ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Sunday, May 13, 2018

CRIME INCIDENTS 13-05-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:13-05-2018 ರಂದು ವರದಿಯಾದ ಪ್ರಕರಣಗಳು

1 ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಬೆಣಚಿ ಗ್ರಾಮದ ಮೃತನಾದ ನಾಮದೇವ ತಂದೆ ಕಲ್ಲಪ್ಪ ಕೋಲೇಕರ 34 ವರ್ಷ ಸಾ|| ಬೆಣಚಿ ಅವನು ಕುಡಿದ ನಿಶೇಯಲ್ಲಿ ತನ್ನ ಮನೆತನದ ಬಗ್ಗೆ ಮಾನಸಿಕ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನಷ್ಟಕ್ಕೆ ತಾನೇ ಯಾವುದೋ ವಿಷಕಾರಕ ಎಣ್ಣಿ ಸೇವಣೆ ಮಾಡಿ ಅದರ ಬಾದೆಯಿಂದ ುಪಚಾರ ಕುರಿತು ಹುಬ್ಬಳ್ಳೀ ಕಿಮ್ಸ ಆಸ್ಪತ್ರೆಯಲ್ಲಿ ಉಪಚಾರದಲ್ಲಿ ಇದ್ದಾಗ ಉಪಚಾರ ಪಲಿಸದೆ  ಈ ದಿವಸ ದಿನಾಂಕ 13-05-2018 ರಂದು ಮುಂಜಾನೆ 7-15 ಗಂಟೆಗೆ ಮರಣ ಹೊಂದಿದ್ದು ಅದೆ ವಿನ: ಅವನ ಮರಣದಲ್ಲಿ ಬೇರೆ ಎನೂ ಸಂಶಯ ವಗೈರೆ ಇರುವದಿಲ್ಲಾ ಅಂತಾ ಫಿಯಾಱಧೀ ನೀಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 06/2018 ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.  ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಗುರುವಿನಹಳ್ಳಿಮೃತ ಅಶೋಕ ಇಂಗಳಹಳ್ಳಿ, ವಯಾ: 17 ವರ್ಷ ಇತನು ಮಾಳಿಗೆಯ ಮೇಲೆ ಕಟ್ಟಿದ್ದ ಟಿ.ವ್ಹಿ ಕೇಬಲ್ ವಾಯರನ್ನು ಸರಿಪಡಿಸುವ ಕುರಿತು ವಿನಾಯಕ, ಸಾ: ಗುರುವಿನಹಳ್ಳಿ ಇವನೊಂದಿಗೆ ಹತ್ತಿ ಸರಿಪಡಿಸುತ್ತಿರುವಾಗ, ಇದ್ದ ವಿದ್ಯುತ್ ವಾಯರ ಅಕಸ್ಮಾತ್ ಕೈಗಳಿಗೆ ತಾಗಿ ಶಾಕ್ ಹೊಡೆದು ಅಸ್ವಸ್ಥನಾಗಿದ್ದು ಅವನನ್ನು ಉಪಚಾರಕ್ಕೆ ಅಂತಾ ಹುಬ್ಬಳ್ಳಿ ಕಿಮ್ಸ ದವಾಖಾನೆಗೆ ಕರೆದುಕೊಂಡು ಹೋಗಿ ಒಳಗೆ ಒಯ್ಯುವಷ್ಟರಲ್ಲಿ ದಿ: 13-05-2018 ರಂದು 1120 ಗಂಟೆಗೆ ಮರಣ ಹೊಂದಿದ್ದು ಇರುತ್ತದೆ. ಅವನ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲವಾಗಿ ಫಿಯಾಱಧೀ ನೀಡಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಯುಡಿನಂ 24/2018 ಕಲಂ ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.