ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, May 18, 2018

CRIME INCIDENTS 18-05-2018 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:18-05-2018 ರಂದು ವರದಿಯಾದ ಪ್ರಕರಣಗಳು

1. ಅಳ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯ: ಅಳ್ನಾವರ ಗ್ರಾಮದ ಶ್ರೀ ನಾರಾಯಣ ತಂದೆ ಲಕ್ಷ್ಮಣ ಪಠಾಣ ಸಾ ಃ ಬೇಡರಶಿರಗುರ ಪೋಸ್ಟ ಬರ್ಚಿ  ತಾ ಃ ದಾಂಡೇಲಿ ಇವರು ದಿನಾಂಕಃ 26-02-2015 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ಅಳ್ನಾವರ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಹತ್ತಿರ ಇರುವ ಗಾಯತ್ರಿ ಹೋಟೇಲ್ ಮುಂದೆ ತಮ್ಮ ಬಾಬತ್ ಮೋಟಾರ ಸೈಕಲ್ ನಂ. ಕೆಎ-65/ಇ-2642 ಅಃಕಿಃ 24,000/- ರೂ. ಕಿಮ್ಮತ್ತಿನೇದ್ದನ್ನು ಇಟ್ಟು ಚಹಾ ಕುಡಿಯಲು ಹೋದಾಗ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 66/2018 ಕಲಂ 379 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2.ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಮುಂಜಾಗೃತ ಕ್ರಮವಾಗಿ ಗುನ್ನಾನಂ 81/2018.82/2018 ಕಲಂ 107 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರನವನ್ನುದಾಖಲಿಸದ್ದು ಇರುತ್ತದೆ.

3. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯ: ಬರದ್ವಾಡ ಗ್ರಾಮದ ಫಕ್ಕಿರಪ್ಪಾ ಮಾಡಳ್ಳಿ ಇತನ ಮನೆಯ ಬಾಗಿಲದ ಚಿಲಕವನ್ನು ಆರೋಪಿತನಾದ ಬಸವರಾಜ ಈರಪ್ಪ ಹಳ್ಳಿ, ಸಾ: ಬರದ್ವಾಡ, ಈತನು ತೆಗೆದು ಪಿರ್ಯಾದಿಯ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾದಿಯ ಹೆಂಡತಿ ಶ್ರೀಮತಿ ವಿಜಯಲಕ್ಷ್ಮೀ ಕೋಂ ಪಕ್ಕೀರಪ್ಪ ಮಾಡಳ್ಳಿ, ವಯಾ: 39 ವರ್ಷ, ಸಾ: ಬರದ್ವಾಡ ತಾ: ಕುಂದಗೋಳ ಇವಳನ್ನು ಮಾನಭಂಗಪಡಿಸುವ ಉದ್ದೇಶದಿಂದ ಅವಳು ಧರಿಸಿದ್ದ ಪತ್ತಲವನ್ನು ಹಿಡಿದು ಎಳೆದಾಡಿ ಮಾನಭಂಗಪಡಿಸಲು ಪ್ರಯತ್ನಿಸಿದ್ದು ಇರುತ್ತದೆ ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 96/2018 ಕಲಂ 448.354.(ಬಿ) ಐಪಿಸಿ ನೇದ್ದರಲ್ಲಿ ಪ್ರಕಣವನ್ನು ದಾಖಲಿಸಿದ್ದು ಇರುತ್ತದೆ.

4. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ:ದಿನಾಂಕ:17-05-2018 ರಂದು ರಾತ್ರಿ 22-00 ಗಂಟೆಯಿಂದ ದಿನಾಂಕ:18-05-2018 ರಂದು ಬೆಳಗಿನ 06-00 ಗಂಟೆಯ ನಡುವಿನ ಅವದಿಯಲ್ಲಿ ಯಾರೋ ಕಳ್ಳರು ಕಲಘಟಗಿ ಪಟ್ಟಣದ ಜ್ಯೋತಿನಗರದಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿ ಹಾಗೂ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಕೊಠಡಿಯ ಬಾಗಿಲು ಕೀಲಿ ಮುರಿದು ಒಳಪ್ರವೇಶ ಮಾಡಿ ಟ್ರೇಜರಿಯ ಬಾಗಿಲು ಮುರಿದು ಅದರಲ್ಲಿ ಬಂಗಾರದ ಹಾಗೂ ಬೆಳ್ಳಿಯ ಆಭರಣಗಳನ್ನು ಅಕಿ 1.53.000/- ರೂ ಕಿಮ್ಮತ್ತಿನವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 457.380 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ

5. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಶೆರವಾಡ ಗ್ರಾಮದ  ಕಾಣೆಯಾದ ಮೃತ್ಯುಂಜಯ್ ತಂದೆ ಹುಚ್ಚಪ್ಪ ಮತ್ತಿಗಟ್ಟಿ 45 ವರ್ಷ ಸಾ!! ಶರೆವಾಡ ತಾ!! ಹುಬ್ಬಳ್ಳಿ ವಿಪರೀತ ಸರಾಯಿ ಕುಡಿದು ಮನೆಗೆ ಬಂದಿದ್ದರಿಂದ ಪಿರ್ಯಾದಿಯು ಸರಾಯಿ ಕುಡಿಯುವದನ್ನು ಬಿಡು ಅಂತ ಸಿಟ್ಟಿನಿಂದ ಬುದ್ದಿ ಮಾತು ಹೇಳಿದ್ದಕ್ಕೆ ಸಿಟ್ಟಾಗಿ ಮನೆಯಿಂದ ಹೋದವನು ವಾಪಸ್ ಮನೆಗೆ ಬಂದಿರುವದಿಲ್ಲ ಅಂತ ಕಾಣೆಯಾದ್ದು ಇರುತ್ತದೆ ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 142/2018 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

6. ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ:ಬಸಾಪುರ ಗ್ರಾಮದ ಮೃತನಾದ ನಿಂಗಪ್ಪ ತಂದೆ ಚನ್ನಬಸಪ್ಪ ಚವಡಿ ವಯಾ-38 ವರ್ಷ ಸಾ: ಬಸಾಪುರ ತಾ: ನವಲಗುಂದ ಈತನು ಹೋದ ವರ್ಷ ತನ್ನ ಹೊಲದ ಮೇಲೆ ಅಣ್ಣಿಗೇರಿ ಕೆನರಾ ಬ್ಯಾಂಕದಲ್ಲಿ 5 ಲಕ್ಷ 20 ಸಾವಿರ ರೂಪಾಯಿ ಬೆಳೆಸಾಲ ಹಾಗೂ ಬಸಾಪುರ ಸೊಸೈಟಿಯಲ್ಲಿ 25 ಸಾವಿರ ರೂಪಾಯಿ ಬೆಳೆ ಸಾಲವನ್ನು ತೆಗೆದುಕೊಂಡು ಅದನ್ನು ತನ್ನ ಹೊಲಕ್ಕೆ ಬೀಜ ಗೊಬ್ಬರ ಅಂತಾ ಖರ್ಚು ಮಾಡಿದ್ದು ಆದರೆ ಮಳೆ ಆಗದೇ ಬೇಳೆ ಬಾರದ್ದರಿಂದ ಸಾಲವನ್ನು ಹೇಗೆ ತೀರಿಸಬೇಕು ಅಂತಾ ಮಾನಸಿಕ ಮಾಡಿಕೊಂಡು ತನ್ನಷ್ಟಕ್ಕೆ ತಾನೇ ತನ್ನ ಮನೆಯಲ್ಲಿನ ಕಟ್ಟಿಗೆಯ ಜಂತಿಗೆ ಪ್ಲಾಸ್ಟಿಕ ವಾಯರ್ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ ವಿನಃ ಅವನ ಮರಣದಲ್ಲಿ ಯಾವುದೇ ಸಂಶಯ ವಗೈರೆ ಇರುವುದಿಲ್ಲಾ ಅಂತಾ ಫಿಯಾಱಧಿ ನೀಡಿದ್ದು ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಯುಡಿನಂ 10/2018 ಕಲಂ 174 ಸಿ.ಆರ್ ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸದ್ದು ಇರುತ್ತದೆ.