ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, May 14, 2018

CRIME INCIDENTS 14-05-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:14-05-2018 ರಂದು ವರದಿಯಾದ ಪ್ರಕರಣಗಳು

1  ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ 07-05-2018 ರಂದು 10-30 ಗಂಟೆಗೆ ಪಿರ್ಯಾದಿಯ ತಂದೆ ನಾಗಪ್ಪ ಡೂಳ್ಳಿನವರ ಈತನು ಮುಮ್ಮಿಗಟ್ಟಿ ಬಸ್ ನಿಲ್ದಾಣ ಹತ್ತಿರ ರಸ್ತೆ ದಾಟುತ್ತಿದ್ದಾಗ ಕಾರ ನಂಬರ ಕೆಎ 27-ಎಮ್-8048 ನೇದರ ಚಾಲಕನು ತನ್ನ ಕಾರನು ಧಾರವಾಡ ಕಡೆಯಿಂದಾ ಬೆಳಗಾವಿ ಕಡೆಗೆ ಅತೀ ಜೋರಿನಿಂದಾ ವ ನಿಷ್ಕಾಳಜೀತನದಿಂದಾ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಢಿ ಅಪಘಾತಪಡಿಸಿ ಪಿರ್ಯಾದಿಯ ತಂದೆಗೆ ಬಾರಿ ಸ್ವರೂಪದ ಗಾಯಪಡಿಸಿ ಕಾರನು ನೀಲ್ಲಿಸದೇ ಹೋದ ಅಪರಾಧ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 77/2018 ಕಲಂ INDIAN MOTOR VEHICLES ACT, 1988 (U/s-134,187); IPC 1860 (U/s-338,279) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.

2.  ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ದಿನಾಂಕ-13-05-2018 ರಂದು ಸಂಜೆ 7-00 ಗಂಟೆಯ ಸುಮಾರಿಗೆ ನೆಲ್ಲಿಹರವಿ ಗ್ರಾಮದ ಪ್ಲಾಟ್ ದಲ್ಲಿರುವ ಬೋರ ಹತ್ತೀರ ಆರೋಪಿತರಾಧ ಮಂಜುನಾಥ ಬಾರಕೇರ, ರೇಣುಕಾ ಬಾರಕೇರ, ದೇವಕ್ಕಾ ಬಾರಕೇರ ಮತ್ತು ಮೈಲಾರಪ್ಪ ಬಾರಕೇರ ಇವರೆಲ್ಲರೂ ಪಿರ್ಯಾಧಿಯ ಹೆಂಡತಿ ಮಹಾದೇವಿ ಇವಳೊಂದಿಗೆ ನೀರು ತುಂಬುವ ಸಲುವಾಗಿ ತಂಟೆ ತೆಗೆದು ಆರೋಪಿ ನಂ 2 & 3 ನೇದವರು ಪಿರ್ಯಾಧಿಗೆ ಕೈಯಿಂದಾ ಹೊಡಿಬಡಿ ಮಾಡುತ್ತಿರುವಾಗ ಬಿಡಿಸಿಕೊಳ್ಳಲು ಬಂದ ಪಿರ್ಯಾಧಿಗೆ ಅವಾಚ್ಯ ಬೈದಾಡಿ ಆರೋಪಿ ನಂ 1 & 4 ನೇದವರು ಕಲ್ಲುಗಳಿಂದಾ ತಲೆಗೆ ಹೊಡೆದು ಗಾಯಪಡಿಸಿ ಇನ್ನೊಮ್ಮೆ ಸಿಕ್ಕರೆ ನಿಮ್ಮನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ ಅಪರಾಧ. ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾ ನಂ. 137/2018 ಕಲಂ IPC 1860 (U/s-323,324,504,506,34) ನೇದ್ದರಲ್ಲಿ ಪ್ರಕರಣ ದಾಖಲಿಸಿದ್ದು ಇರುತ್ತದೆ.