ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, May 4, 2018

CRIME INCIDENTS 04-05-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:04-05-2018 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಹೊಸಟ್ಟಿ ಗ್ರಾಮದ ಹತ್ತಿರ ಗಂಗಾಧರ ತೋರಗಲ್ಲ ಇತನು ತನ್ನ ಮೋಟಾರ ಸೈಕಲ್  ನಂಬರ ಕೆಎ25-ಇಎಸ್-6980 ನೇದನ್ನು ಹೊಸಟ್ಟಿ ಕಡೆಯಿಂದಾ ಕಿತ್ತೂರ ಕಡೆಗೆ ಅತೀ ಜೋರಿನಿಂದಾ ವ ನಿಷ್ಕಾಳಜೀತನದಿಂದಾ ಚಲಾಯಿಸಿಕೊಂಡು ಬಂದು ರಸ್ತೆಯ ಎಡ ಸೈಡಿಗೆ ಹೋಗುತ್ತಿದ ಮಹಾಂತೇಶ ಮಂಜುನಾಥ ಜಾದವ್ 4 ವರ್ಷ ಇವನಿಗೆ ಡಿಕ್ಕಿಮಾಡಿ ಅಪಘಾತಪಡಿಸಿ ಭಾರಿ ಸ್ವರೂಪದ ಗಾಯಪಡಿಸಿ ಮೋಟಾರ ಸೈಕಲ್ ಸಮೇತೆ ಹಾಗೇ ಹೋಗಿದ್ದು ಇರುತ್ತದೆ ಈ ಕರುತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 73/2018 ಕಲಂ 279.338.ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಧಾರವಾಡ ಸವದತ್ತಿ ರಸ್ತೆ ಅಮ್ಮಿನಭಾವಿ ಗ್ರಾಮದ ಅಯ್ಯಪ್ಪ ಸ್ವಾಮಿ ಗುಡಿ ಹತ್ತಿರ ರಸ್ತೆ ಮೇಲೆ ಟ್ಯಾಂಕರ ಲಾರಿ ನಂ AP 05 TU 7119 ನೇದ್ದರ ಚಾಲಕ ತನ್ನ ಲಾರಿಯನ್ನು ಸವದತ್ತಿಯಿಂದ ಧಾರವಾಡ ಕಡೆಗೆ ಅತೀ ವೇಗವಾಗಿ ಚಲಾಯಿಸಿಕೊಂಡು ಬಂದು ಇದೇ ಮಾರ್ಗದಲ್ಲಿ ತನ್ನ ಲಾರಿಯ ಮುಂದೆ ರಸ್ತೆ ಎಡಸೈಡಿನಲ್ಲಿ ಸಾವಕಾಶವಾಗಿ ಹೋಗುತ್ತಿದ್ದ  ಮಾರುತಿ ಸ್ವೀಪ್ಟ ಕಾರ ನಂ KA 52 M 6476 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಪಡಿಸಿ ಅಪಘಾತದಲ್ಲಿ ಕಾರ ಜಖಂ ಗೋಳಿಸಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 125/2018 ಕಲಂ 279 ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

3. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಪುನಾ ಬೆಂಗಳೂರ ರಸ್ತೆ ಮೇಲೆ ನೂಲ್ವೀ ಕ್ರಾಸ್ ಸಮೀಪದ ಬ್ರಿಡ್ಜ್ ಹತ್ತಿರ ಮೋಟಾರ್ ಸೈಕಲ್ ನಂಬರ ಕೆಎ03/ಎಚ್ ವಿ-7767 ನೇದ್ದನ್ನು ಅದರ ಸವಾರ ದರ್ಶನಕುಮಾರ.ಎಸ್ ತಂದೆ ಎಚ್.ಶಿವಕುಮಾರ ಸಾ!! ಲಿಂಗರಾಜನಗರ ಬೆಂಗಳೂರ ಇತನು ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬಹಳ ಜೋರಿನಿಂದ ನಿರ್ಲಕ್ಷತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಯಿಸಿಕೊಂಡು ಬಂದು ತನ್ನ ಮುಂದೆ ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಯಾವುದೋ ಒಂದು ಟ್ರ್ಯಾಕ್ಟರಕ್ಕೆ ಹಿಂದುಗಡೆಗೆ ಡಿಕ್ಕಿ ಮಾಡಿ ಅಪಘಾತಪಡಿಸಿ ಮೋಟಾರ್ ಸೈಕಲ್ ರಸ್ತೆ ಮೇಲೆ ಬೀಳುವಂತೆ ಮಾಡಿದಾಗ ಹಾವೇರಿ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸ ನಂಬರ ಕೆಎ-25/ಎಫ್-2820 ನೇದ್ದಕ್ಕೆ ಟಚ್ ಆಗುವಂತೆ ಮಾಡಿ ತನಗೆ ಭಾರಿ ಗಾಯಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 135/2018 ಕಲಂ 279.338. ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.