ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, May 30, 2018

CRIME INCIDENTS 30-05-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:30-05-2018 ರಂದು ವರದಿಯಾದ ಪ್ರಕರಣಗಳು

1.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ನವಲಗುಂದ ರಸ್ತೆ ಸೋಮಾಪೂರ ಗ್ರಾಮದ ಕನ್ನಡ ಶಾಲೆ ಹತ್ತಿರ ರಸ್ತೆ ಮೇಲೆ ಮೋಟರ್ ಸೈಕಲ್ ನಂ KA-25-HA-2397 ನೇದರ ಚಾಲಕನು ತನ್ನ ಮೋಟರ್ ಸೈಕಲನ್ನು ಧಾರವಾಡ ಕಡೆಯಿಂದ ನವಲಗುಂದ  ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಮೋಟರ್ ಸೈಕಲ ವೇಗ ನಿಯಂತ್ರಣ ಮಾಡಲಾಗದೇ ರಸ್ತೆ ಎಡಸೈಡಿನಲ್ಲಿ ಅದೇ ಮಾರ್ಗವಾಗಿ ಹೋಗುತ್ತಿದ್ದ ಪಿರ್ಯಾದಿದಾರನ ಮಲ್ಲೇಶ ದಂಡುನ್ನವರ ಇವರ ಎತ್ತಿಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಅಪಘಾತದಲ್ಲಿ ಎತ್ತಿಗೆ ಹಾಗೂ ತನಗೆ ಸಾದಾ ವ ಬಾರೀ ಗಾಯಪಡಿಸಿದಲ್ಲದೇ ಮೋಟರ್ ಸೈಕಲ ಹಿಂದೆ ಕುಳಿತ ಹನಮಂತಗೌಡ ತಂದೆ ಶಿವನಗೌಡ ಪಾಟೀಲ ವಯಾ-38 ವರ್ಷ ಸಾ: ಸೋಮಾಪೂರ ಇವನ ತಲೆಗೆ ಬಾರೀ ಗಾಯಪಡಿಸಿ ಉಪಚಾರಕ್ಕೆ ಹೋಗುತ್ತಿದ್ದಾಗ ಮಾರ್ಗ ಮದ್ಯದಲ್ಲಿ ಮೃತಪಡುವಂತೆ ಮಾಡಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 141/2018 ಕಲಂ 279.337.338.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಹೆಬಸೂರ ಗ್ರಾಮದ ಧಾರವಾಡ ರಸ್ತೆಯ ಪಕ್ಕದಲ್ಲಿರುವ ಪಿರ್ಯಾದಿಯ ಫಿರಸಾಬ ನಧಾಪ ಇವರ  ಕೃಷಿ ಜಮೀನು ಸರ್ವೆ ನಂ. 543/2 ನೇದ್ದರಲ್ಲಿಯ ದನ ಕಟ್ಟುವ ಶೆಡ್ ನಲ್ಲಿ ಕಟ್ಟಿದ್ದ 1] ಒಂದು ಎರಡು ಹಲ್ಲು ಹಚ್ಚಿದ್ದ, ಮಾಸ ಬಣ್ಣದ, ನೆಟ್ಟರಗೊಂಬಿನ ಮೂಡಲ ಜಾತಿಯ ಎತ್ತುಗಳು ಅ.ಕಿ. 24,000/- ರೂ.  2] ಒಂದು ಎರಡು ಹಲ್ಲು ಹಚ್ಚಿದ್ದ, ಮಾಸ ಬಣ್ಣದ, ನೆಟ್ಟರಗೊಂಬಿನ ಮೂಡಲ ಜಾತಿಯ ಎತ್ತುಗಳು ಅ.ಕಿ. 24,000/- ರೂ. ನೇದ್ದವುಗಳನ್ನು ಯಾರೋ ಕಳ್ಳರು ಶೆಡ್ ನ ಶೆಟರ್ಸ್ ತೆಗೆದು ಕಳುವು ಮಾಡಿಕೊಂಡು ಹೋಗಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 152/2018 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಜಾವುರ ಗ್ರಾಮದ ಮೃತ ಶಂಬಣ್ಣ ಸಿದ್ದಪ್ಪ ಕಿರೇಸೂರ ವಯಾ:17 ವರ್ಷ ಸಾ:ಜಾವೂರ ಈತನು ತನ್ನ ಮನೆಯ ಮುಂದೆ ಹಾಕಿದ ಪೈಪಿನಲ್ಲಿ ಸಿಲುಕಿದ ಕಸವನ್ನು ತೆಗೆಯಲು ಹೋದಾಗ ಒಮ್ಮಿಂದೊಮ್ಮೆಲೆ ಸಿಡಿಲು ಬಡಿದು ಮೃತಪಟ್ಟಿರುತ್ತಾನೆ. ಇತನ  ಮರಣದಲ್ಲಿ ಬೇರೆ ಯಾರ ಮೇಲೂ ಸಂಶಯ ವಗೈರೆ ಇರುವದಿಲ್ಲ ಅಂತಾ ಮೃತನ ತಂದೆಯು ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 23/2018  ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

4. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಪರಸಾಪುರ ಗ್ರಾಮದ  ಮೃತ ಬಸಪ್ಪ ಬಸಪ್ಪ ಕರೆಪ್ಪನವರ ಮತ್ತು ಮಲ್ಲಪ್ಪ ಬಿಮಪ್ಪಾ ಕಿತ್ತೂರ ಕುಡಿ ಹೊಲಕ್ಕೆ ಹೋಗುತ್ತಿರುವಾಗ ದೇವರ ಗುಡಿಹಾಳ ರಸ್ತೆ ಮೇಲೆ ಸಿ.ವ್ಹಿ. ಪಾಟೀಲ ಮನೆ ಹತ್ತಿರ ಚಕ್ಕಡಿಗೆ ಹೊಡಿದ  2 ಎತ್ತುಗಳು ಬೆದರಿ ಓಡಲಾರಂಬಿಸಿದಾಗ ಎತ್ತಿಗೆ ಕಟ್ಟಿದ ಹಗ್ಗ ಬಿಟ್ಟು ಹಿಂದಲೇ ಹಚ್ಚಿಬಿದ್ದಾಗ ಅಲ್ಲಿಯೇ ಬಿದ್ದಾಗ ಅವನನ್ನು ಆಟೋ ರಿಕ್ಷಾದಲ್ಲಿ ಉಪಚಾರಕ್ಕೆಂದು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲ ಮಾಡಿದ್ದು ಉಪಚರ ಫಲಿಸದೆ ಮೃತಪಟ್ಟಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 31/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರವನ್ನು ದಾಖಲಿಸಿದ್ದು ಇರುತ್ತದೆ .


Tuesday, May 29, 2018

CRIME INCIDENTS 29-05-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:29-05-2018 ರಂದು ವರದಿಯಾದ ಪ್ರಕರಣಗಳು

1. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಶಹರದ ಹಳೇ ಅಮೃತೇಶ್ವರ ನಗರದ ನಾಗಪ್ಪನ ಗುಡಿಯ ಮುಂದಿನ ಖುಲ್ಲಾ ಜಾಗೆಯಲ್ಲಿ ಆರೋಪಿತರಾದ 1.ಬಸವರಾಜ ಎಲಬುಗಿಱ 2.ರವಿ ನೂಲ್ವಿಹಾಗೂ ಇನ್ನೂ 03 ಜನರು ಕೊಡಿಕೊಂಡು ಇಸ್ಪಿಟ ಎಲೆಗಳ ಸಾಹಯದಿಂದ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ್ ಅಂಬುವ ಇಸ್ಪಿಟ ಜೂಜಾಟವನ್ನು ಆಡುತ್ತಿದ್ದಾಗ ಸಿಕ್ಕಿದ್ದು ಅವರಿಂದ ರೂ 1830-00 ಗಳನ್ನು ವಶಪಡಿಸಿಕೊಂಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 64/2018 ಕಲಂ 87 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಕಲ್ಲೂರ ಗ್ರಾಮದ  ಮೃತ ಪರಮೇಶ್ವರ ಮಲ್ಲೇಶಪ್ ಇರಪ್ಪನವರ ವಯಾ 55 ವರ್ಷ ಸಾಃ ಕಲ್ಲೂರ ಇತನು ಧಾರವಾಡ ಕೆ,ವಿ,ಜಿ ಬ್ಯಾಂಕಿನಲ್ಲಿ 2015-16 ನೇ ಸಾಲಿನಲ್ಲಿ ಜಮೀನ ಮೇಲೆ ಬೆಳೆಸಾಲ ಹಾಗೂ ಬೋರ ಹಾಕಿಸಲು ಸಾಲ ಅಂತಾ ಒಟ್ಟು 6 ಲಕ್ಷ ಸಾಲ ಪಡೆದಿದ್ದು ಸರಿಯಾಗಿ ಮಳೆ ಬೆಳೆ ಬಾರದೆ ಇದ್ದುದರಿಂದಾ ಸಾಲ ತುಂಬಲು ಆಗದೆ ಇದ್ದದರಿಂದಾ ಮತ್ತು ಮಗಳಿಗೆ ಕಾಲೇಜಿಗೆ ಹಚಲು ಹಣದ ತೂಂದರೆ ಆದುದ್ದರಿಂದಾ ಮಾನಸಿಕ ಮಾಡಿಕೊಂಡು ದಿನಾಂಕ 26-5-2018 ರಂದು ಸಾಯಂಕಾಲ 5-30 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ದನದ ಹಕ್ಕಿಯಲ್ಲಿ ಯಾವದೋ ವಿಷಕಾರಕ ಎಣ್ಣಿಯನ್ನು ಸೇವಿಸಿ ಒದ್ದಾಡುತ್ತಿದ್ದಾಗ ಉಪಚಾರಕ್ಕೆ ಅಂತಾ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಧಾರಖಲಮಾಡಿ ಹೇಚ್ಚಿನ ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕೀಮ್ಸ ಆಸ್ಪತ್ರೆಯಲ್ಲಿ ಉಪಚಾರ ಕೂಡಿಸುತ್ತಿದ್ದಾಗ ಉಚಾರಪಲೀಸದೆ ಈ ದಿವಸ ದಿನಾಂಕ 29-5-2018 ರಂದು ಬೆಳಗಿನ 05-10 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ, ಸದರಿ ನನ್ನ ಗಂಡನ ಮರಣದಲ್ಲಿ ಬೇರೆ ಏನು ಮತ್ತು ಯಾರ ಮೇಲೂ ಸಂಶಯ ವಗೈರೆ ಇರುವದಿಲ್ಲಾ ಅಂತಾ ಫಿಯಾಱಧೀ ನೀಡಿದ್ದು ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿಯುಡಿನಂ 15/2018 ಕಲಂ 174 ಸಿ.ಆರ.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತೆದೆ.

Monday, May 28, 2018

CRIME INCIDENTS 28-05-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:28-05-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಹುಬ್ಬಳ್ಳಿ ರಸ್ತೆ ಉಗ್ನಿಕೇರಿ ಗ್ರಾಮದ ಸಮಿಫ ರಸ್ತೆ ಮೇಲೆ ಯಾವದೋ ವಾಹನದ ಚಾಲಕನು ತನ್ನ ವಾಹವನ್ನು ಹುಬ್ಬಳ್ಳಿಯಿಂದ ಕಲಘಟಗಿ ಕಡೆಗೆ ಅತಿಜೋರು ಅವಿಚಾರ ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಅನಾಮದೇಯ ಸುಮಾರು 45 ರಿಂದ 50 ವರ್ಷ ಹೆಣ್ಣು ಮಗಳು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೊರಟವಳಿಗೆ ಅಥವಾ ರಸ್ತೆ ದಾಟುತ್ತಿದ್ದವಳಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಸ್ಥಳದಲ್ಲಿಯೇ ಮರಣ ಪಡಿಸಿ ಬೇರೆ ವಾಹನಗಳು ಶವ ಮೇಲೆ ಹಾಯ್ದು ಹೋಗಿ ಶವ ಗುರುತು ಸಿಗದಂತೆ ಜಜ್ಜಿಹೋಗಲು ಕಾರಣನಾಗಿ ವಾಹನ ಸಮೇತ ಪರಾರಿಯಾದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 149/2018 ಕಲಂ 279.304(ಎ) ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬಮ್ಮಿಗಟ್ಟಿ ಗ್ರಾಮದ ಪಿರ್ಯಾಧಿ ವಾಸದ ಮನೆಯ ಹತ್ತೀರ  ಆರೋಪಿತರಾದ ಮುಗಪ್ಪಾ ಸಾದರ ಲಿಲಿತಾ ಸಾದರ ಇವರು ಕೂಡಿಕೊಂಡು  ಶಿವಪ್ಪಾ ಸಾದರ ಇವರ ಮನೆಯ ನೀರು ತಮ್ಮ ಮನೆಯೊಳಗೆ ಬರುತ್ತಿದ್ದರಿಂದ ಆ ಮಳೆಯ ನೀರನ್ನು ಒಳಗೆ ಬಾರದೆ ಹಾಗೆ ಕಾಲುವೆ ಮಾಡುತ್ತಿರುವಾಗ ಆರೋಪಿತರು ಬೈದಾಡುತ್ತಾ ಇವನು ಬಡಿಗೆಯಿಂದಾ ಪಿರ್ಯಾದಿಯ ಎಡಭುಜಕ್ಕೆ ಹೊಡೆದು ಪೆಟ್ಟು ಮಾಡಿದ್ದು ಕೈಯಿಂದಾ ಹೊಡಿಬಡಿ ಮಾಡಿ ಇದೊಮದ ಸಾರಿ ಉಳಕೊಂಡಿ ಇನ್ನೊಂದು ಸಾರಿ ಸಿಕ್ರ ನಿನ್ನನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 150/2018 ಕಲಂ 323.324.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Friday, May 25, 2018

CRIME INCIDENTS 25-05-2018
 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-05-2018 ರಂದು ವರದಿಯಾದ ಪ್ರಕರಣಗಳು

1.   ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಗ್ರಾಮದ  ಆರೋಪಿತನಾದ ಮಾದಯ್ಯ ಅಣ್ಣಿಗೇರಿ ಉಪನೋಂದಣಿ ಇತನು ಕಚೇರಿಯಲ್ಲಿ ಉಪನೋಂದಣಿ ಅಧಿಕಾರಿ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು ಸದರಿಯವನು ನೊಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂದಿಸಿದ ದಿನಾಂಕ 12-02-2018 ಕ್ಕೆ ಸಂಬಂದಿಸಿದ ಮುದ್ರಾಂಕ ಮತ್ತು ನೊಂದಣಿ ಶುಲ್ಕ ರೂ 2,41,000=00 ಹಾಗೂ ದಿನಾಂಕ 07-05-2018 ಕ್ಕೆ ಸಂಬಂದಿಸಿದ ಮುದ್ರಾಂಕ ಮತ್ತು ನೊಂದಣಿ ಶುಲ್ಕ ರೂ 52,605=00 ಒಟ್ಟು 2,93,605=00 ರೂ ನೇದ್ದನ್ನು ಸರಕಾರಕ್ಕೆ ಜಮಾ ಮಾಡದೇ ದುರುಪಯೊ ಪಡಿಸಿಕೊಂಡು ಅಪರಾಧಿಕ ನಂಬಿಕೆ ದ್ರೊವೆಸಗಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 63/2018 ಕಲಂ 408 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಬೇಲೂರ ಗ್ರಾಮದ ಮೃತ : ಪಕ್ಕೀರಪ್ಪ ತಾಯಿ ಅಡಿವೆವ್ವ ಚಿಕ್ಕಮನಿ. ವಯಾಃ 51 ವರ್ಷ. ಸಾಕೀನಃ ಬೇಲೂರ. ತಾಃಜಿಃ ಧಾರವಾಡ. ಇವನು ಸರಾಯಿ ಕುಡಿತದ ಚಟಕ್ಕೆ ಅಂಟಿಕೊಂಡು ವೀಪರಿತ ಸಾರಾಯಿ ಕುಡಿದು ಬಂದು ಅದರ ನಷೆಯಲ್ಲಿ ತನ್ನ ಮನೆಯ ಪಕ್ಕದಲ್ಲಿರುವ ಮಲ್ಲಪ್ಪ ದಳವಾಯಿ ಸಾಃ ಬೇಲೂರ ಇವರು ಕಟ್ಟಿಸುತ್ತಿರುವ ಹೊಸ ಮನೆಯಲ್ಲಿ ಕಟ್ಟಿಗೆಯ ಬೆಲಗಿಗೆ ಒಂದು ಖಾತಿ ಹಗ್ಗದ ಸಹಾಯದಿಂದ ದಿಃ 24/05/2018 ರಂದು ರಾತ್ರಿ 11.45 ಗಂಟೆಯಿಂದ ದಿಃ 25/05/2018 ರಂದು ನಸುಕಿನ 06.00 ಗಂಟೆ ನಡುವಿನ ಅವಧಿಯಲ್ಲಿ ತನ್ನಷ್ಟಕ್ಕೆ ತಾನೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ವಿನಃ ಸದರಿಯವ ಸಾವಿನಲ್ಲಿ ಬೇರೆ ಯಾವ ಸಂಶಯ ವಗೈರೆ ಇರುವುದಿಲ್ಲ ಅಂತಾ ಮೃತನ ಮಗ ವರದಿ ಕೊಟ್ಟಿದ್ದುದನ್ನು ದಾಖಲಿಸಿದ್ದು  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 14/2018  ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Thursday, May 24, 2018

CRIME INCIDENTS 24-05-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:24-05-2018 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ ಠಾಣಾ ವ್ಯಾಪ್ತಿಯ: ಕುರಬರ ಓಣೆ ಕುಂದಗೋಳ ಗ್ರಾಮದಲ್ಲಿ  ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಶಿವಪೂರ ಮಹಾಮನೆಯ ಗವಿಯ ಹತ್ತಿರ, ಪಿರ್ಯಾದಿಯ ಅಣ್ಣ ಈರಣ್ಣ ಮಹಾಂತಪ್ಪ ಹೊಂಬಳ, ವಯಾ: 30 ವರ್ಷ, ಸಾ: ಕುರಬಗೇರಿ ಓಣಿ ಕುಂದಗೋಳ ಈತನು ಕುಂದಗೋಳ ಕಲ್ಯಾಣಪೂರದ ಬಸವಣ್ಣಜ್ಜನವರು ಹಾಗೂ ಅವರ ಭಕ್ತಾದಿಗಳ ಸಂಗಡ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಕುರಿತು ಹೋಗುವ ಸಮಯದಲ್ಲಿ ಶಿವಪೂರ ಮಹಾಮನೆಯ ಗವಿಯ ಹತ್ತಿರದ ಸ್ಥಳದಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಕುಂದಗೋ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 97/2018 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಧಾರವಾಡ ಅಳ್ನಾವರ ರಸ್ತೆ ಪ್ರಭುನಗರ ಹೊನ್ನಾಪೂರ ಗ್ರಾಮದ ವ್ಯೂವ ಹೀಲ ಹೋಟೆಲ ಹತ್ತಿರ  ರಸ್ತೆ ತಿರುವಿನಲ್ಲಿ ಅಳ್ನಾವರ ಕಡೆಯಿಂದ ಧಾರವಾಡ ಕಡೆಗೆ ಕಾರ ನಂ ಕೆಎ 49 ಎಂ 1346 ನೇದ್ದರ ಚಾಲಕ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯ ವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ತಿರುವಿನಲ್ಲಿ ಕಾರಿನ  ವೇಗ ನಿಯಂತ್ರ ಮಾಡಲಾಗದೇ  ಒಮ್ಮೆಲೇ ರಾಂಗ ಸೈಡಿಗೆ ತೆಗೆದುಕೊಂಡು ಧಾರವಾಡ ಕಡೆಯಿಂದ ಅಳ್ನಾವರ ಕಡೆಗೆ ರಸ್ತೆ ಎಡಸೈಡಿನಲ್ಲಿ ಹೋಗುತ್ತಿದ್ದ ಮೋಟರ ಸೈಕಲ ನಂ ಕೆಎ 25 ಈವಿ 8044 ನೇದ್ದಕ್ಕೆ ಡಿಕ್ಕಿ ಪಡಿಸಿ ಇದೇ ಮಾರ್ಗದಲ್ಲಿ ಸದರಿ ಮೋಟರ ಸೈಕಲ ಹಿಂದೆ ಹೋಗುತ್ತಿದ್ದ ಇನ್ನೋಂದು ಮೋಟರ ಸೈಕಲ ನಂ ಕೆಎ 25 ಎಕ್ಸ 3803 ನೇದ್ದಕ್ಕೆ ಅಪಘಾತ ಪಡಿಸಿ ಎರಡು ಮೋಟರ ಸೈಕಲ ಚಾಲಕರಿಗೆ ಹಾಗೂ ಮೋಟರ ಸೈಕಲ ಹಿಂದೆ ಕುಳಿತವರಿಗೆ  ಸಾದಾ ವ ಭಾರಿ ಗಾಯ ಪಡಿಸಿದ  ಕಾರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 137/2018 ಕಲಂ 279.337.338 ವಾಹನ ಕಾಯ್ದೆ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.Wednesday, May 23, 2018

CRIME INCIDENTS 23-05-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:23-05-2018 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಹೊಸತೆಗೂರ ಗ್ರಾಮದ ಹತ್ತಿರ ಕಾರ್ ನಂಬರ- ಎಮ್.ಎಚ್ 10 ಸಿ ಆರ್- 9996 ನೇದ್ದರ ಚಾಲಕನು ತನ್ನ ಕಾರನ್ನು ಬೆಳಗಾವಿ ಕಡೆಯಿಂದ ಧಾರವಾಡ ಕಡೆಗೆ ಅತೀ ಜೋರಿನಿಂದ ವ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ತೇಗೂರ ಕ್ರಾಸ ಸಮೀಪ ಕಾರ ಮೇಲಿನ ನಿಯಂತ್ರಣ ಕಳೆದುಕೊಂಡು ಕಾರನ್ನು ರಸ್ತೆ ಎಡಕ್ಕೆ ತೆಗೆದುಕೊಂಡು ಹೋಗಿ ಗಟಾರದಲ್ಲಿ ಇಳಿಸಿ ಅಪಘಾತ ಪಡಿಸಿ ಕಾರಿನಲ್ಲಿದ್ದವರಿಗೆ ಸಾದಾ ವ ಭಾರೀ ಗಾಯ ಪಡಿಸಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 85/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಸೂರಶೆಟ್ಟಿಕೊಪ್ಪ ಗ್ರಾಮದಲ್ಲಿ ಗಸ್ತು ಕರ್ತವ್ಯದಲ್ಲಿದ್ದಾಗ ಶಂಕ್ರಪ್ಪ ತಂದೆ ವೀರುಪಾಕ್ಷಪ್ಪ ಮುದ್ಲಿಂಗನ್ನವರ ಸಾ..ಸೂರಶೆಟ್ಟಿಕೊಪ್ಪ ಇವನು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದು ಸದರಿಯವನ ಬಗ್ಗೆ ಊರಲ್ಲಿ ವಿಚಾರಿಸಲಾಗಿ ಸದರಿ ಶಂಕ್ರಪ್ಪ ಮುದ್ಲಿಂಗನ್ನವರ ಇವನು ಈ ಹಿಂದೆ ಒಂದು ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ ಬಗ್ಗೆ ತಿಳಿಸಿದರು. ಮತ್ತು ಸದರಿಯವನ ಬಗ್ಗೆ ನಮ್ಮ ಠಾಣೆಯಲ್ಲಿ ಗುನ್ನಾ ನಂ 123/2017 ಕಲಂ 324, 376, 448, 504, 506 ಐಪಿಸಿ 4, 6 ಪೋಕ್ಸೊ ಕಾಯ್ದೆ ಹಾಗು 62/2018 ಕಲಂ 107 ಸಿಆರ್ ಪಿಸಿ ನೇದವುಗಳು ದಾಖಲಾಗಿದ್ದು ಇರುತ್ತದೆ  ಕಾರಣ ಸದರಿ ಶಂಕ್ರಪ್ಪ ಮುದ್ಲಿಂಗನ್ನವರ ಇವನಿಗೆ ಹಾಗೆ ಬಿಟ್ಟಲ್ಲಿ ಊರಲ್ಲಿ ಮತ್ತೆ ಇನ್ನೂ ಹೆಚ್ಚಿನ ಘೋರ ಸ್ವರೂಪದ ಅಪರಾಧ ಎಸಗುವ ಸಂಭವ ಇದ್ದು  ಹಾಗೂ ಇನ್ನಿತರ ಕಾನೂನ ಬಾಹೀರ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಸಂಜ್ಞೆಯ ಅಪರಾಧ ಚಟುವಟಿಕೆಗಳನ್ನು ಮಾಡುವ  ಸಂಭವ ಇರುತ್ತದೆ ಸದರಿಯವನಿಗೆ ಹಿಡಿಯಲು ಹೋದಾಗ ತಪ್ಪಿಸಿಕೊಂಡು ಓಡಿ ಹೋಗಿದ್ದು ಇರುತ್ತದೆ ಕಾರಣ ಸದರಿಯವನಿಗೆ ಹಾಗೆಯೇ ಬಿಟ್ಟಲ್ಲಿ  ಸಂಜ್ಞೆ ಅಪರಾಧಗಳನ್ನು ಮಾಡಿ ತನ್ನ ಇರುವಿಕೆಯನ್ನು ಮರೆಮಾಚುವ ಸಂಭವ ಕಂಡು ಬಂದಿದ್ದರಿಂದ ಸರಿಯವನ ಮೇಲೆ ಮುಂಜಾಗ್ರತಾ ಕ್ರಮವಾಗಿ ಗುನ್ನಾನಂ 146/2018 ಕಲಂ 109 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ :ಹುಲಿಗಿನಕಟ್ಟಿ ಗ್ರಾಮದ ಮೃತ ರಾಯಪ್ಪ ತಿಪ್ಪಣ್ಣ ಮೂಗಣ್ಣವರ ವಯಸ್ಸು 65 ವರ್ಷ, ಸಾಕಿನ್: ಹುಲಗಿನಕಟ್ಟಿ ಇವನಿಗೆ ಸುಮಾರು 7-8 ವರ್ಷಗಳಿಂದ ಹೊಟ್ಟೆ ನೋವು ಬೆನ್ನು ನೋವು ಬರುತ್ತಿದ್ದರಿಂದ ಹುಬ್ಬಳ್ಳಿ ಕಿಮ್ಸ್, ಧಾರವಾಡದ ಎಸ್.ಡಿ.ಎಮ್ ಆಸ್ಪತ್ರೆಗಳಲ್ಲಿ ಮೂರು ಬಾರಿ ಆಪರೇಷನ್ ಮಾಡಿಸಿ ಔಷಧೋಪಚಾರ ಮಾಡಿಸುತ್ತ ಬಂದಿದ್ದರೂ ಅವನಿಗೆ ಹೊಟ್ಟೆ ಮತ್ತು ಬೆನ್ನಿನ ನೋವು ಕಡಿಮೆ ಆಗದ್ದರಿಂದ ಅದನ್ನೇ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಬೇಸರಗೊಂಡು ದಿ: 23/05/2018 ರಂದು ಮುಂಜಾನೆ 6.30 ಗಂಟೆ ಸುಮಾರಿಗೆ ತನ್ನಷ್ಟಕ್ಕೆ ತಾನೇ ತನ್ನ ಹೊಲದ ಬದುವಿನ ಮೇಲಿನ ಮಾವಿನ ಮರಕ್ಕೆ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ಉರುಲು ಹಾಕಿಕೊಂಡು ನೇತು ಬಿದ್ದು ಒದ್ದಾಡುತ್ತಿದ್ದವನಿಗೆ ಹಗ್ಗ ಬಿಚ್ಚಿ ಕೆಳಗೆ ಇಳಿಸಿ ಉಪಚಾರಕ್ಕೆ ಅಂತ ಮನೆಗೆ ತರುವಾಗ ದಾರಿಯಲ್ಲಿ ಮುಂಜಾನೆ 6.40 ಗಂಟೆಗೆ ಮೃತಪಟ್ಟಿದ್ದು ಅವನ ಸಾವಿನಲ್ಲಿ ಯಾರ ಮೇಲೆ ಯಾವುದೇ ಸಂಶಯ ವಗೈರೆ ಇರುವದಿಲ್ಲಾ ಅಂತಾ ಮೃತನ ಮಗ ಫಿಯಾಱಧೀ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 31/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.


Tuesday, May 22, 2018

CRIME INCIDENTS 22-05-2018


ಧಾರವಾಡ ಜಿಲ್ಲೆಯಲ್ಲಿ ದಿನಾಂಕ:22-05-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ಆಲದಕಟ್ಟಿ ಗ್ರಾಮದ ಹತ್ತಿರ ದೇವೆಂದ್ರಪ್ಪ ತಂದೆ ಫಕ್ಕಿಪ್ಪ ಹರಿಜನ 40 ವರ್ಷ ಸಾ..ತುಮರಿಕೊಪ್ಪ ಇವನು ತನ್ನ ಬಾಭತ್ ಮೋಟಾರ್ ಸೈಕಲ್ ನಂ KA-31-V-0811 ನೇದ್ದನ್ನು ಅರಳಿಹೊಂಡ ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಬಂದು ಆಲದಕಟ್ಟಿ ಕ್ರಾಸ್ ಸಮೀಪ ವೇಗದ ನಿಯಂತ್ರಣ ಮಾಡಲಾಗದೆ ರಸ್ತೆಯ ಬಲಬದಿ ಇರುವ ತೆಗ್ಗಿನಲ್ಲಿ ಕೆಡವಿ ತಾನೆ ತಲೆಗೆ ಮೈಕೈಗೆ ಗಂಭಿ ಗಾಯಪಡಿಸಿಕೊಂಡು ಸ್ಥಳದಲ್ಲಿಯೇ ಮರಣಹೊಂದಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 143/2018 ಕಲಂ 279.304(ಎ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..

2. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಕುಸಗುಲ್ಲಗ್ರಾಮದ  ಆರೋಪಿ ಮಹ್ಮದ್ ಜಲಾನಿ ಮುಲ್ಲಾ ಸಾ!! ಕುಸಗಲ್ ಈತನು ದಿನಾಂಕ: 22-05-2018 ರಂದು ಮುಂಜಾನೆ 10-40 ಗಂಟೆ ಸುಮಾರಿಗೆ ಪಿರ್ಯಾದಿ ಚಲಾಯಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ನಂ ಕೆಎ42/ಎಪ್-919 ನೇದ್ದನ್ನು ತನ್ನ ಸಂಬಂದಿಕರನ್ನು ಕುಸಗಲಗೆ ಇಳಿಸದೆ ಹೆಬಸೂರಿಗೆ ಇಳಿಸಿ ಬಂದಿದ್ದರ ಸಿಟ್ಟಿನಿಂದ ಕುಸಗಲ್ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಅಡ್ಡಗಟ್ಟಿ ತರುಬಿ ಕಲ್ಲಿನಿಂದ ಹೊಡಿಬಡಿ ಮಾಡಿ ಅವಾಚ್ಯ ಬೈದಾಡಿ ಜೀವದ ಬೆದರಿಕೆ ಹಾಕಿದ ಸರಕಾರಿ ಕೆಲಸಕ್ಕೆ ಅಡೆತಡೆ ಮಾಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣಪ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 147/2018 ಕಲಂ 506.341.324.504.353.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಅಳಗವಾಡಿ ಗ್ರಾಮದ  ಮೃತಳನಾದ ಅನ್ನಪೂರ್ಣ ಕೋಂ ಸುರೇಶ ಗಾಣೀಗೆರ ವಯಾ:45 ವರ್ಷ ಿತಳು ಈಗ ಹೆಳೆಯ ಮನೆಯನ್ನು ಕೆಡವಿ ಹೊಸಮನೆಯನ್ನು ಕಟ್ಟಿಸುವ ಸಲುವಾಗಿ ತನ್ನಲ್ಲಿ ಹಣವಿಲ್ಲವೆಂದು ಮಾನಸಿಕ ಮಾಡಿಕೊಂಡು ಈ ದಿವಸ ದಿನಾಂಕ:22-05-2018 ರಂದು ಬೆಳಿಗ್ಗೆ 6 -00 ಗಂಟೆ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ತನ್ನಷ್ಟಕ್ಕೆ ತಾನೇ ಯಾವುದೇ ವಿಷ ಸೇವನೇ ಮಾಡಿ ಅಸ್ತವ್ಯಸ್ಥಗೊಂಡು ಉಪಚಾರಕ್ಕೆಂದು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಕರೆದುಕೊಂಡು ಹೊಗುವಾಗ ದಾರಿಯ ಮದ್ಯದಲ್ಲಿ ಮೃತಪಟ್ಟಿರುತ್ತಾಳೆ ವಿನಹ ಸದರಿಯವಳ ಮರಣದಲ್ಲಿ ಬೇರೆ ಎನೂಸಂಶಯ ಇರುವಿದಿಲ್ಲಾ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಯುಡಿನಂ 22/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದು ಇರುತ್ತದೆ


Monday, May 21, 2018

CRIME INCIDENTS 21-05-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:21-05-2018 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಪಾಳೆ ಗ್ರಾಮದ ಹತ್ತಿರ ಆರೋಪಿತನಾದ ವಿರುಪಾಕ್ಷಪ್ಪ ಗುರಪ್ಪ ಸರಸ್ವತಿ 34 ವರ್ಷ ಸಾ!! ಪಾಳ್ಯ ಈತನು ದಿನಾಂಕ 21-05-2018 ರಂದು ಮುಂಜಾನೆ 05-30 ಗಂಟೆ ಸುಮಾರಿಗೆ ಸಣ್ಣ ಪುಟ್ಟ ಕಳ್ಳತನ ಮಾಡುವ ಉದ್ದೇಶದಿಂದ ಪಾಳ ಗ್ರಾಮದ ಕ್ರಾಸ್ ಹತ್ತಿರ ಸಂಶಯಾಸ್ಪದ ರೀತಿಯಲ್ಲಿ ನಿಂತುಕೊಂಡಿದ್ದು ಸದರಿಯವನಿಗೆ ಹಾಗೇ ಬಿಟ್ಟಲ್ಲಿ ಕಾಗ್ನೇಜೆಬಲ್ ಗುನ್ನೆ ಮಾಡಬಹುದು ಅಂತ ಕಂಡು ಬಂದಿದ್ದರಿಂದ ಸದರಿಯವನ ಮೇಲೆ ಗುನ್ನಾನಂ 145/2018  ಕಲಂ 109 ಸಿ.ಆರ್.ಪಿ.ಸಿ ಪ್ರಕಾರ ಕ್ರಮ ಕೈಗೊಂಡಿದ್ದು ಇರುತ್ತದೆ.

2.ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ಗೊಬ್ಬರಗುಂಪ್ಪಿ ಗ್ರಾಮದ ಹತ್ತರಿ ಕೆ.ಎಸ್.ಆರ್.ಟಿ.ಸಿ. ಬಸ್ ನಂ.ಕೆಎ-29/ಎಫ್-1123 ನೇದ್ದರ ಚಾಲಕನು ತನ್ನ ಬಸ್ಸನ್ನು ಸೊಲ್ಲಾಪೂರ-ಹುಬ್ಬಳ್ಳಿ ರಸ್ತೆಯ ಮೇಲೆ ನರಗುಂದ ಕಡೆಯಿಂದ ನವಲಗುಂದ ಕಡೆಗೆ ಅತೀ ವೇಗವಾಗಿ ನಿರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಗೊಬ್ಬರಗುಂಪಿ ಕ್ರಾಸ ಹತ್ತಿರ ನವಲಗುಂದ ಕಡೆಯಿಂದ ನರಗುಂದ ಕಡೆಗೆ ಹೊರಟ ಪಿರ್ಯಾದಿ ಲಾರಿ ನಂ.ಕೆಎ-19/ಎಬಿ-0705 ನೇದ್ದಕ್ಕೆ ಢಿಕ್ಕಿ ಮಾಡಿ ಅಪಘಾತಪಡಿಸಿ ಫಿರ್ಯಾದಿಗೆ ಮತ್ತು ಲಾರಿ ಚಾಲಕನಿಗೆ ಸಾದಾ ಗಾಯಪಡಿಸಿದ್ದಲ್ಲದೆ ತನ್ನ ಬಸ್ಸಿನಲ್ಲಿದ್ದ 4-5 ಪ್ರಯಾಣಿಕರಿಗೆ ಕಂಡಕ್ಟರನಿಗೆ ಸಾದಾ ವ ಭಾರಿ ಗಾಯಪಡಿಸಿದ್ದಲ್ಲದೆ ತಾನೂ ಸಹಾ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರತು ನವಲಗುಂದ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 114/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ..

3. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: NH 04 ಬೈಪಾಸ ರಸ್ತೆ ಹಳ್ಳಿಯಾಳ ಬ್ರಿಡ್ಜ ಹತ್ತಿರ ನಮೂದು ಮಾಡಿದ  ಮಿನಿ ಗೂಡ್ಸ ಲಾರಿ ನಂಬರ KA 24-3597 ನೇದ್ದರ ಚಾಲಕನು ತನ್ನ ವಾಹನವನ್ನು ಬೆಳಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವಾಹನದ ವೇಗ ನಿಯಂತ್ರಣ ಮಾಡಲಾಗದೇ ಹುಬ್ಬಳ್ಳಿ ಕಡೆಯಿಂದ ಬೆಳಗಾವ ಕಡೆಗೆ ರಸ್ತೆಯ ಎಡ ಸೈಡಿಗೆ ಹೊರಟ  ಟ್ಯಾಂಕರ ಲಾರಿ ನಂಬರ GJ 06 AX 9716 ನೆದ್ದಕ್ಕೆ ಡಿಕ್ಕಿ ಮಾಡಿ ತನಗೆ ಭಾರಿ ಸ್ವರೂಪದ ಘಾಯ ಪಡಿಸಿಕೊಂಡಿದ್ದಲ್ಲದೆ ಎರಡು ವಾಹನಗಳಿಗೆ  ಜಖಂಗೊಳಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 136/2018 ಕಲಂ 279.338.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

4.. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ತಾರಿಹಾಳ ಗ್ರಾಮದ, ವಾಜಪೇಯ ನಗರದ, ಪಿರ್ಯಾದಿಯ ಮನೆಯಿಂದ ಆರೋಪಿತರಾದ 1] ಶಾಂತವ್ವ ಕೋಂ ಮಲ್ಲಪ್ಪ ವಡ್ಡಟ್ಟಿ 2] ಶೋಭಾ@ಹಾಲಮ್ಮ ತಂದೆ ಮಲ್ಲಪ್ಪ ವಡ್ಡಟ್ಟಿ 3] ಕವಿತಾ ತಂದೆ ಮಲ್ಲಪ್ಪ ವಡ್ಡಟ್ಟಿ, ಪಿರ್ಯಾದಿಯ ಮಗ ನವೀನ ತಂದೆ ಮಂಜುನಾಥ ಬಾರಕೇರ ವಯಾ. 9 ತಿಂಗಳು ಇವನಿಗೆ ಅಪಹರಣ ಮಾಡಿಕೊಂಡು ಬೆಂಗಳೂರಿಗೆ ಹೋಗಿ, ಆರೋಪಿತರಿಗೆ ಪರಿಚಯದವನಾದ ಪ್ರಕಾಶ ಇವನೊಂದಿಗೆ ಸೇರಿಕೊಂಡು ಮಗು ನವೀನ ಬಾರಕೇರ ಇವನ ತಲೆಗೆ ಚಾಕುವಿನಿಂದ ಕೊರೆದು ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 146/2018 ಕಲಂ 363.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

Saturday, May 19, 2018

CRIME INCIDENTS 19-05-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-05-2018 ರಂದು ವರದಿಯಾದ ಪ್ರಕರಣಗಳು

1. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: NH 04 ಬೈಪಾಸ ರಸ್ತೆ ಹದ್ದಿನಗುಡ್ಡ ಟಾಟಾ ಸಫಾರಿ ವಾಹನ ನಂ KA-44-M-2214 ನೇದರ ಚಾಲಕನು ತನ್ನ ವಾಹನವನ್ನು ಬೆಳಗಾಂವ ಕಡೆಯಿಂದ ಹುಬ್ಬಳ್ಳಿ ಕಡೆಗೆ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ವಾಹನದ ವೇಗ ನಿಯಂತ್ರಣ ಮಾಡಲಾಗದೇ ರಸ್ತೆಯ ಬಲಗಡೆ ಪಲ್ಟಿ ಮಾಡಿ ಕೆಡವಿ ವಾಹನವನ್ನು ಜಖಂಗೊಳಿಸಿದ್ದಲ್ಲದೇ ವಾಹನದಲ್ಲಿದ್ದ ಪಿರ್ಯಾದಿ ಹಾಗೂ ಸಿದ್ದೇಶ ಡಿ.ಎಸ್. ಇವರಿಗೆ ಸಾದಾ ವ ಬಾರೀ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 133/2018 ಕಲಂ 279.337.338 ನೇದ್ದರಲ್ಲಿ ಪ್ರಕರಣವನ್ನು ದಾಖಲಸಿದ್ದುಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಹುಬ್ಬಳ್ಳಿ ರಸ್ತೆಯ ಮೇಲೆ ಕಾಡನಕೊಪ್ಪ ಬಸ್ಟ್ಯಾಂಡ ಹತ್ತೀರ ಮೋಟಾರ್ ಸೈಕಲ್ ನಂ KA-25-ES-6289 ನೇದ್ದರ ಚಾಲಕನು ಹುಬ್ಬಳ್ಳಿ ಕಡೆಯಿಂದಾ ಕಲಘಟಗಿ ಕಡೆಗೆ ಅತೀ ಜೋರಿನಿಂದಾ & ನಿಷ್ಕಾಳಜಿತನದಿಂದ ನೆಡೆಸಿಕೊಂಡು ಬಸ್ಟ್ಯಾಂಡದಿಂದ ಮನೆಯ ಕಡೆಗೆ ಹೊರಟ ಪಿರ್ಯಾಧಿಯ ಹೆಂಡತಿ ನಿಂಗವ್ವಾ ಕೊಂ ಮಹಾದೇವಪ್ಪ ಮೋರೆ 35 ವರ್ಷ ಸಾ..ಕಾಡನಕೊಪ್ಪ ಇವಳಿಗೆ ಡಿಕ್ಕಿ ಮಾಡಿ ಅಪಘಾಥಪಡಿಸಿ ಗಾಯಪಡಿಸಿ ಗಾಯಾಳುವಿಗೆ ಉಪಚಾರಕ್ಕೆ ಸಹಕರಿಸಿದೆ & ಘಟನೆಯ ವಿಷಯವನ್ನು ಪೊಲೀಸ ಠಾಣೆಗೆ ತಿಳಿಸದೆ ವಾಹನ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 279.338 ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಹಿಂಡಸಗೇರಿ ಗ್ರಾಮದ ಪಿರ್ಯಾಧಿ ಮೃತ ಉಮೇಶ ತಂದೆ ಸಂಗಪ್ಪ ದೊಡ್ಡಮನಿ 35 ವರ್ಷ ಸಾ..ಹಿಂಡಸಗೇರಿ ಇವನ ಹೆಂಡತಿಯಾದ ರತ್ನವ್ವಾ @ ಕರೆಮ್ಮಾ ಇವಳು ತನ್ನ ಗಂಡ ಉಮೇಶ ಇವನೊಂದಿಗೆ ಕಳೇದ 6 ವರ್ಷದ ಹಿಂದೆ ತಂಟೆ ಮಾಡಿಕೊಂಡು ತನ್ನ ತವರು ಮನೆಗೆ ಹೋಗಿದ್ದಕ್ಕೆ ಮಾನಸಿಕ ಅಸ್ವಸ್ಥನಾಗಿದ್ದರಿಂದ ಅವನಿಗೆ ಧಾರವಾಡ ಮಾನಸಿಕ ಆಸ್ಪತ್ರೆಗೆ ತೋರಿಸಿದರೂ ಸಹಾ ಕಡಿಮೆಯಾಗದೆ ಇದ್ದುದರಿಂದ ಅದೆ ಮಾನಸಿಕ ಸ್ಥಿತಿಯಲ್ಲಿ ನಮೂದ ದಿನಾಂಕರಂದು ತನ್ನ ಮನೆಯ ಹಿತ್ತಿದಲ್ಲಿರುವ ಸಾಗವಾನಿ ಮರಕ್ಕೆ ಹಗ್ಗದಿಂದ ಕುತ್ತಿಗೆಗೆ ಉರುಲು ಹಾಕಿಕೊಂಡು ಮೃತಪಟ್ಟ  ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಯುಡಿನಂ 29/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.