ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, May 2, 2018

CRIME INCIDENTS 02-05-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:02-05-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಮುಂಡಗೋಡ ರಸ್ತೆ ಮೇಲೆ ಹಾದಿಬಸವಣ್ಣದೇವರ ಗುಡಿ ಹತ್ತಿರ ತ್ರಿ ಚಕ್ರ ವಾಹನದ ನಂ ಕೆಎ-25-ಡಿ-6238 ನೇದ್ದರ ಚಾಲಕನು ತಾನು ನಡೆಸುತ್ತಿದ್ದ ವಾಹನವನ್ನು ಕಲಘಟಗಿ ಕಡೆಯಿಂದಾ ಬೆಲವಂತರ ಕಡೆಗೆ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಹಾದಿಬಸವಣ್ಣವರ ದೇವರ ಗುಡಿ ಹತ್ತಿರ ವೇಗದ ನಿಯಂತ್ರಣ ಮಾಡಲಾಗದೆ ಪಲ್ಟಿಮಾಡಿ ಕೆಡವಿ ವಾಹನದಲ್ಲಿದ್ದ ಬಸವಣ್ಣೆಪ್ಪ ದೇವರಹೇಳು, ಬಸಪ್ಪ ಅಸುಂಡಿ, ನಿಂಗಪ್ಪ ಅಂಗಡಿ ಸಾವಕ್ಕ ಪೂಜಾರ ಇವರಿಗೆ ಸಾದಾ ವ ಭಾರಿ ಗಾಯಪಡಿಸಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 135/2018 ಕಲಂ 279.337.338.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬಾನಗಿತ್ತಿ ಗುಡಿಹಾಳ ಗ್ರಾಮದ ಬಸ್ತಿ ಓಣಿಯಲ್ಲಿರುವ  ಆರೋಪಿತನಾದ ಪರಪ್ಪಾ ಕೊರವರ ಇತನ ಮನೆಯ ಎದುರಿಗೆ ಸಾರ್ವಜನಿಕ ರಸ್ತೆಯ ಮೇಲೆ 5 ಲೀಟರ್ ಸಾಮರ್ಥತ್ಯದ ಪ್ಲಾಸ್ಟಿಕ್ ಕ್ಯಾನದಲ್ಲಿ  ಸ್ಪೀರಿಟನ್ನು ತುಂಬಿಕೊಂಡು ಮಾನವನ ಆರೋಗ್ಯಕ್ಕೆ ಹಾನಿಕಾರಕ ಅಂತಾ ಗೊತ್ತಿದ್ದರು ಸಹ ಸಾರ್ವಜನಿಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಮಾನವನ ಸೇವನೆಗೆ ಅಂತಾ  ತನ್ನ ತಾಬಾದಲ್ಲಿ ಇಟ್ಟುಕೊಂಡು ನಿಂತಾಗ ದಾಳಿ ಕಾಲಕ್ಕೆ ಮಾಲ ಸಮೇತ ಸಿಕ್ಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 136/2018 ಕಲಂ 328.273. ಅಬಕಾರಿ ಕಾಯ್ದೆ 32.34 ಅಬಕಾರಿ ಕಾಯ್ದೆ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

3.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಬೆನಕನಹಳ್ಳಿ-ಕುಂದಗೋಳ ರಸ್ತೆಯ ಭಾಜು ಇರುವ ಹೊಳಗಣ್ಣವರ ಇವರ ಹೊಲದಲ್ಲಿ, ಮೃತ ಗಂಡ ಮಲೀಕಸಾಬ ಹಸನಸಾಬ ಪತ್ತಣ್ಣವರ, ವಯಾ: 35 ವರ್ಷ, ಸಾ: ಹಿರೇನರ್ತಿ ತಾ: ಕುಂದಗೋಳ ಈತನು ಅನುಮಾನಸ್ಪದವಾಗಿ ಮರಣ ಹೊಂದಿದ್ದು ಇರುತ್ತದೆ. ಸದರಿಯವನ ಮರಣದಲ್ಲಿ ಸಂಶಯವಿದ್ದು  ಎಂದು ಫಿಯಾಱಱಧಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 19/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.

4. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ:  ಸಂಶಿ ಗ್ರಾಮದ ಸರಸ್ವತಿ ತಂದೆ ಸಿದ್ದಪ್ಪ ಕರೆಣ್ಣವರ. ವಯಾ: 18 ವರ್ಷ, ಇವಳು ಪಿಯುಸಿ 2 ನೇ ವರ್ಷದ ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಬಂದಿದ್ದಕ್ಕೆ ಅದನ್ನೆ ಮನಸ್ಸಿಗೆ ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ಯಾವುದೋ ವಿಷಕಾರಕ ಪದಾರ್ಥವನ್ನು ಸೇವನೆ ಮಾಡಿ ತ್ರಾಸ ಮಾಡಿಕೊಳ್ಳುತ್ತಿದ್ದಾಗ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ದಾಖಲ ಮಾಡಿದವಳು ಉಪಚಾರ ಫಲಿಸದೇ ಈ ದಿವಸ ದಿನಾಂಕ: 02-05-2018 ರಂದು ಬೆಳಗಿನ 8-15 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಇದರ ಹೊರತಾಗಿ ಅವಳ ಮರಣದಲ್ಲಿ ಬೇರೆ ಯಾವ ಮತ್ತು ಯಾರ ಮೇಲೆಯೂ ಸಂಶಯ ಇರುವುದಿಲ್ಲ ಅಂತಾ ಮೃತಳ ತಂದೆ  ಫಿಯಾಱಧಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 20/2018 ಕಲಂ 174. ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಸುಳ್ಳ ಗ್ರಾಮದ, ಮೃತ ಷಣ್ಮುಖ ಫಕ್ಕೀರಪ್ಪ ಕುಂದಗೋಳ ವಯಾ. 35 ವರ್ಷ ಸಾ. ಸುಳ್ಳ ಇವರು, ಸುಳ್ಳ ಗ್ರಾಮದ ತಮ್ಮ ತಂದೆಯ ಹೆಸರಿನಲ್ಲಿರುವ ಹೊಲದಲ್ಲಿಯ, ಮಾವಿನ ಗಿಡದ ಕೆಳಗೆ, ಮೃತನು ತನ್ನ ಹೊಲದಲ್ಲಿ ಬೆಳೆ ಬೆಳೆಯಲು, ಸುಳ್ಳ ಗ್ರಾಮದ ಸಿಂಡಿಕೇಟ್ ಬ್ಯಾಂಕನಲ್ಲಿ 20,000/- ರೂ. ಸಾಲ ಮಾಡಿದ್ದು, ಮೂರು ನಾಲ್ಕು ವರ್ಷಗಳಿಂದ ಮಳೆ ಸರಿಯಾಗಿ ಆಗದೇ, ಹೊಲದಲ್ಲಿ ಬೆಳೆದ ಬೆಳೆ ಒಣಗಿ ಲುಕ್ಸಾನ ಆಗಿದ್ದು, ಬ್ಯಾಂಕ್ ನಲ್ಲಿ ಮಾಡಿದ ಸಾಲ ಹೇಗೆ ತೀರಿಸುವುದು ಅಂತ ಮಾನಸಿಕ ಮಾಡಿಕೊಂಡು, ಹೊಲದಲ್ಲಿರುವ ಮಾವಿನ ಗಿಡದ ಕೆಳಗೆ ಯಾವುದೋ ವಿಷ ಸೇವನೆ ಮಾಡಿ, ಅಸ್ವಸ್ಥಗೊಂಡಾಗ, ಉಪಚಾರಕ್ಕೆಂದು ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಗೆ ದಾಖಲಿಸಿದಾಗ, ದಿನಾಂಕಃ 01/05/2018 ರಂದು ರಾತ್ರಿ 10-40 ಗಂಟೆಗೆ ಉಪಚಾರ ಫಲಿಸದೆ ಕಿಮ್ಸ್ ಆಸ್ಪತ್ರೆ ಹುಬ್ಬಳ್ಳಿಯಲ್ಲಿ ಮೃತಪಟ್ಟಿದ್ದು ಇರುತ್ತದೆಯೇ, ವಿನಃ ತನ್ನ ಗಂಡನ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ ಅಂತ ಮೃತನ ಹೆಂಡತಿ ಕೊಟ್ಟ ಫಿಯಾಱಧಿ ನೀಡಿದ್ದು ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿನಂ 26/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.