ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, May 5, 2018

CRIME INCIDENTS 05-05-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:05-05-2018 ರಂದು ವರದಿಯಾದ ಪ್ರಕರಣಗಳು

1. ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯ:ತಿಲಾಱಪುರ ಗ್ರಾಮದ ಪ್ರವೀಣ ಈರಪ್ಪ ಇಟಗಿ ಈತನು ಗೆ ತಿರ್ಲಾಪುರ ಗ್ರಾಮದಲ್ಲಿ ತನ್ನ ಮಾವನಾದ ಬಸವರಾಜ ಚಂದ್ರಶೇಕರಪ್ಪ ಕುಲಕರ್ಣಿ ಇವರ ಹಾಗೂ ಇವರ ಮನೆಯ ಜನರೊಂದಿಗೆ ಜಮೀನ ಆಸ್ತಿ ತಂಟೆ ಸಂಭಂದ ದ್ವೇಷ ಹಾಗೂ ವೈಮನಸ್ಸು ಹೊಂದಿದ್ದು ಇದೆ ಕಾರಣ ಮುಂದೆ ಮಾಡಿ ಮುಂಬರುವ ವಿಧಾನಸಭಾ ಚುನಾವಣೆ ಕಾಲಕ್ಕೆ ಮತ್ತು ಯಾವ ವೇಳೆಯಲ್ಲಿ ಏನು ಮಾಡುವನೋ ಹೇಳಲು ಬಾರದ್ದರಿಂದ ಸದರಿಯವನ ಮೇಲೆ  ಗುನ್ನಾನಂ 104/2018 ಕಲಂ 107 151 ಸಿಆರ್ ಪಿಸಿ  ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.
 
2. ಗುಡಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಗುಡಗೇರಿ ಗ್ರಾಮದ  ಮೃತ ತನ್ನ ಮಗ ಲಕ್ಷ್ಮಣ ತಂದೆ ಸಣ್ಣದುರ್ಗಪ್ಪ ಛಬ್ಬಿ. ವಯಾಹ20 ಜಾಃ ಹಿಂದೂ ವಡ್ಡರ. ಉಃ ಕೂಲಿ ಸಾಃ ಚನ್ನಪಟ್ಟಣ ತಾಃ ಶಿರಹಟ್ಟಿ ಜಿಃ ಗದಗ ಇವನು ಶೆಟ್ಟೀಕೇರಿ ಗ್ರಾಮದ ನಿಂಗಪ್ಪ ಬಸಪ್ಪ ಕಡಪಟ್ಟಿ ಇವರ ಹತ್ತಿರ ಕುರಿ ಕಾಯಲು ಅಂತಾ ಕೂಲಿ ಕೆಲಸಕ್ಕೆ ಇದ್ದಾಗ ದಿನಾಂಕಃ05/05/2018 ರ ಮುಂಜಾನೆ 1130 ಗಂಟೆಯಿಂದ 05/05/2018ರ ಸಾಯಂಕಾಲ 6-00 ಗಂಟೆ ನಡುವಿನ ಅವಧಿಯಲಿ ಗೌಡಗೇರಿ ಗ್ರಾಮದ ಡ್ಯಾಮಿನ ಕೆರೆಯಲ್ಲಿ ಸ್ನಾನಾ ಮಾಡಲು ಹೋಗಿ ಅಲ್ಲಿ ಅಕಸ್ಮಾತ ಕಾಲು ಜಾರಿ ಆಳವಾದ ನೀರಲ್ಲಿ ಬಿದ್ದು ಮುಳುಗಿ ಮೃತಪಟ್ಟಿರಬಹುದು   ವಿನಃ ಅವನ ಮರಣದಲ್ಲಿ ಬೇರೆ ಯಾವುದೇ ಯಾರ ಮೇಲೂ ಸಂಶಯ ಇರುವುದಿಲ್ಲಾ ಫಿಯಾಱಧಿ ನೀಡಿದ್ದು ಈ ಕುರಿತು ಗುಡಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 07/2018 ಕಲಂ 107 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಕೊಂದ್ದು ಇರುತ್ತದೆ.