಮಳೆ ಸರಿಯಾಗಿ ಆಗದೇ ಜಮೀನದಲ್ಲಿ ಬೆಳೆ ಬರದೇ ಇರುವುದರಿಂದ ಮೃತನು ತಾನು ಮಾಡಿರುವ ಸಾಲವನ್ನು ಮರು ಪಾವತಿ ಮಾಡುವ ಬಗ್ಗೆ ಮಾನಸೀಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೆ ದಿನಾಂಕ 19-04-2018 ರಂದು ಮದ್ಯಾಹ್ನ 15-00 ಗಂಟೆಯಿಂದ 20-00 ಗಂಟೆಯ ನಡುವಿನ ಅವಧಿಯಲ್ಲಿ ಅಣ್ಣಿಗೇರಿಯ ತನ್ನ ಜಮೀನದಲ್ಲಿ ಯಾವುದೋ ವಿಷ ಸೇವನೆ ಮಾಡಿದ್ದು ಇರುತ್ತದೆ ಸದರೀಯವನನ್ನು ಅಣ್ಣಿಗೇರಿ ಸಕಾರಿ ಆಸ್ಪತ್ರೆಯಲ್ಲಿ ಉಪಚಾರ ಮಾಡಿ ಹೆಚ್ಚಿನ ಉಪಚಾರಕ್ಕಾಗಿ ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ಕರೆದುಕೊಮಡು ಹೋಗುವಾಗ ಮಾರ್ಗ ಮಧ್ಯದಲ್ಲಿಯೇ ಉಪಚಾರ ಹೊಂದದೇ ಮೃತಪಟ್ಟಿದ್ದು ಇರುತ್ತದೆ ಅಂತಾ ನಮೂದ ಇರುವಂತೆ ಕ್ರಮ ಕೈಗೊಂಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.