ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, May 6, 2018

CRIME INCIDENTS 06-05-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:06-05-2018 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ಬಂಡಿವಾಡ ಗ್ರಾಮ ಹದ್ದಿಯ, ನಳಂದಾ ಪಾಲಿಟೆಕ್ನಿಕ್ ಹತ್ತಿರ, ಹೊಸದಾಗಿ ನಿರ್ಮಾಣ ಆಗುತ್ತಿರುವ ರಸ್ತೆಯ ಮೇಲೆ, ಯಾರೋ ಆರೋಪಿತರು ಇದರಲ್ಲಿಯ ಪಿರ್ಯಾದಿ ಯೂಸುಫ್ ಅಲಿ ತಂದೆ ಸತ್ತಾರ ಅಲಿ ಸಾ. ಕಚ್ಚಾರಿಪೇಟ್-2 ತಾ. ಅಬಯಪುರಿ ಜಿ. ಬೊಂಗಾಯಿಗಾಂವ ರಾಜ್ಯ ಅಸ್ಸಾಂ ಇವರು ಹಾಗೂ ಲಾರಿ ಕ್ಲೀನರ ಸುಲ್ತಾನ ಅಲಿ ತಂದೆ ಕಾಶಿಮ ಅಲಿ ಸಾ. ಕಚ್ಚಾರಿಪೇಟ್-2 ತಾ. ಅಬಯಪುರಿ ಜಿ. ಬೊಂಗಾಯಿಗಾಂವ ಇವರು ಕೂಡಿಕೊಂಡು ಕೆಎ-19-ಎಎ-9207 ನೇದ್ದರಲ್ಲಿ ಕ್ಯಾಬಿನ್ ಬಾಗಿಲು ಹಾಕಿಕೊಂಡು ಮಲಗಿದ್ದಾಗ, ಯಾರೋ ನಾಲ್ಕು ಜನ ಆರೋಪಿತರು ಬಂದು, ಸದರ ಲಾರಿಯ ಕ್ಲೀನರ ಸೈಡದ ಬಾಗಿಲು ತೆಗೆದು, ಚಾಕು ಲಾರಿಯ ಕ್ಯಾಬಿನ್ ಒಳಗೆ ಹೊಕ್ಕು, ಪಿರ್ಯಾದಿ ಹಾಗೂ ಕ್ಲೀನರನಿಗೆ ಕೆಳಗೆ ಇಳಿಸಿ, ರೂ. 50,000/- ಕೊಡುವಂತೆ ಬೆದರಿಕೆ ಹಾಕಿ, ಇಬ್ಬರಿಗೂ ಮುಖಕ್ಕೆ ಬಟ್ಟೆ ಹಾಕಿ, ಸದರ ಜಾಗೆಯಿಂದ ಸ್ವಲ್ಪ ದೂರದವರೆಗೆ ಕರೆದುಕೊಂಡು ಹೋಗಿ, ಅವರು ತೊಟ್ಟಿದ್ದ ಬಟ್ಟೆಯಿಂದ ಕೈಕಾಲು ಕಟ್ಟಿ ಹಾಕಿ, ಕೈಯಿಂದ ಹೊಡಿ ಬಡಿ ಮಾಡಿ, ಸದರಿ ಲಾರಿಯ 1] ಒಟ್ಟು 6 ಡಿಸ್ಕ್ ಸಹಿತ ಟೈಯರಗಳು ಅ.ಕಿ. 1,50,000/- ರೂ. 2] ಲಾರಿಯ ಟ್ಯಾಂಕನಲ್ಲಿದ್ದ ಸುಮಾರು 220 ಲೀಟರ ಡಿಸೇಲ್ ಅ.ಕಿ. 15,000/- ರೂ. 3] ಒಂದು ಲಾರಿಗೆ ಕಟ್ಟಿದ್ದ ತಾಡಪತ್ತಿ ಅ.ಕಿ. 15,000/- ರೂ. 4] ಲಾರಿಯ ಕ್ಯಾಬಿನ್ ಒಳಗೆ ಇದ್ದ ರೋಖ ರಕಂ 10,100/- ರೂ. ಗಳನ್ನು ದೋಚಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 136/2018 ಕಲಂ 394 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೂಂಡಿದ್ದು ಇರುತ್ತದೆ.

2.ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಯಲಿವಾಳ ಗ್ರಾಮದ ಮೃತ ತಿರಕಪ್ಪ ಮಹಾದೇವಪ್ಪ ಬೆನಕಣ್ಣವರ. ವಯಾ: 50 ವರ್ಷ, ಸಾ: ಯಲಿವಾಳ, ತಾ: ಕುಂದಗೋಳ ಈತನು ಇತ್ತಿತ್ತಲಾಗಿ ಅತೀಯಾಗಿ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದು ಅದಕ್ಕೆ ಮನೆಯ ಜನರು ಸರಾಯಿ ಕುಡಿಯಬೇಡ ಅಂತಾ ಬುದ್ದಿವಾದ ಹೇಳಿದ್ದಕ್ಕೆ ಅದನ್ನೆ ಮನಸ್ಸಿಗೆ ಹಚ್ಚಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ಮೆಲಾಥಿನ ಪೌಡರನ್ನು ಸೇವನೆ ಮಾಡಿ ತ್ರಾಸ ಮಾಡಿಕೊಳ್ಳುವಾಗ ಉಪಚಾರಕ್ಕೆ ಕುಂದಗೋಳ ಸರಕಾರಿ ದವಾಖಾನೆಯಲ್ಲಿ ದಾಖಲ ಮಾಡಿ ಅಲ್ಲಿಂದ ಹೆಚ್ಚಿನ ಉಪಚಾರಕ್ಕೆ ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಯಲ್ಲಿ ದಾಖಲ ಮಾಡಿದವನು ಉಪಚಾರ ಫಲಿಸದೇ ಈ ದಿವಸ ದಿನಾಂಕ: 06-05-2018 ರಂದು ಬೆಳಗಿನ 6-00 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಇದರ ಹೊರತಾಗಿ ಅವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ ಅಂತಾ ಮೃತನ ಹೆಂಡತಿ  ಫಿಯಾಱಧಿ ನೀಡಿದ್ದು ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 21/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.