ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, April 22, 2018

CRIME INCIDENTS 22-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:22-04-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 22-04-2018 ರಂದು 11-05 ಗಂಟೆಗೆ ಕಾರ್ ನಂ ಕೆಎ25ಪಿ-4690 ನೇದ್ದರ ಚಾಲಕನು ಜೆಡಿಎಸ್್ ಪಕ್ಷಕ್ಕೆ ಸಂಭಂದಿಸಿದಂತೆ ಪ್ರಚಾರದ ಪ್ರಣಾಳಿಕೆಯುಳ್ಳ ಪಾಂಪ್ಲೇಟ್ಸ್ ಗಳನ್ನು ಯಾವುದೆ ಅನುಮತಿ ಇಲ್ಲದೆ ಮುದ್ರಕರ ಹೆಸರು ಇಲ್ಲದೆ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯದೆ ಮುದ್ರಣ ಮಾಡಿಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಣೆ ಮಾಡಿ ಪಾಂಪ್ಲೇಟ್ಸಗಳನ್ನು ಕಾರಿನಲ್ಲಿ ನರಗುಂದ ಕಡೆಯಿಂದ ನವಲಗುಂದ ಕಡೆಗೆ ಬರುವಾಗ ಚೆಕ್ ಪೊಸ್ಟ್ ನಲ್ಲಿ ಸಿಕ್ಕ ಅಫರಾಧ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 88/2018 ಕಲಂ REPRESENTATION OF PEOPLE ACT, 1950,1951,1989 (U/s-127A)ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 22-04-2018 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ಫಿರ್ಯದಿ ಅರವಿಂದ ಹೊಳೆಣ್ಣವರ ಇತನು ತನ್ನ ಹೊಲದಲ್ಲಿ ಕಸ ತೆಗೆದು ಬೆಂಕಿ  ಹಚ್ಚುತ್ತಿರುವಾಗ ಆರೋಪಿ ಸಂಗಪ್ಪ ಕುಂಬಾರ ಇತನು ಇಟ್ಟಿದ್ದ ಸ್ವಲ್ಪ ಕಣಕಿಗೆ ಬೆಂಕಿ ಹತ್ತಿತು ಆಗ ಫಿರ್ಯಾದಿ ಬೆಂಕಿ ಆರಿಸುವಷ್ಟರಲ್ಲಿ ಸದರಿ ಆರೋಪಿ ಸಂಗಪ್ಪ ಕುಂಬಾರನು ಒಮ್ಮೆಲೆ ಅವಾಚ್ಯ ಶಬ್ದದಿಂದ ಬೈದಾಡುತ್ತಾ ಬಂದವನೆ ಬಡಿಗೆಯಿಂದ ಹೊಡಿಬಡಿ ಮಾಡಿ ಸಾದ ಗಾಯ ಪಡಿಸಿ ಜೀವಧ ಧಮಕಿ ಹಾಕಿದ ಅಪರಾಧ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 89/2018 ಕಲಂ IPC 1860 (U/s-324,504,506) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ಆರೇಕುರಹಟ್ಟಿ ಗ್ರಾಮದ ಸರ್ಕಾರಿ ಶಾಲೆ ಹತ್ತಿರ ದಿನಾಂಕಃ 21-04-2018 ರಂದು 16-10 ಅವರ್ಸಕ್ಕೆ ಆರೋಪಿ ಪರುಶುರಾಮ ಹನುಮಂತಪ್ಪ ಮೇಣದಾಳ ಇತನು ತನ್ನ ಬಾಬತ್ತ ಮೋಟಾರ ಸೈಕಲ ನಂಬರಃ ಕೆಎಃ37-ಎಕ್ಸ-5741 ನೇದ್ದನ್ನು ನವಲಗುಂದ ಕಡೆಯಿಂದಾ ಹುಬ್ಬಳ್ಳಿ ಕಡೆಗೆ ಅತೀವೇಗವಾಗಿ ನಿರ್ಲಕ್ಷತನದಿಂದಾ ನಡೆಯಿಸಿಕೊಂಡು ಬಂದು ಅರೇಕುರಹಟ್ಟಿ ಸರ್ಕಾರಿ ಶಾಲೆ ಹತ್ತಿರ ಮೋಟಾರ ಸೈಕಲ ಸ್ಕೀಡ್ ಮಾಡಿ ಕೆಡವಿ ಅಪಘಾತಪಡಿಸಿ ತಾನೇ ಭಾರಿ ಗಾಯಪಡಿಸಿಕೊಂಡ ಅಪರಾಧ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 90/2018 ಕಲಂ IPC 1860 (U/s-279,338) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕಃ 21/04/2018 ರಂದು 23-00 ಗಂಟೆ ಸುಮಾರಕ್ಕೆ ಪೂನಾ ಬೆಂಗಳುರ ರಾಷ್ಟ್ರೀಯ ಹೆದ್ದಾರಿಯ ಮೇಲೆ ತಡಸ ಚೆಕ್ ಪೋಸ್ಟ ಮುಂದೆ ಲಾರಿ ನಂಃ ಟಿ.,ಎನ್.-29/ಬಿ.ಎ-8878 ನೇದ್ದನ್ನು ಅದರ ಚಾಲಕ ಸೆಲ್ವರ್ ರಾಜು ಸಾಃ ಧರ್ಮಪೂರಿ ಇತನು ಹಾವೇರೆ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬಹಳ ಜೋರಿನಿಂದ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಚೆಕ್ ಪೊಸ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿರ್ಯಾದಿಯ ಕೈಯಲ್ಲಿಯ ಮೋಟರಲಾ ವಿ.ಹೆಚ್.ಎಫ್.ಕಂಪನಿಯದ್ದು  ವಾಕಿ ಟಾಕಿ ಹಾಗೂ ಸರಕಾರಿ ಬ್ರೈಟ್ ಲೈಟ್ ಟಾರ್ಚ್ ಬ್ಯಾಟರಿಗೆ ಬಡೆಯಿಸಿ ಕೆಳಗೆ ಬಿಳುವಂತೆ ಮಾಡಿ ಅವುಗಳ ಮೇಲೆ ಹಾಸಿ ಲುಕ್ಷಾಣಪಡಿಸಿದ ಅಪರಾಧ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 128/2018 ಕಲಂ IPC 279 ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

5. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ-22-04-2018 ರಂದು ಮದ್ಯಾನ್ಹ 1-30 ಗಂಟೆಯ ಸುಮಾರಿಗೆ ಕಲಘಟಗಿ ಮುಂಡಗೋಡ ರಸ್ತೆಯ ಮೇಲೆ ಹನಮಾಪೂರ ಕ್ರಾಸ್ ಹತ್ತೀರ ಮೋಟಾರ್ ಸೈಕಲ್ ನಂ KA-25-EC-7934 ನೇದ್ದರ ಚಾಲಕನು ತನ್ನ ಮೋಟಾರ್ ಸೈಕಲ್ ಹಿಂದುಗಡೆಗೆ ಎರಡು ಜನರಿಗೆ ಕೂಡ್ರಿಸಿಕೊಂಡು ಕಲಘಟಗಿ ಕಡೆಯಿಂದಾ ಮುಂಡಗೋಡ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಿತನದಿಂದ ರಾಂಗ್ ಸೈಡಿನಲ್ಲಿ ನೆಡೆಸಿಕೊಂಡು ಹೋಗಿ ಆಲದಕಟ್ಟಿ ಕಡೆಯಿಂದಾ ಕಲಘಟಗಿ ಕಡೆಗೆ ಸೈಡಿನಲ್ಲಿ ನೆಡೆಸಿಕೊಂಡು ಬರುತ್ತಿದ್ದ ಪಿರ್ಯಾಧಿ ಬಾಭತ್ ಮೋಟಾರ್ ಸೈಕಲ್ ನಂ KA-25-EX-1270 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಪಿರ್ಯಾಧಿ ಮೋಟಾರ್ ಸೈಕಲ್ ಹಿಂದೆ ಕುಳಿತ ದ್ಯಾಮಣ್ಣ ಶಿರಗುಪ್ಪಿ ಎಂಬುವರ  ಬಲಗಾಲಿಗೆ ಗಾಯಪಡಿಸಿ ತನ್ನ ಮೋಟಾರ್ ಸೈಕಲ್ ಹಿಂಬದಿ ಕುಳಿತ ಸಿದ್ದನಗೌಡ ಪಾಟೀಲ ಎಂಬುವರಿಗೂ ಸಹಾ ಗಾಯಪಡಿಸಿದ್ದಲ್ಲದೆ  ಗಾಯಾಳು ಜನರಿಗೆ ಉಪಚಾರಕ್ಕೆ ಸಹಕರಿಸದೆ & ಘಟನೆಯ ವಿಷಯವನ್ನು ಪೊಲೀಸ ಠಾಣೆಗೆ ತಿಳಿಸಿದೆ ಮೋಟಾರ್ ಸೈಕಲ್ ಅಲ್ಲಿಯೇ ಬಿಟ್ಟು ಓಡಿ ಹೋದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 130/2018 ಕಲಂ IPC 1860 (U/s-279,337,338); INDIAN MOTOR VEHICLES ACT, 1988 (U/s-134,187) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.