ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Saturday, May 12, 2018

CRIME INCIDENTS 12-05-2018ಧಾರವಾಡ ಜಿಲ್ಲೆಯಲ್ಲಿ ದಿನಾಂಕ 12-05-2018 ರಂದು ವರದಿಯಾದ ಪ್ರಕರಣಗಳು

1.ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿ: ದಿನಾಂಕಃ 11/05/2018 ರಂದು ರಾತ್ರಿ 10-00 ರಿಂದ 10-30 ಗಂಟೆ ನಡುವಿನ ಅವಧಿಯಲ್ಲಿ ಗಿರಿಯಾಲ ಗ್ರಾಮದ ಇದರಲ್ಲಿಯ ಪಿರ್ಯಾದಿ ಬಸವಂತರಾವ ದ.ತಂದೆ ಕೃಷ್ಣಾಜಿರಾವ ಪಾಟೀಲ ಇವರ ವಾಸದ ಮನೆಯಲ್ಲಿ ಆರೋಪಿತರಾದ ಗಣೇಶ ಮಲ್ಲೇಶ ಈಳಗೇರ, ಸಂತೋಷ ತಾಯಿ ರೇಣುಕಾ ದೊಡಮನಿ, ಸಿದ್ದು ಚಂದಾಪೂರ, ಪ್ರಭು ತಿಮ್ಮಣ್ಣ ಕಟ್ಟಿಮನಿ ಮತ್ತು  ಶಶಿ  ಸಾ. ಇವರೆಲ್ಲರೂ ಸೋನಿಯಾಗಾಂದಿ ನಗರ ಹುಬ್ಬಳ್ಳಿ ಇವರಲ್ಲರೂ ಆರೋಪಿ ಅನೂಪ ಶಂಕ್ರಪ್ಪ ಬಿಜವಾಡ ಸಾ. ವೀರಾಪೂರ ಓಣಿ ಹುಬ್ಬಳ್ಳಿ ಇತನ ಪ್ರಚೋದನೆಯಿಂದ ಗುಂಪು ಕಟ್ಟಿಕೊಂಡು ಕೈಯಲ್ಲಿ ಕಲ್ಲು ಇಟ್ಟಂಗಿ ತುಂಡು ಹಿಡಿದುಕೊಂಡು ಪಿರ್ಯಾಧಿ ಮನೆಯ ಒಳಗೆ ಅತೀಕ್ರಮಣ ಪ್ರವೇಶ ಮಾಡಿ ಕಾಂಗ್ರಿಸಿನವರು ಶಿವಳ್ಳಿಗೆ ವೋಟ ಹಾಕಾಕ ರೋಖಾ ಕೊಟ್ಟಾರ ಏನ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡಿ ಕಲ್ಲು ಮತ್ತು ಇಟ್ಟಂಗಿ ತುಡಿನಿಂದ ಹೊಡೆಯಲ್ಲಿಕ್ಕೆ ಹತ್ತಿದಾಗ ಬಿಡಿಸಲು ಬಂದ ಪಿರ್ಯಾದಿಗೂ ಸಹ ಕೈಯಿಂದ ಹೊಡಿ ಬಡಿ ಮಾಡಿದ್ದಲ್ಲದೇ ಬಿಡಿಸಲ್ಲು ಬಂದ ಪಿರ್ಯಾದಿ ಹೆಂಡ್ತಿ ರೂಪಾ ಕೋಂ ಬಸವಂತರಾವ ಪಾಟೀಲ ಹಾಗೂ ಪಿರ್ಯಾದಿಯ ತಮ್ಮನ ಹೆಂಡ್ತಿಯಾದ ಸವೀತಾ ಕೋಂ ಸುರೇಶ ಬೋಸಲ್ಲೆ ಇವರಿಗೆ ಕೈಯಿಂದ ಹೊಡಿ ಬಡಿ ಮಾಡಿ ಸೀರೆ ಹಿಡಿದು ಎಳೆದಾಡಿ ಮಹಿಳಾ ಮಾನಭಂಗ ಮಾಡಲು ಪ್ರಯತ್ನಿಸಿದ ಅಪರಾದ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 140-2018 ಕಲಂ IPC 1860 (U/s-143,147,148,448,323,324, 354(A), 109,504,506,149) ನೇದ್ದರಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.