ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Friday, May 25, 2018

CRIME INCIDENTS 25-05-2018
 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:25-05-2018 ರಂದು ವರದಿಯಾದ ಪ್ರಕರಣಗಳು

1.   ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ: ಅಣ್ಣಿಗೇರಿ ಗ್ರಾಮದ  ಆರೋಪಿತನಾದ ಮಾದಯ್ಯ ಅಣ್ಣಿಗೇರಿ ಉಪನೋಂದಣಿ ಇತನು ಕಚೇರಿಯಲ್ಲಿ ಉಪನೋಂದಣಿ ಅಧಿಕಾರಿ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು ಸದರಿಯವನು ನೊಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂದಿಸಿದ ದಿನಾಂಕ 12-02-2018 ಕ್ಕೆ ಸಂಬಂದಿಸಿದ ಮುದ್ರಾಂಕ ಮತ್ತು ನೊಂದಣಿ ಶುಲ್ಕ ರೂ 2,41,000=00 ಹಾಗೂ ದಿನಾಂಕ 07-05-2018 ಕ್ಕೆ ಸಂಬಂದಿಸಿದ ಮುದ್ರಾಂಕ ಮತ್ತು ನೊಂದಣಿ ಶುಲ್ಕ ರೂ 52,605=00 ಒಟ್ಟು 2,93,605=00 ರೂ ನೇದ್ದನ್ನು ಸರಕಾರಕ್ಕೆ ಜಮಾ ಮಾಡದೇ ದುರುಪಯೊ ಪಡಿಸಿಕೊಂಡು ಅಪರಾಧಿಕ ನಂಬಿಕೆ ದ್ರೊವೆಸಗಿದ್ದು ಇರುತ್ತದೆ ಈ ಕುರಿತು ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 63/2018 ಕಲಂ 408 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಗರಗ ಪೊಲೀಸ್ ಠಾಣಾ ವ್ಯಾಪ್ತಿಯ: ಬೇಲೂರ ಗ್ರಾಮದ ಮೃತ : ಪಕ್ಕೀರಪ್ಪ ತಾಯಿ ಅಡಿವೆವ್ವ ಚಿಕ್ಕಮನಿ. ವಯಾಃ 51 ವರ್ಷ. ಸಾಕೀನಃ ಬೇಲೂರ. ತಾಃಜಿಃ ಧಾರವಾಡ. ಇವನು ಸರಾಯಿ ಕುಡಿತದ ಚಟಕ್ಕೆ ಅಂಟಿಕೊಂಡು ವೀಪರಿತ ಸಾರಾಯಿ ಕುಡಿದು ಬಂದು ಅದರ ನಷೆಯಲ್ಲಿ ತನ್ನ ಮನೆಯ ಪಕ್ಕದಲ್ಲಿರುವ ಮಲ್ಲಪ್ಪ ದಳವಾಯಿ ಸಾಃ ಬೇಲೂರ ಇವರು ಕಟ್ಟಿಸುತ್ತಿರುವ ಹೊಸ ಮನೆಯಲ್ಲಿ ಕಟ್ಟಿಗೆಯ ಬೆಲಗಿಗೆ ಒಂದು ಖಾತಿ ಹಗ್ಗದ ಸಹಾಯದಿಂದ ದಿಃ 24/05/2018 ರಂದು ರಾತ್ರಿ 11.45 ಗಂಟೆಯಿಂದ ದಿಃ 25/05/2018 ರಂದು ನಸುಕಿನ 06.00 ಗಂಟೆ ನಡುವಿನ ಅವಧಿಯಲ್ಲಿ ತನ್ನಷ್ಟಕ್ಕೆ ತಾನೆ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾನೆ ವಿನಃ ಸದರಿಯವ ಸಾವಿನಲ್ಲಿ ಬೇರೆ ಯಾವ ಸಂಶಯ ವಗೈರೆ ಇರುವುದಿಲ್ಲ ಅಂತಾ ಮೃತನ ಮಗ ವರದಿ ಕೊಟ್ಟಿದ್ದುದನ್ನು ದಾಖಲಿಸಿದ್ದು  ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಯುಡಿನಂ 14/2018  ಕಲಂ 174 ಸಿ.ಆರ್.ಪಿ ಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.