ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, May 11, 2018

CRIME INCIDENTS 11-05-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:11-05-2018 ರಂದು ವರದಿಯಾದ ಪ್ರಕರಣಗಳು

1. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 10-05-2018 ರಂದು 12-30 ಗಂಟೆಗೆ ಕಾರ್ ನಂಬರ ಕೆ.ಎ 17 ಎಮ್ 5230 ನೇದ್ದರ ಚಾಲಕ ರಾಮಚಂದ್ರ ಕುಲಕಣಿಱ ತನ್ನ ಕಾರನ್ನು ಬೆಳಗಾವ ಕಡೆಯಿಂದ ಹುಬ್ಬಳ್ಳೀ ಕಡೆಗೆ ರಾಷ್ಟ್ರೀಯ ಹೆದ್ದಾರಿ ಮೇಲೆ ಬರುವಾಗ ಅತೀ ಜೋರಿನಿಂದ ವ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಕಾರ್ ಮೇಲಿನ ನಿಯಂತ್ರಣ ಕಳೆದುಕೊಂಡು ಮುಮ್ಮಿಗಟ್ಟಿ ಗ್ರಾಮದ ಸಮೀಪ ಗರಗ ಕ್ರಾಸ ಹತ್ತಿರ ಕಾರನ್ನು ಪಲ್ಟಿ ಮಾಡಿ ಕೆಡವಿ ಅಫಘಾತ ಪಡಿಸಿ ತನಗೆ ಭಾರಿ ಗಾಯ ಪಡಿಸಿಕೊಂಡು ಕಾರಿನಲ್ಲಿದ್ದ ರೇವತಿ ಕುಲಕರ್ಣಿ ಇವಳಿಗೆ  ಸಾದಾ ಸ್ವರೂಪದ ಗಾಯ ಪಡಿಸಿದ ಅಪರಾಧ. ಈ ಕುರಿತು  ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 76/2018 ಕಲಂ 279,337,338 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 10-05-2018 ರಂದು 2000 ಗಂಟೆಗೆ NH-04 ಬೈಪಾಸ ರಸ್ತೆ ಇಟ್ಟಿಗಟ್ಟಿ ಗ್ರಾಮದ ಹತ್ತಿರ  ನಮೂದು ಮಾಡಿದ ಯಾವುದೋ ವಾಹನದ ಚಾಲಕನು ತನ್ನ ವಾಹನವನ್ನು ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ರಸ್ತೆ ಎಡಸೈಡಿನಲ್ಲಿ ಹೋಗುತ್ತಿದ್ದ ಮೋಟರ್ ಸೈಕಲ ನಂ KA-25-ED-6063 ನೇದಕ್ಕೆ ಡಿಕ್ಕಿಪಡಿಸಿ ಅಪಫಾತ ಮಾಡಿ ಮೋಟರ್ ಸೈಕಲ ಚಾಲಕ ಅಲ್ಲಾಭಕ್ಷ ತಂದೆ ಮೆಹಬೂಬಸಾಬ ನರೇಂದ್ರ ವಯಾ-33 ವರ್ಷ ಸಾ: ಸತ್ತೂರ ಧಾರವಾಡ ಇವನ ತಲೆಗೆ ಬಾರೀ ಗಾಯಪಡಿಸಿ ಸ್ಥಳದಲ್ಲಿಯೇ ಮೃತಪಡಿಸಿ ವಾಹನ ಸಮೇತ ಪರಾರಿಯಾಗಿ ಹೋದ ಅಪರಾಧ. ಈ ಕುರಿತು  ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 129/2018 ಕಲಂ IPC 1860 (U/s-279,304(A)); INDIAN MOTOR VEHICLES ACT, 1988 (U/s-134,187) ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.