ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, May 7, 2018

CRIME INCIDENTS 07-05-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:07-05-2018 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ ಠಾಣಾ ವ್ಯಾಪ್ತಿಯ:ತೆಗೂರ ಚೆಕ್ಕ ಪೊಸ್ಟನಲ್ಲಿ ಒಂದು ಫೋರ್ಸ ಕಂಪನಿಯ ವಾಹನ ನಂ.ಎಮ.ಪಿ.11/ಟಿ.ಆರ.ಎ.ಇ-7800 ನೇದ್ದರ ಚಾಲಕ ಹಾಗೂ ಮೂರು ಜನರಾದ 1.ಜೈಪಾಲಸಿಂಗ ರೋಹನ ಸಿಂಗ 2.ರಾಜಕುಮಾರ ಗಂಗಾಧರ ಸಿಂಗ 3.ಪ್ರಮೋದ ಹಕ್ಕೀಮ.4.ವಾಲಮೀಕ ಪಾಟೀಲ ಇವರು ತಮ್ಮ ವಾಹನದಲ್ಲಿ ಒಟ್ಟು 1800 ಸಾರಿಗಳು ಅವುಗಳ ಅಃಕೀಃ1,80,000 ರೂ ಕಿಮ್ಮತ್ತಿನವುಗಳನ್ನು ಇಟ್ಟುಕೊಂಡು ಅವುಗಳ ಬಗ್ಗೆ ಯಾವುದೇ ದಾಖಲಾತಿಗಳನ್ನು ಇಟ್ಟುಕೊಳ್ಳದೇ ಸಮರ್ಪಕವಾದ ಉತ್ತರವನ್ನು ನೀಡದೆ ವಿಧಾನಸಭಾ ಚುನಾವಣೆಯಲ್ಲಿ ಯಾವುದೋ ಅಭ್ಯರ್ಥಿ ಪರವಾಗಿ ಹಂಚಲು ತೆಗೆದುಕೊಂಡು ಹೋಗುತ್ತಿದ್ದಾಗ ಸಿಕ್ಕಿದ್ದು ಇರುತ್ತದೆ  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 74/2018 ಕಲಂ KARNATAKA POLICE ACT, 1963 (U/s-98); IPC 1860 (U/s-171E)

2. ನವಲಗುಂದ ಪೊಲೀಸ್ ಠಾಣಾ  ವ್ಯಾಪ್ತಿಯ:ನವಲಗುಂದ ಗ್ರಾಮದ ಆರೋಪಿ ತಿಮ್ಮಣ್ಣ ತಂದೆ ದೊಡ್ಡತಿಮ್ಮಣ್ಣ ವಡ್ಡರ ಸಾ!! ನವಲಗುಂದ ಈತನು ಅರ್ಜಿದಾರ ಹಾಗೂ ಸಾಕ್ಷಿದಾರರಿಗೆ ಬಾಯಿಗೆ ಬಂದಂತೆ ಬೈದಾಡಿ ಅಸಭ್ಯವಾಗಿ ವರ್ತಿಸಿ ನಿಮ್ಮನ್ನು ಸುಮ್ಮನೆ ಬಿಡುವದಿಲ್ಲ ಅಂತ ಬೆದರಿಕೆ ಹಾಕಿದ್ದು ಅಲ್ಲದೆ ಅಪಾಯಕಾರಿ ವರ್ತನೆ ಮಾಡುತ್ತಾನೆ ಅಂತ ತಿಳಿಸಿದ್ದು ಸದರಿ ಎದರುಗಾರರ ಮೇಲೆ ಸ್ಥಾನಿಕವಾಗಿ ಅವನ ಓಣಿಯಲ್ಲಿ ವಿಚಾರಿಸಿದಾಗ ಸದರಿಯವನು ರೂಡಿಗತ ಅಪರಾಧ ಮಾಡುವ ಹಾಗೂ ಸಾರ್ವಜನಿಕರಿಗೆ ಹೆದರಿಕೆ ಒಡ್ಡವ ಸಂಭವ ಇರುತ್ತದೆ ಅಂತ ತಿಳಿಸಿದ್ದರ ಮೇಲಿಂದ ಸದರಿ ಎದರುಗಾರನಿಗೆ ಹಾಗೇ ಬಿಟ್ಟಲ್ಲಿ ಅರ್ಜಿದಾರ ಹಾಗೂ ಅವನ ಮನೆಯ ಜನರಿಗೆ ಏನಾದರೂ ದಕ್ಕೆಯನ್ನುಂಟು ಮಾಡುವ ಸಂಭವ ಕಂಡು ಬಂದಿದ್ದರಿಂದ ಸದರಿಯವನ ಮೇಲೆ ಗುನ್ನಾನಂ 107/2018 ಕಲಂ 110(ಇ)(ಜಿ) ಸಿ ಆರ್ ಪಿ ಸಿ ಪ್ರಕಾರ ಕ್ರಮ ಕೈಗೊಂಡಿದ್ದು  ಇರುತ್ತದೆ.