ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Thursday, May 24, 2018

CRIME INCIDENTS 24-05-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:24-05-2018 ರಂದು ವರದಿಯಾದ ಪ್ರಕರಣಗಳು

1. ಕುಂದಗೋಳ ಪೊಲೀಸ ಠಾಣಾ ವ್ಯಾಪ್ತಿಯ: ಕುರಬರ ಓಣೆ ಕುಂದಗೋಳ ಗ್ರಾಮದಲ್ಲಿ  ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಶಿವಪೂರ ಮಹಾಮನೆಯ ಗವಿಯ ಹತ್ತಿರ, ಪಿರ್ಯಾದಿಯ ಅಣ್ಣ ಈರಣ್ಣ ಮಹಾಂತಪ್ಪ ಹೊಂಬಳ, ವಯಾ: 30 ವರ್ಷ, ಸಾ: ಕುರಬಗೇರಿ ಓಣಿ ಕುಂದಗೋಳ ಈತನು ಕುಂದಗೋಳ ಕಲ್ಯಾಣಪೂರದ ಬಸವಣ್ಣಜ್ಜನವರು ಹಾಗೂ ಅವರ ಭಕ್ತಾದಿಗಳ ಸಂಗಡ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಕುರಿತು ಹೋಗುವ ಸಮಯದಲ್ಲಿ ಶಿವಪೂರ ಮಹಾಮನೆಯ ಗವಿಯ ಹತ್ತಿರದ ಸ್ಥಳದಿಂದ ಎಲ್ಲಿಯೋ ಹೋಗಿ ಕಾಣೆಯಾಗಿದ್ದು ಇರುತ್ತದೆ ಈ ಕುರಿತು ಕುಂದಗೋ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 97/2018 ಕಲಂ ಮನುಷ್ಯ ಕಾಣೆ ಪ್ರಕರಣದಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ:ಧಾರವಾಡ ಅಳ್ನಾವರ ರಸ್ತೆ ಪ್ರಭುನಗರ ಹೊನ್ನಾಪೂರ ಗ್ರಾಮದ ವ್ಯೂವ ಹೀಲ ಹೋಟೆಲ ಹತ್ತಿರ  ರಸ್ತೆ ತಿರುವಿನಲ್ಲಿ ಅಳ್ನಾವರ ಕಡೆಯಿಂದ ಧಾರವಾಡ ಕಡೆಗೆ ಕಾರ ನಂ ಕೆಎ 49 ಎಂ 1346 ನೇದ್ದರ ಚಾಲಕ ಅತಿಜೋರಿನಿಂದ ನಿಷ್ಕಾಳಜೀತನದಿಂದ ಮಾನವೀಯ ಪ್ರಾಣಕ್ಕೆ ಅಪಾಯ ವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ತಿರುವಿನಲ್ಲಿ ಕಾರಿನ  ವೇಗ ನಿಯಂತ್ರ ಮಾಡಲಾಗದೇ  ಒಮ್ಮೆಲೇ ರಾಂಗ ಸೈಡಿಗೆ ತೆಗೆದುಕೊಂಡು ಧಾರವಾಡ ಕಡೆಯಿಂದ ಅಳ್ನಾವರ ಕಡೆಗೆ ರಸ್ತೆ ಎಡಸೈಡಿನಲ್ಲಿ ಹೋಗುತ್ತಿದ್ದ ಮೋಟರ ಸೈಕಲ ನಂ ಕೆಎ 25 ಈವಿ 8044 ನೇದ್ದಕ್ಕೆ ಡಿಕ್ಕಿ ಪಡಿಸಿ ಇದೇ ಮಾರ್ಗದಲ್ಲಿ ಸದರಿ ಮೋಟರ ಸೈಕಲ ಹಿಂದೆ ಹೋಗುತ್ತಿದ್ದ ಇನ್ನೋಂದು ಮೋಟರ ಸೈಕಲ ನಂ ಕೆಎ 25 ಎಕ್ಸ 3803 ನೇದ್ದಕ್ಕೆ ಅಪಘಾತ ಪಡಿಸಿ ಎರಡು ಮೋಟರ ಸೈಕಲ ಚಾಲಕರಿಗೆ ಹಾಗೂ ಮೋಟರ ಸೈಕಲ ಹಿಂದೆ ಕುಳಿತವರಿಗೆ  ಸಾದಾ ವ ಭಾರಿ ಗಾಯ ಪಡಿಸಿದ  ಕಾರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಈ ಕುರಿತು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 137/2018 ಕಲಂ 279.337.338 ವಾಹನ ಕಾಯ್ದೆ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.