ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, April 23, 2018

CRIME INCIDENTS 23-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:23-04-2018 ರಂದು ವರದಿಯಾದ ಪ್ರಕರಣಗಳು

1.ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಹಳಿಯಾಳ ದಾರವಾಡ ರಸ್ತೆಯ ಮಾವಿನಕೊಪ್ಪ ಗ್ರಾಮದ ಸಮೀಪ ಡೊಂಕ ಹಳ್ಳದ ಹತ್ತಿರ ರಸ್ತೆಯ ಮೇಲೆ ಕಾರ ನಂಬರ ಕೆ.ಎ41/ಎಮ್- 7716 ನೇದ್ದರ ಚಾಲಕನು ತಾನು ನಡೆಯಿಸುತ್ತಿದ್ದ ಕಾರನ್ನು ದಾರವಾಡ ಕಡೆಯಿಂದ ಹಳಿಯಾಳ ಕಡೆಗೆ ಅತೀ ಜೋರಿನಿಂದ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಅದರ ವೇಗವನ್ನು ಕಂಟ್ರೋಲ ಮಾಡಲಾಗದೆ ಎದುರಿನಿಂದ ಹಳಿಯಾಳ ಕಡೆಯಿಂದ ದಾರವಾಡ ಕಡೆಗೆ ಹೊರಟ ಮೋಟರ ಸೈಕಲ್ಲ ನಂಬರ ಕೆ.ಎ 65/ಎಚ್-0503 ನೇದ್ದಕ್ಕೆ ಡಿಕ್ಕಿ ಮಾಡಿ ಅದರ ಸವಾರನಾದ ಶರಣ ಬಸವ ತಂದೆ ದೇವೇಂದ್ರಪ್ಪ ಭೂಳ್ಳಾಪೂರ ಸಾ|| ಮುರ್ಕವಾಡ ತಾ|| ಹಳಿಯಾಳ ಅವನಿಗೆ ಭಾರಿ ದು:ಖಾಪತ್ತ ಪಡಿಸಿ ಗಾಯಾಳುವಿಗೆ ಉಪಚಾರಕ್ಕೆ ಸಹಕರಿಸದೆ ಸುದ್ದಿಯನ್ನು ಠಾಣೆಗೆ ತಿಳಸದೆ ವಾಹನ ಸಮೇತ ಪರಾರಿಯಾಗಿ ಹೋಗಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 60/2018 ಕಲಂ 279.338.ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಅಂಚಟಗೇರಿ ಗ್ರಾಮದ  ಆರೋಪಿತನಾದ ನಾಗರಾಜ ತಂದೆ ಈರಪ್ಪ ಹರಿಜನ ವಯಾಃ 19 ವರ್ಷ ಸಾಃ ಚಳ್ಳೂರ ತಾಃಗಂಗಾವತಿ ಜಿಃ ಕೊಪ್ಪಳ ಇತನು ಅಂಚಟಗೇರಿ ಗ್ರಾಮದ ಅಗ್ರಿಟೇಕ್ ಉಪ್ಪಿನಕಾಯಿ ಫ್ಯಾಕ್ಟರಿ ಹತ್ತಿರ ರಸ್ತೆ ಬಾಜು ಕಳುವು ಮಾಡುವ ಇರಾದೆಯಿಂದ  ನಿಂತಾಗ ಸಿಕ್ಕಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 129/2018 ಕಲಂ 109 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. . ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:, ಕು. ಸುಶ್ಮಿತಾ ತಂದೆ ಸುಭಾಸ ಹುಲಜತ್ತಿ ವಯಾ. 16 ವರ್ಷ ಸಾ. ಸುಳ್ಳ ಇವಳು, ತಾನೂ ಎಸ್.ಎಸ್.ಎಲ್.ಸಿ. ಪರಿಕ್ಷೆಯನ್ನು ಸರಿಯಾಗಿ ಬರೆದಿರುವುದಿಲ್ಲ ಅಂತ ಮಾನಸಿಕ ಮಾಡಿಕೊಂಡು, ತನ್ನಷ್ಟಕ್ಕೆ ತಾನೇ ಮನೆಯಲ್ಲಿದ್ದ, ಹೇನಿನ ಪುಡಿಯನ್ನು ಸೇವನೆ ಮಾಡಿ, ಅಸ್ವಸ್ಥಗೊಂಡು, ಉಪಚಾರ ಕುರಿತು ಕಿಮ್ಸ್ ಆಸ್ಪತ್ರೆಗೆ ಹುಬ್ಬಳ್ಳಿಯಲ್ಲಿ ಉಪಚಾರಕ್ಕೆ ಹೋಗುತ್ತಿರುವಾಗ  ಉಪಚಾರ ಫಲಿಸದೇ ಈ ದಿವಸ ದಿನಾಂಕ: 23-04-2018 ರಂದು ಮದ್ಯಾಹ್ನ 12-15 ಗಂಟೆಗೆ ಮೃತಪಟ್ಟಿದ್ದು ವಿನಃ ಸದರಿಯವಳ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಮೃತಳ ತಂದೆ ಸುಭಾಸ ಶಂಕ್ರಪ್ಪ ಹುಲಜತ್ತಿ ಇವರು ಫಿಯಾಱಧೀ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ22/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ: ನವಲಗುಂದಲ್ಲಿ ಬಿ.ಜೆ.ಪಿ. ಪಕ್ಷದ ಅಭ್ಯರ್ಥಿ ಶಂಕರ ಬ. ಪಾಟೀಲ ಮುನೇನಕೊಪ್ಪ ರವರ ಕಾರ್ಯಕರ್ತರು ನಾಮಪತ್ರ ಸಲ್ಲಿಸುವ ರಾಲಿಯಲ್ಲಿ ಹೆಚ್ಚುವರಿ ಧ್ವಜಗಳನ್ನು ಹಾರಿಸಿ ಮತ್ತು ಲಿಂಗರಾಜ ಸರ್ಕಲ್ ದಲ್ಲಿ ಪಟಾಕಿಗಳನ್ನು ಸಿಡಿಸಿ ಚುನಾವಣೆ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 94/2018 ಕಲಂ REPRESENTATION OF PEOPLE ACT, 1951 & 1988 (U/s-127A); IPC 1860 (U/s-290) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.