ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

ಧಾರವಾಡ ಪೋಲಿಸ್ ಅಧೀಕ್ಷಕರ ಕಛೇರಿ

Monday, May 28, 2018

CRIME INCIDENTS 28-05-2018


 ಧಾರವಾಡ ಜಿಲ್ಲೆಯಲ್ಲಿ ದಿನಾಂಕ:28-05-2018 ರಂದು ವರದಿಯಾದ ಪ್ರಕರಣಗಳು

1. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಕಲಘಟಗಿ ಹುಬ್ಬಳ್ಳಿ ರಸ್ತೆ ಉಗ್ನಿಕೇರಿ ಗ್ರಾಮದ ಸಮಿಫ ರಸ್ತೆ ಮೇಲೆ ಯಾವದೋ ವಾಹನದ ಚಾಲಕನು ತನ್ನ ವಾಹವನ್ನು ಹುಬ್ಬಳ್ಳಿಯಿಂದ ಕಲಘಟಗಿ ಕಡೆಗೆ ಅತಿಜೋರು ಅವಿಚಾರ ಅಲಕ್ಷ್ಯತನದಿಂದ ಮಾನವೀಯ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿಕೊಂಡು ಬಂದು ಅನಾಮದೇಯ ಸುಮಾರು 45 ರಿಂದ 50 ವರ್ಷ ಹೆಣ್ಣು ಮಗಳು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೊರಟವಳಿಗೆ ಅಥವಾ ರಸ್ತೆ ದಾಟುತ್ತಿದ್ದವಳಿಗೆ ಡಿಕ್ಕಿ ಮಾಡಿ ಅಪಘಾತ ಪಡಿಸಿ ಸ್ಥಳದಲ್ಲಿಯೇ ಮರಣ ಪಡಿಸಿ ಬೇರೆ ವಾಹನಗಳು ಶವ ಮೇಲೆ ಹಾಯ್ದು ಹೋಗಿ ಶವ ಗುರುತು ಸಿಗದಂತೆ ಜಜ್ಜಿಹೋಗಲು ಕಾರಣನಾಗಿ ವಾಹನ ಸಮೇತ ಪರಾರಿಯಾದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 149/2018 ಕಲಂ 279.304(ಎ) ವಾಹನ ಕಾಯ್ದೆ 134.187 ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.

2. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯ: ಬಮ್ಮಿಗಟ್ಟಿ ಗ್ರಾಮದ ಪಿರ್ಯಾಧಿ ವಾಸದ ಮನೆಯ ಹತ್ತೀರ  ಆರೋಪಿತರಾದ ಮುಗಪ್ಪಾ ಸಾದರ ಲಿಲಿತಾ ಸಾದರ ಇವರು ಕೂಡಿಕೊಂಡು  ಶಿವಪ್ಪಾ ಸಾದರ ಇವರ ಮನೆಯ ನೀರು ತಮ್ಮ ಮನೆಯೊಳಗೆ ಬರುತ್ತಿದ್ದರಿಂದ ಆ ಮಳೆಯ ನೀರನ್ನು ಒಳಗೆ ಬಾರದೆ ಹಾಗೆ ಕಾಲುವೆ ಮಾಡುತ್ತಿರುವಾಗ ಆರೋಪಿತರು ಬೈದಾಡುತ್ತಾ ಇವನು ಬಡಿಗೆಯಿಂದಾ ಪಿರ್ಯಾದಿಯ ಎಡಭುಜಕ್ಕೆ ಹೊಡೆದು ಪೆಟ್ಟು ಮಾಡಿದ್ದು ಕೈಯಿಂದಾ ಹೊಡಿಬಡಿ ಮಾಡಿ ಇದೊಮದ ಸಾರಿ ಉಳಕೊಂಡಿ ಇನ್ನೊಂದು ಸಾರಿ ಸಿಕ್ರ ನಿನ್ನನ್ನು ಜೀವಂತ ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಗುನ್ನಾನಂ 150/2018 ಕಲಂ 323.324.504.506.34 ಐಪಿಸಿ ನೇದ್ದರಲ್ಲಿ ಪ್ರಕರಣವನ್ನು ದಾಖಲಿಸಿದ್ದು ಇರುತ್ತದೆ.