ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, May 3, 2018

CRIME INCIDENTS 03-05-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:02-05-2018 ರಂದು ವರದಿಯಾದ ಪ್ರಕರಣಗಳು

1. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಶಿರಗುಪ್ಪಿ ಗ್ರಾಮದ 2 ನೇ ವಾರ್ಡದ ಮಸುತಿ ಹತ್ತಿರ ಜಾತ್ಯಾತೀತ ಜನದಾಳ ನವಲಗುಂದ ವಿಧಾನಸಭಾ ಕ್ಷೇತ್ರ 69 ನೇದ್ದರ ಕರ ಪತ್ರಗಳನ್ನು ನೀತಿ ಸಂಹಿತೆ ಜಾರಿ ಇದ್ದರು ಸಹ ಯಾವುದೆ ಅನುಮತಿಯನ್ನು ಪಡೆಯದೆ ಆರೋಪಿತರಾದ 1.ಅಬ್ಬಾಸ ನವಲಗುಂದ 2.ಮೊಹನ ಪ್ರಕಾಶ ಪ್ರೀಟಿಂಗ ಪ್ರೆಸ್ ಹಾಗೂ ಇನ್ನೂ 03 ಜನರು ಪ್ರೀಟ ಹಾಕಿ ಕೊಟ್ಟ ಕರ ಪತ್ರಗಳನ್ನು ಆರೋಪಿತರು ಕರ ಪತ್ರಗಳನ್ನು ಮತದಾರರಿಗೆ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವದಾಗಿ ಆಮಿಷ ವಡ್ಡಿ ಕರ ಪತ್ರಗಳನ್ನು ಹಂಚುತ್ತಿದ್ದ ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 134/2018 ಕಲಂ IPC 1860 (U/s-171E,171B)REPRESENTATION OF PEOPLE ACT, 1950,1951,1989 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ:ಹಳ್ಳಿಗೇರಿ ಗ್ರಾಮದ ಹತ್ತಿರ ಮುಂಬರುವ ವಿದಾನಸಭಾ ಚುಣಾವಣೆ ಪ್ರಯುಕ್ತ ನಮ್ಮ ಠಾಣಾ ವ್ಯಾಪ್ತಿಗೆ ಬರುವ ಹಳ್ಳಿಗಳ ಪೆಟ್ರೋಲಿಂಗ ಕುರಿತು ಮಾವಿನಕೊಪ್ಪ ಟಿ ರಾಮಚಂದ್ರನಗರ ಗ್ರಾಮಗಳಿಗೆ ಬೇಟಿ ನೀಡಿ ನಂತರ ಹಲ್ಳೀಗೇರಿ ಗ್ರಾಮದ ಬಸ್ಟ್ಯಾಂಡ ಹತ್ತಿರ ಹೋದಾಗ ಅಲ್ಲಿ ಒಬ್ಬನು ಸಾರ್ವಜನಿಕ ರಸ್ತೆಯ ಮೇಲೆ ಛಿರಾಡುತ್ತಾ ಯಾರು ಎನು ಮಾಡುತ್ತಾರೆ ಯಾರಾದರೂ ನನ್ನ ತಂಟೆಗೆ ಬಂದರೆ ನಾನು ಅವರನ್ನು ಬಿಡುವದಿಲ್ಲಾ ಅಂತಾ ಹೇಳುತ್ತಾ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟು ಮಾಡುತ್ತಿದ್ದು ಅಲ್ಲದೆ ಯಾರಾದರೂ ಹೆಂಗಸರಿಗೆ ಹಾಗೂ ಗಂಡಸರಿಗೆ ಎರು ದ್ವನಿಯಲ್ಲಿ ಚೀರಾಡುತ್ತಾ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಅಸಹ್ಯವಾಗುವ ರೀತಿಯಲ್ಲಿ ಹಾಗೂ ಭಯವಾಗುವ ರೀತಿಯಲ್ಲಿ ಹಲ್ಕಟ್ ಶಬ್ದಗಳೀಂದ  ಬೈದಾಡುತ್ತಾ ನಿಂತಿದ್ದು ಸದರಿಯವನಿಗೆ ಹಿಡಿದು ವಿಚಾರಿಸಿದಾಗ ಻ವನು ತನ್ನ ಹೆಸರು ನವೀನ @ ಪುಂಡಲೀಕ ತಂದೆ ಪಕ್ಕೀರಪ್ಪ ರೇವಡ್ಯಾಳ ವಯಾ 24 ವರ್ಷ ುದ್ಯೋಗ ಹೊಟೇಲ ಕೆಲಸ ಜ್ಯಾತಿ ಹಿಂದೂ ಮರಾಠಾ ಸಾ|| ಹಳ್ಳಿಗೇರಿ ತಾ||ಜಿ|| ದಾರವಾಡ ಻ಂತಾ ಹೇಳಿದನು ಅಲ್ಲದೆ ಸದರಿಯವನು ಮುಂಭರುವ ವಿದಾನಸಬಾ ಚುಣಾವಣೆ ವೇಳೆಯಲ್ಲಿ ಸಾವಱಜನಿಕರಿಗೆ ಯಾವ ವೇಳೆಯಲ್ಲಿ ಎನು ಅನಾಹುತ ಮಾಡಿ ಅವರ ಜೀವಕ್ಕೆ ಹಾಗೂ ಆಸ್ತಿ ಪಾಸ್ತಿಗೆ ಹಾನಿ ಮಾಡುವ ಚಟುವಟಿಕೆಯುಳ್ಳವನು ಅಂತಾ ತಿಳೀದು ಬಂದಿದ್ದರಿಂದ ಸದರಿಯವನನ್ನು ಗುನ್ನಾನಂ 63/2018 ಮುಂಜಾಗೃತಾ ಕ್ರಮವಾಗಿ ಕಲಂ 110(ಜಿ) ಸಿ,.ಆರ್.ಪಿ.ಸಿ ಅಡಿಯಲ್ಲಿ ಕ್ರಮ ಜರುಗಿಸಿದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಕಮಡೊಳ್ಳಿ ಗ್ರಾಮದ ಬಸ್ ಸ್ಟ್ಯಾಂಡ ಹತ್ತಿರ ಆರೋಪಿತನಾದ ವೆಂಕಪ್ಪಾ ಶಿಂಗ್ಗಣವರ ಇತನು ಒದರಾಡುವುದು, ಚೀರಾಡುವುದು ಮಾಡುತ್ತಾ ಹೋಗಿ ಬರುವ ಸಾರ್ವಜನಿಕರ ಮೈಮೇಲೆ ಎರಗಿ ಹೊಡೆಯುತ್ತೇನೆ, ಬಡೆಯುತ್ತೇನೆ ಅಂತಾ ಗೂಂಡಾ ವರ್ತನೆ ತೋರುತ್ತಿದ್ದು ಸದರಿಯವನಿಗೆ ಹಿಗೇಯೇ ಬಿಟ್ಟಲ್ಲಿ ಯಾರದಾದರೂ ಮೇಲೆ ಎರಗಿ ಹೊಡೆ ಬಡೆ ಮಾಡಿ ರಕ್ತ ಪಾತ ಮಾಡಿ ಸಧ್ಯ ಚಾಲ್ತಿಯಲ್ಲಿರುವ ವಿಧಾನಸಭಾ ಚುನಾವಣೆಯ ನೀತಿಸಂಹಿತೆಯ ಕಾಲಕ್ಕೆ, ಹಾಗೂ ವಿಧಾನಸಭಾ ಚುನಾವಣೆಯ ಕಾಲಕ್ಕೆ ಸಾರ್ವಜನಿಕ ಶಾಂತತ ಭಂಗವನ್ನುಂಟು ಮಾಡುವುದಲ್ಲದೇ ಯಾವುದಾದರೂ ಸಂಜ್ಞೆಯ ಅಪರಾಧವೆಸಗಿ ಘೋರ ಸ್ವರೂಪದ ಗುನ್ನೆ ಮಾಡುವ ಸಾಧ್ಯತೆಗಳು ಇದ್ದುದ್ದರಿಂದ ಸದರಿಯವನ ಮೇಲೆ  ಗುನ್ನಾನಂ 95/2018 ಕಲಂ 110(ಇ)(ಜಿ) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸದ್ದು ಇರುತ್ತದೆ.