ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, April 29, 2018

CRIME INCIDENTS 29-04-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-04-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ತಾಲೂಕಿನ ಮುಕ್ಕಲ್ಲ ಗ್ರಾಮದ ಜಮೀನ ರಿಸ ನಂ 302 ನೇದ್ದರಲ್ಲಿಆರೋಪಿತರಾದರವರು ಭೀಮರೆಡ್ಡಿ ಕುತಱಕೊಟಿ ಹಾಗೂ ಇನ್ನೂ ಇಬ್ಬರೂ  ವಿರೇಶ ಚವರೆಡ್ಡಿ ಇವರ ಮಾವ ಯಲ್ಲಪ್ಪಗೌಡ ತಂದೆ ಈರನಗೌಡ ಶಂಕ್ರಗೌಡ್ರ ವಯಾ 40 ವರ್ಷ ಸಾ: ಮುಕ್ಕಲ್ಲ ಈತನ ಹೆಂಡತಿ ಮೀನಾಕ್ಷಿ ಇವಳೊಂದಿಗೆ ಹಲವಾರು ವರ್ಷಗಳಿಂದ ಅನೈತಿಕ ಸಂಬಂಧಹೊಂದಿದ್ದು ಅದಕ್ಕೆ ಅವನು ವಿರೋದ ವ್ಯಕ್ತ ಪಡಿಸಿದ್ದಕ್ಕೆ ಅವನು ಹೊಲಕ್ಕೆ ಹೋದಾಗ ತನ್ನೊಂದಿಗೆ ಇತರರನ್ನು ಸೇರಿಸಿಕೊಂಡು ಅವನ ಕಣ್ಣಿಗೆ ಖಾರದ ಪುಡಿ ಎರಚಿ ಯಾವದೋ ಹರಿತವಾದ ಆಯುಧದಿಂದ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 132/2018 ಕಲಂ 302 ಐಪಿಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ :ಕಲಘಟಗಿ ಯಲ್ಲಾಪೂರ ರಸ್ತೆಯ ಮೇಲೆ ಫಾರೆಸ್ಟ ನರ್ಸರಿ ಹತ್ತೀರ ಗೂಡ್ಸ ಕ್ಯಾಂಟರ್ ನಂ MH-04-HS-0875 ನೇದ್ದರ ಚಾಲಕನು ಯಲ್ಲಾಪೂರ ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ತನ್ನ ಮುಂದಿನ ವಾಹನಕ್ಕೆ ಓವರಟೇಕ್ ಮಾಡಿಕೊಂಡು ರಾಂಗ್ ಸೈಡಿನಲ್ಲಿ ಬಂದು ಕಲಘಟಗಿ ಕಡೆಯಿಂದಾ ಹುಲಗಿನಕೊಪ್ಪ ಕಡೆಗೆ ಹೊರಟ ಮೋಟಾರ್ ಸೈಕಲ್ ನಂ  KA-27-EJ-9293 ನೇದ್ದಕ್ಕೆ ಡಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ್ ಸೈಕಲ್ ಸವಾರನಾದ ವೀರುಪಾಕ್ಷಪ್ಪ ತಂದೆ ಫಕ್ಕೀರಪ್ಪ ಭೀಮನವರ ಇವನಿಗೆ ಗಂಭೀರ ಸ್ವರೂಪದ ಗಾಯಪಡಿಸಿ ಮೋಟಾರ್ ಸೈಕಲ್ ಹಿಂಬದಿ ಕುಳಿತ ಗಂಗಮ್ಮಾ ಕೋಂ ವೀರುಪಾಕ್ಷಪ್ಪ ಭೀಮನವರ 35 ವರ್ಷ ಸಾ..ಶ್ಯಾಡಂಭಿ ತಾ..ಶಿಗ್ಗಾಂವ ಇವಳಿಗೂ ಸಹಾ ಗಂಭೀರ ಸ್ವರೂಪದ ಗಾಯಪಡಿಸಿ ಸ್ಥಳದಲ್ಲಿಯೇ ಮರಣಪಡಿಸಿದ್ದಲ್ಲದೆ ಗಾಯಾಳು ಜನರಿಗೆ ಉಪಚಾರಕ್ಕೆ ಸಹಕರಿಸದೆ & ಘಟನೆಯ ವಿಷಯವನ್ನು ಪೊಲೀಸ ಠಾಣೆಗೆ ತಿಳಿಸದೆ ವಾಹನ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಈ ಕುರಿತು  ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 133/2018 ಕಲಂ 279.338.304(ಎ) ಹಾಗೂ ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಗುಡಗೇರಿ ಗ್ರಾಮದ ಮೃತ ಶ್ರೀಮತಿ ನೀಲಮ್ಮ ಕೋಂ ಮಲ್ಲಪ್ಪ ಸಂಚಗಾರ ವಯಾಃ70 ಇವಳು ಈಗ ಸುಮಾರು 4-5 ವರ್ಷಗಳ ಹಿಂದೆ ಅವಳ ಗಂಡ ತೀರಿಕೊಂಡಿದ್ದಕ್ಕೆ ಅವಳು ಮಾನಸೀಕಳಾಗಿ ಭುದ್ಧಿ ಭ್ರಮಣೆಯಾಗಿದ್ದರಿಂದ ಅವಳಿಗೆ ಖಾಸಗೀ ವೈಧ್ಯೋಪಚಾರ ಮಾಡಿಸಿದರೂ ಗುಣಮುಖಳಾಗದೇ ಇದ್ದುದರಿಂದ ಮತ್ತು ಅವಳು ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದುದರಿಂದ ಅವಳು ದಿನಾಂಕಃ 26/04/2018 ರ ಮುಂಜಾನೆ 0900 ಗಂಟೆಯಿಂದ ದಿನಾಂಕಃ29/04/2018 ರ ಮುಂಜಾನೆ 0930 ಗಂಟೆಯ ನಡುವಿನ ಅವಧಿಯಲ್ಲಿ ಗುಡಗೇರಿ ಶಹರದ ಸಿಧ್ಧನ ಹೊಂಡದಲ್ಲಿ ಅಕಸ್ಮಾತ ನೀರಲ್ಲಿ ಬಿದ್ದು ಮುಳುಗಿ ಮೃತಪಟ್ಟಿರಬಹುದು ವಿನಃ ಅವಳ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಫಿಯಾಱದಿ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2018 ಕಲಂ 174.ಸಿ.ಆರ್.ಪಿ.ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.