ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Wednesday, May 16, 2018

CRIME INCIDENTS 16-05-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:16-05-2018 ರಂದು ವರದಿಯಾದ ಪ್ರಕರಣಗಳು

1.ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಹಳ್ಳಿಕೇರಿ ಗ್ರಾಮದ ಹತ್ತಿರ ಆರೋಪಿತನಾದ ಕೃಷ್ಣಾ ಕಂದೂರ ಇತನು  ಚಲಾಯಿಸುತ್ತಿದ್ದ ಮೋಟರ್ ಸೈಕಲ್ ನಂಬರ್ KA-25/EA-4998 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಮೋಟರ್ ಸೈಕಲನ್ನು ಅತೀ ವೇಗ ಹಾಗು ಅಲಕ್ಷತನದಿಂದ ಚಾಲನೆ ಮಾಡಿಕೊಂಡು ತನ್ನ ಮುಂದೆ ಹೊರಟ ಮೋಟರ್ ಸೈಕಲ್ಗಳನ್ನು ಓವರ್ಟೇಕ ಮಾಡಿಕೊಂಡು ರಸ್ತೆಯ ಬಲಗಡೆಗೆ ಮೋಟರ್ ಸೈಕಲನ್ನು ಚಾಲನೆ ಮಾಡಿಕೊಂಡು ಬಂದು ರಸ್ತೆಯ ಎಡಸೈಡಿನಲ್ಲಿ ನಾನು ಚಾಲನೆ ಮಾಡುತ್ತಿದ್ದ ಮೋಟರ್ ಸೈಕಲ್ ನಂಬರ್ KA-25/EX-7552 ನೇದ್ದಕ್ಕೆ ತನ್ನ ಮೋಟರ್ ಸೈಕಲನ್ನು ಡಿಕ್ಕಿ ಮಾಡಿ ಅಪಘಾತ ಪಡಿಸಿ ನನ್ನ ಮೋಟರ್ ಸೈಕಲ್ ಹಿಂಬದಿ ಸವಾರ ಪಿರ್ಯಾದಿಯ ತಂದೆಯ ತಲೆಗೆ ಭಾರೀ ಪ್ರಮಾಣದ ಗಾಯ ಪೆಟ್ಟು ಆಗುವಂತೆ ಮಾಡಿ ಉಪಚಾರ ಫಲಿಸದೇ ಮರಣ ಹೊಂದುವಂತೆ ಮಾಡಿದ್ದು ಅಲ್ಲದೇ ಪಿರ್ಯದಿ ಮತ್ತು ತನಗೆ ಸಾದಾ ವ ಭಾರಿ ಗಾಯ ಪಡಿಸಿಕೊಂಡಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 62/2018 ಕಲಂ 279.337.338.304(ಎ) ಹಾಗೂ ವಾಹನ ಕಾಯ್ದೆ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ:ಹಂಗರಕಿ ಗ್ರಾಮದ ಹತ್ತಿರ ಕಲ್ಲಪ್ಪಾ ಹುಲ್ಲಗಣ್ಣವರ ಇತನು ವೀಕ್ಷಣೆ ಮಾಡುತ್ತಾ ಕುಳಿತು ಕೊಂಡಾಗ ಇರದಲ್ಲಿಯ ಆರೋಪಿತರು ಪ್ರಭು ಬೆಲಿಹಾಳ 2.ಶಿವನಗೌಡ ನಾಗನಗೌಡ ಇವರು  ಪಿರ್ಯಾದಿಯ ಮನೆಯ ಮುಂದೆ ನಿಂತು ಅವಾಚ್ಯವಾಗಿ ಬೈದಾಡುತ್ತಾ ಹೊರಗೆ ಬಾ ನಿನ್ನ ಜೀವ ಸಹೀತ ಬಿಡುವದಿಲ್ಲಾ ಅಂತಾ ಬೈದಾಡುತ್ತಿದ್ದಾಗ ಇವರಿಗೆ ಕೂಡಿಕೊಂಡು ಸಮಾಧಾನ ಹೇಳಲು ಹೋದಾಗಅಚ್ಯವಾಗಿ ಬೈದಾಡಿ ಸುರೇಶ ಹುಲಗಣ್ಣವರ ಇವನಿಗೆ ಕೈಯಿಂದ ಬಡಿಗೆಯಿಂದ ಹೊಡಿಬಡಿ ಮಾಡಿದ್ದು ಇರುತ್ತದೆ ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 80/2018 ಕಲಂ 506.34.324.323.ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು  ಇರುತ್ತದೆ

3. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಂದ್ಲಿ ಗ್ರಾಮದ ಕಾಣಿಯಾದ ಶಿಲ್ಪಾ ಕೋಂ ಪರಶುರಾಮ ಶಿಂದೆ 26 ವರ್ಷ ಸಾ; ಸಂಕನಕೊಪ್ಪ ತಾ; ಹಳ್ಳಿಯಾಳ ಹಾಲಿ ವಸ್ತಿ  ಕಂದ್ಲಿ ಇವರು ಫಿರ್ಯಾದಿ ಮಗಳಿದ್ದು ಫಿರ್ಯಾದಿ ಜಮೀನಿಗೆ ಕೆಲಸಕ್ಕೆ ಹೋದಾಗ ಪಕ್ಕದ ಮನೆಯಲ್ಲಿ ನನಗೆ ಮೈಯಲ್ಲಿ ಆರಾಮಿಲ್ಲಾ ಕಲಘಟಗಿಗೆ ಆಸ್ಪತ್ರೆಗೆ ಹೋಗಿ ಬರುತ್ತೆನೆ ಅಂತಾ ಹೇಳಿ ಹೋದವಳು ಇಲ್ಲಿಯವರೆಗೆ ಮರಳಿ ಮನೆಗೆ ಬಾರದೇ ಕಾಣಿಯಾಗಿದ್ದು ಹುಡುಕಿ ಕೊಡಲು ಫಿರ್ಯಾದಿ ನೀಡಿದ್ದು ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 138/2018 ಕಲಂ ಮಹಿಳೆ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ